ಕೊರೊನಾ ವಾರಿಯರ್‌ ನರ್ಸ್ ಮೇಲೆ ಗುಂಪು ಕಟ್ಟಿಕೊಂಡು ಬಂದು ಹಲ್ಲೆ

| Updated By: ಸಾಧು ಶ್ರೀನಾಥ್​

Updated on: Oct 22, 2020 | 1:23 PM

ಬಾಗಲಕೋಟೆ: ಕೊರೊನಾ ವಾರಿಯರ್‌ ನರ್ಸ್ ಮೇಲೆ ಗುಂಪಿನಿಂದ ಹಲ್ಲೆ ನಡೆದಿರುವ ಘಟನೆ ಬಾದಾಮಿ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ ಪರಿಣಾಮ ನರ್ಸ್ ರಾಜೇಶ್ವರಿ ಮ್ಯಾಗಿನಮನಿ (47) ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕೆರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸರ್ಕಾರಿ ಮಹಿಳಾ ಕಿರಿಯ ಆರೋಗ್ಯ ಸಹಾಯಕಿಯಾಗಿ ರಾಜೇಶ್ವರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊವಿಡ್ ಟೆಸ್ಟ್‌ ವರದಿಯಲ್ಲಿ ಇಂದ್ರವ್ವಗೆ ನೆಗೆಟಿವ್ ಬಂದಿತ್ತು. ಆದರೆ ಇಂದ್ರವ್ವ ಅರಹುಣಶಿ ಎಂಬುವರಿಗೆ ಕೊವಿಡ್ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯಲ್ಲಿ ಕ್ವಾರಂಟೈನ್ ಆಗಲು […]

ಕೊರೊನಾ ವಾರಿಯರ್‌ ನರ್ಸ್ ಮೇಲೆ ಗುಂಪು ಕಟ್ಟಿಕೊಂಡು ಬಂದು ಹಲ್ಲೆ
Follow us on

ಬಾಗಲಕೋಟೆ: ಕೊರೊನಾ ವಾರಿಯರ್‌ ನರ್ಸ್ ಮೇಲೆ ಗುಂಪಿನಿಂದ ಹಲ್ಲೆ ನಡೆದಿರುವ ಘಟನೆ ಬಾದಾಮಿ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ ಪರಿಣಾಮ ನರ್ಸ್ ರಾಜೇಶ್ವರಿ ಮ್ಯಾಗಿನಮನಿ (47) ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಕೆರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸರ್ಕಾರಿ ಮಹಿಳಾ ಕಿರಿಯ ಆರೋಗ್ಯ ಸಹಾಯಕಿಯಾಗಿ ರಾಜೇಶ್ವರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊವಿಡ್ ಟೆಸ್ಟ್‌ ವರದಿಯಲ್ಲಿ ಇಂದ್ರವ್ವಗೆ ನೆಗೆಟಿವ್ ಬಂದಿತ್ತು. ಆದರೆ ಇಂದ್ರವ್ವ ಅರಹುಣಶಿ ಎಂಬುವರಿಗೆ ಕೊವಿಡ್ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯಲ್ಲಿ ಕ್ವಾರಂಟೈನ್ ಆಗಲು ನರ್ಸ್‌ ರಾಜೇಶ್ವರಿ ಹೇಳಿದ್ದರು.

ಆದರೆ ಕುಟುಂಬಸ್ಥರು ಊರಲ್ಲಿ ನಮ್ಮ ಮರ್ಯಾದೆ ಹಾಳು ಮಾಡಿದೆ ಎಂದು ನರ್ಸ್ ಮೇಲೆ ಹಲ್ಲೆ ನಡೆಸಿದ್ದಾರೆ. ಗುಂಪಿನ ಜೊತೆ ಬಂದು ದೊಣ್ಣೆ ಹಿಡಿದು ಹೊಡೆದಿದ್ದಾರೆ. ಈ ವೇಳೆ ನರ್ಸ್ ರಾಜೇಶ್ವರಿ ಕುಟುಂಬದವರು ವಿಡಿಯೋ ಮಾಡಲು ಮುಂದಾದ್ರು. ಅದನ್ನು ಗಮನಿಸಿದ ಆರೋಪಿಗಳು ವಿಡಿಯೋ ಮಾಡುತ್ತೀರಾ ಎಂದು ಹಲ್ಲೆ ನಡೆಸಿದ್ದಾರೆ.

ನಾಲ್ವರ ವಿರುದ್ಧ ಎಫ್‌ಐಆರ್
ನರ್ಸ್‌ ರಾಜೇಶ್ವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಂದ್ರವ್ವ ಅರಹುಣಶಿ, ಪರಶುರಾಮ ನಾಯ್ಕರ್, ದೇವಕೆವ್ವ ನಾಯ್ಕರ್, ಗೋಪಾಲ ನಾಯ್ಕರ್‌ ಹಲ್ಲೆ ಮಾಡಿದವರು ಎಂದು ಗುರುತಿಸಲಾಗಿದ್ದು ನಾಲ್ವರ ವಿರುದ್ಧ ಕೆರೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.