ಫೆಬ್ರವರಿ ತಿಂಗಳಲ್ಲಿ 1.13 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹ

2021ರ ಫೆಬ್ರವರಿಯಲ್ಲಿ ಒಟ್ಟು 1,13,143 ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹವಾಗಿದೆ. ಜನವರಿ ತಿಂಗಳಲ್ಲಿ ಇದರ ಪ್ರಮಾಣ 1.19 ಲಕ್ಷ ಕೋಟಿ ಇತ್ತು.

ಫೆಬ್ರವರಿ ತಿಂಗಳಲ್ಲಿ 1.13 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹ
ಸಾಂದರ್ಭಿಕ ಚಿತ್ರ

Updated on: Mar 01, 2021 | 7:29 PM

ನವದೆಹಲಿ: ಕೊರೊನಾ ಸೋಂಕಿನ ಅಬ್ಬರ ಕಡಿಮೆ ಆಗುತ್ತಿದೆ. ದೇಶಾದ್ಯಂತ ಕೊರೊನಾ ಲಸಿಕೆ ಕೂಡ ನೀಡಲಾಗುತ್ತಿದೆ. ಇದರ ಜತೆ ಜತೆಗೆ ಎಲ್ಲಾ ಆರ್ಥಿಕ ಚಟುವಟಿಕೆಗಳು ರೀ-ಓಪನ್​ ಆಗಿದೆ. ಹೀಗಾಗಿ, ಜಿಎಸ್​ಟಿ ಸಂಗ್ರಹ ಹೆಚ್ಚುತ್ತಿದೆ. ಅಕ್ಟೋಬರ್​​​​ ತಿಂಗಳಿಂದ ಇಲ್ಲಿಯವರೆಗೆ ಪ್ರತಿ ತಿಂಗಳು 1 ಲಕ್ಷ ಕೋಟಿಗೂ ಮೀರಿ ಜಿಎಸ್​ಟಿ ಸಂಗ್ರಹವಾಗುತ್ತಿದೆ. ಅಂತೆಯೇ ಫೆಬ್ರವರಿ​ ತಿಂಗಳಲ್ಲೂ ಜಿಎಸ್​ಟಿ ಸಂಗ್ರಹಣೆ 1.13 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ ಎಂಬುದರ ಸಂಕೇತ ಇದು ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

2021ರ ಫೆಬ್ರವರಿಯಲ್ಲಿ ಒಟ್ಟು 1,13,143 ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹವಾಗಿದೆ. ಜನವರಿ ತಿಂಗಳಲ್ಲಿ ಇದರ ಪ್ರಮಾಣ 1.19 ಲಕ್ಷ ಕೋಟಿ ಇತ್ತು. ಕಳೆದ​ ತಿಂಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಜಿಎಸ್​ಟಿ ಸಂಗ್ರಗ ಕೊಂಚ ಇಳಿಕೆ ಆಗಿದೆ.

ಕೊರೊನಾ ವೈರಸ್​, ನಕಲಿ ಬಿಲ್​ಗಳು ಸೇರಿದಂತೆ ಅನೇಕ ಕಾರಣಗಳಿಂದ ಜಿಎಸ್​ಟಿ ಸಂಗ್ರಹದಲ್ಲಿ ಕುಸಿತ ಕಂಡಿತ್ತು. ಆದರೆ, ಜಿಎಸ್​ಟಿ ಪ್ರಕ್ರಿಯೆಲ್ಲಿ ಸರ್ಕಾರ ಸಾಕಷ್ಟು ಬದಲಾವಣೆ ತಂದಿತ್ತು. ಹೀಗಾಗಿ, ಜಿಎಸ್​ಟಿ ಸಂಗ್ರಹದಲ್ಲಿ ಏರಿಕೆ ಕಂಡಿದೆ ಹಣಕಾಸು ಸಚಿವಾಲಯ ಸುತ್ತೋಲೆಯಲ್ಲಿ ತಿಳಿಸಿದೆ.

2017ರ ಜುಲೈನಲ್ಲಿ ಜಿಎಸ್​ಟಿ ಜಾರಿಗೆ ಬಂದಿತ್ತು. ಜನವರಿ​ 2021ರಲ್ಲಿ ಜಿಎಸ್​ಟಿ ಸಂಗ್ರಹಣೆ ಅತ್ಯಂತ ಹೆಚ್ಚಿನ ಸಂಗ್ರಹಣೆ ಆಗಿತ್ತು. ಡಿಸೆಂಬರ್​ನಲ್ಲಿ 1.15 ಕೋಟಿ ಜಿಎಸ್​ಟಿ ಸಂಗ್ರಹವಾಗಿತ್ತು. ