AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರುಕಳಿಸಲಿದ್ಯಾ ಚಿನ್ನದ ನಾಡಿನ ಗತವೈಭವ..! ಸಿದ್ಧತೆ ಹೇಗಿದೆ ನೋಡಿ..

ಕೋಲಾರ: ವಿಶ್ವಕ್ಕೆ ಚಿನ್ನವನ್ನು ಕೊಟ್ಟ ಚಿನ್ನದ ನಾಡಿನಲ್ಲಿ ಎರಡು ದಶಕಗಳ ನಂತರ ಮತ್ತೆ ಚಿನ್ನದ ಗಣಿ ಪುನರಾರಂಭಕ್ಕೆ ತೆರೆಮರೆಯಲ್ಲಿ ತಯಾರಿಗಳು ನಡೆಯುತ್ತಲಿವೆ. ಈಗಾಗಲೇ ಚಿನ್ನದ ಗಣಿಯ ಭೂಮಿ ಹಾಗೂ ಮಣ್ಣಿನ ಪರೀಕ್ಷೆಗಳು ನಡೆಯುತ್ತಿದ್ದು ಚಿನ್ನದ ನಾಡಿನ ಗತ ವೈಭವ ಮತ್ತೆ ಮರುಕಳಿಸುತ್ತಾ ಅನ್ನೋ ನಿರೀಕ್ಷೆ ಗರಿಗೆದರಿವೆ. KGF ಚಿನ್ನದ ಗಣಿ ಪ್ರದೇಶದಲ್ಲಿ ಆರಂಭವಾಗಿದೆ ಮಣ್ಣಿನ ಪರೀಕ್ಷೆ: ಈಗಾಗಲೇ ವಿಜ್ಞಾನಿಗಳು ಭೂಮಿಯ ಒಳಗಿನ ಮಣ್ಣನ್ನು ತೆಗೆದು ಪರೀಕ್ಷೆಗೆ ಒಳಪಡಿಸಿದ್ದಾರೆ. ಮತ್ತೊಂದೆಡೆ ಅಧಿಕಾರಿಗಳು ಸೈನೈಡ್​ ಗುಡ್ಡಗಳ ಮಣ್ಣನ್ನು ಲಾರಿಗಳಲ್ಲಿ ತುಂಬಿಸಿ […]

ಮರುಕಳಿಸಲಿದ್ಯಾ ಚಿನ್ನದ ನಾಡಿನ ಗತವೈಭವ..! ಸಿದ್ಧತೆ ಹೇಗಿದೆ ನೋಡಿ..
ಆಯೇಷಾ ಬಾನು
| Edited By: |

Updated on: Oct 01, 2020 | 11:18 AM

Share

ಕೋಲಾರ: ವಿಶ್ವಕ್ಕೆ ಚಿನ್ನವನ್ನು ಕೊಟ್ಟ ಚಿನ್ನದ ನಾಡಿನಲ್ಲಿ ಎರಡು ದಶಕಗಳ ನಂತರ ಮತ್ತೆ ಚಿನ್ನದ ಗಣಿ ಪುನರಾರಂಭಕ್ಕೆ ತೆರೆಮರೆಯಲ್ಲಿ ತಯಾರಿಗಳು ನಡೆಯುತ್ತಲಿವೆ. ಈಗಾಗಲೇ ಚಿನ್ನದ ಗಣಿಯ ಭೂಮಿ ಹಾಗೂ ಮಣ್ಣಿನ ಪರೀಕ್ಷೆಗಳು ನಡೆಯುತ್ತಿದ್ದು ಚಿನ್ನದ ನಾಡಿನ ಗತ ವೈಭವ ಮತ್ತೆ ಮರುಕಳಿಸುತ್ತಾ ಅನ್ನೋ ನಿರೀಕ್ಷೆ ಗರಿಗೆದರಿವೆ.

KGF ಚಿನ್ನದ ಗಣಿ ಪ್ರದೇಶದಲ್ಲಿ ಆರಂಭವಾಗಿದೆ ಮಣ್ಣಿನ ಪರೀಕ್ಷೆ: ಈಗಾಗಲೇ ವಿಜ್ಞಾನಿಗಳು ಭೂಮಿಯ ಒಳಗಿನ ಮಣ್ಣನ್ನು ತೆಗೆದು ಪರೀಕ್ಷೆಗೆ ಒಳಪಡಿಸಿದ್ದಾರೆ. ಮತ್ತೊಂದೆಡೆ ಅಧಿಕಾರಿಗಳು ಸೈನೈಡ್​ ಗುಡ್ಡಗಳ ಮಣ್ಣನ್ನು ಲಾರಿಗಳಲ್ಲಿ ತುಂಬಿಸಿ ಕಳಿಸುತ್ತಿದ್ದಾರೆ. ಇಂಥಾದೊಂದು ಬೆಳವಣಿಗೆ ಸದ್ಯ ಕೋಲಾರ ಜಿಲ್ಲೆ KGFನಲ್ಲಿ ಕಂಡು ಬರುತ್ತಿದೆ. ಈ ನೆಲಕ್ಕೆ ಒಂದು ಕಾಲದಲ್ಲಿ ಇಡೀ ವಿಶ್ವಕ್ಕೆ ಚಿನ್ನವನ್ನು ಕೊಟ್ಟಂತಹ ಇತಿಹಾಸವೇ ಇದೆ. ಆದ್ರೆ ಚಿನ್ನ ಬರಿದಾಗಿ ಎರಡು ದಶಕಗಳೇ ಕಳೆದಿವೆ ಸಾವಿರಾರು ಮಂದಿ ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದಾರೆ.

ಯಂತ್ರ ಚಾಲೂ ಮಾತೇ ಇಲ್ಲ; ಎಲ್ಲಾ ಕಣ್ಣೊರೆಸುವ ತಂತ್ರವೇ ಇದುವರೆಗೂ.. ಸರ್ಕಾರಗಳು ನಾನಾ ಯೋಜನೆಗಳನ್ನ ಜಾರಿ ಮಾಡುವ ಭರವಸೆಗಳನ್ನ ನೀಡುತ್ತಾ ಕಣ್ಣೊರೆಸುವ ತಂತ್ರ ಮಾಡಿಕೊಂಡು ಬಂದಿದೆ. ಆದ್ರೆ ಇದುವರೆಗೂ KGF ಗಣಿ ಪುನಾರಂಭ ಆಗಲೇ ಇಲ್ಲ. ಸದ್ಯ ಈಗ ಸರ್ಕಾರ ಕೈಗಾರಿಕಾ ಟೌನ್ ಶಿಫ್, ಮತ್ತು ಚಿನ್ನದ ಗಣಿ ಮತ್ತೆ ಓಪನ್ ಮಾಡಲು ಮುಂದಾಗಿದೆ. ಈಗಾಗಲೇ ಚಿನ್ನದ ನಿಕ್ಷೇಪಗಳು ಎಲ್ಲೆಲ್ಲಿ ಇದೆ ಅದರಲ್ಲಿ ಚಿನ್ನದ ಸಾಂದ್ರತೆ ಎಷ್ಟಿದೆ ಅನ್ನೋದನ್ನು ಪರೀಕ್ಷೆ ನಡೆಸಿದ್ದ ಗಣಿ ಇಲಾಖೆ ಈಗ ಮತ್ತೆ ಚಿನ್ನವನ್ನು ಬೇರ್ಪಡಿಸಿ ಹಾಕಲಾಗಿದ್ದ ಸೈನೆಡ್​ ಗುಡ್ಡಗಳಲ್ಲಿ ಚಿನ್ನದ ಅಂಶ ಎಷ್ಟಿದೆ ಅನ್ನೋದನ್ನ ಪರೀಕ್ಷೆ ನಡೆಸಲು ಮಣ್ಣನ್ನು ಹೈದರಾಬಾದ್​ನ ರಾಷ್ಟ್ರೀಯ ಮಣ್ಣು ಮತ್ತು ಖನೀಜ ಪರಿಕ್ಷಾ ಕೇಂದ್ರಕ್ಕೆ ಕಳುಹಿಸಿದೆ.

