ಮಂಗಳೂರು: ಸರ್ಕಾರಿ ಜಾಗ ಅತಿಕ್ರಮ ಆರೋಪದಡಿ ಗೋಶಾಲೆಯನ್ನು ನೆಲಸಮ ಮಾಡಿರುವ ಘಟನೆ ಮಂಗಳೂರು ಹೊರವಲಯದ ಕೆಂಜಾರು ಬಳಿಯ ನಡೆದಿದೆ. ಕಪಿಲಾ ಗೋಶಾಲೆ ವಿರುದ್ಧ ಸರ್ಕಾರಿ ಜಾಗ ಅತಿಕ್ರಮಿಸಿದ ಆರೋಪ ಕೇಳಿ ಬಂದಿದೆ. ಹೀಗಾಗಿ ಗೋವುಗಳನ್ನು ಮೇಯಲು ಬಿಟ್ಟಿದ್ದ ವೇಳೆ ಗೋಶಾಲೆಯನ್ನು ನೆಲಸಮ ಮಾಡಲಾಗಿದೆ.
ಕೇಂದ್ರದ ಕೋಸ್ಟ್ ಗಾರ್ಡ್ ತರಬೇತಿ ಅಕಾಡೆಮಿಗಾಗಿ ತೆರವು ಕಾರ್ಯಚರಣೆ ನಡೆಸುತ್ತಿದ್ದು ಸರ್ಕಾರಿ ಜಾಗವನ್ನು ಕಪಿಲಾ ಗೋಶಾಲೆ ಅತಿಕ್ರಮ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಗೋವುಗಳು ಮೇಯಲು ಹೋಗಿದ್ದಾಗ JCBಗಳ ಮೂಲಕ ಗೋಶಾಲೆಯನ್ನು ನೆಲಸಮ ಮಾಡಲಾಗಿದೆ.
ಈ ಹಿಂದೆ 1993ರಲ್ಲೇ ಈ ಜಾಗ ಸ್ವಾಧೀನಕ್ಕೆ ಪಡೆದು ಜಾಗದ ಮಾಲೀಕರಿಗೆ KIADB ಪರಿಹಾರ ಕೊಟ್ಟಿತ್ತು. ಆದ್ರೆ 10 ವರ್ಷಗಳ ಹಿಂದೆ ಈ ಜಾಗವನ್ನು ಪ್ರಕಾಶ್ ಶೆಟ್ಟಿ ಎಂಬುವವರು ಖರೀದಿಸಿ 2013ರಲ್ಲಿ ಗೋಶಾಲೆ ನಿರ್ಮಿಸಿದ್ದರು. ಸದ್ಯ ಈಗ ಈ ಜಮೀನಿನ ಹಳೆಯ ಯಜಮಾನ ಮೃತಪಟ್ಟಿದ್ದು ಪ್ರಕಾಶ್ ಶೆಟ್ಟಿಯ ಇಂಟರ್ ಲಾಕ್ ಫ್ಯಾಕ್ಟರಿ ಕೂಡ ನೆಲಸಮವಾಗಿದೆ.
ಇದನ್ನೂ ಓದಿ: ಗೋಶಾಲೆಯಲ್ಲಿ ಮೇವಿಗೆ ರಾಸುಗಳ ಗೋಳಾಟ