ಆರು ತಿಂಗಳಲ್ಲಿ ವರದಿ ಬರುವ ನಿರೀಕ್ಷೆ ಇದೆ?

ಸದ್ಯ ಕೆಜಿಎಫ್​ ಭೂಮಿಯ ಮಣ್ಣಿನಲ್ಲಿ ಇರುವ ಖನಿಜದ ಅಂಶ ಹಾಗೂ ಚಿನ್ನದ ಅಂಶ ಎಷ್ಟಿದೆ ಅನ್ನೋದರ ಬಗ್ಗೆ ಪರೀಕ್ಷೆ ನಡೆಸಿ 6 ತಿಂಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈಗಾಗಲೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್​ ಕೆಜಿಎಫ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಾಪಾಸಾಗಿದ್ದು, ಒಂದು ವೇಳೆ ಚಿನ್ನದ ನಿಕ್ಷೇಪ ವಿರುವುದು ಖಚಿತವಾದ್ರೆ ಚಿನ್ನದ ಗಣಿ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

 25 ಸಾವಿರ ಕೋಟಿ ಬೆಲೆ ಬಾಳುವಷ್ಟಿದೆ ಇದೆಲ್ಲಾ ಅಂದುಕೊಂಡಂತೆ ನಡೆದರೆ ನಗರದಲ್ಲಿ ಇರುವ ಸೈನೆಡ್​ ಗುಡ್ಡಗಳಲ್ಲಿ ಟಂಗ್​ ಸ್ಟ್​ನ್​, ಪೊಲಾಡಿಯಂ ಮತ್ತು ಚಿನ್ನದ ಅಂಶ ಇರುವ ಮಾಹಿತಿ ಇದ್ದು, ಇದು ಸುಮಾರು 25 ಸಾವಿರ ಕೋಟಿ ಬೆಲೆ ಬಾಳುವಷ್ಟಿದೆ ಅನ್ನೋ ಮಾತು ಕೂಡಾ ಕೇಳಿಬರ್ತಿದೆ. ಸದ್ಯ ಶೀಘ್ರದಲ್ಲಿಯೇ ಕೆಜಿಎಫ್​ ನಗರ ಮತ್ತೆ ಹಿಂದಿನ ಗತವೈಭವಕ್ಕೆ ಮರಳುತ್ತದೆ ಅನ್ನೋದು ಸ್ಥಳೀಯರ ನಿರೀಕ್ಷೆ.

ಪರೀಕ್ಷೆ ನಡೆಸುತ್ತಿರುವ ಸ್ಥಳಕ್ಕೆ ಸಂಸದರ ಭೇಟಿ: ಇನ್ನು ವಿಜ್ಞಾನಿಗಳ ತಂಡ ಮಣ್ಣು ಪರೀಕ್ಷೆ ನಡೆಸುತ್ತಿರುವ ಪ್ರದೇಶಕ್ಕೆ ಸಂಸದ ಮುನಿಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಆದಷ್ಟು ಬೇಗ ವರದಿ ಬಂದರೆ ಕೇಂದ್ರ ಸರ್ಕಾರ ಮತ್ತೆ ಚಿನ್ನದ ಗಣಿಯನ್ನು ಪುನರಾರಂಭಿಸುವ ನಿರೀಕ್ಷೆ ಇದೆ ಎಂದಿದ್ದಾರೆ. ಇದು ಈ ಭಾಗದ ಜನರಲ್ಲಿ ಉತ್ಸಾಹ ಗರಿಗೆದರುವಂತೆ ಮಾಡಿದೆ.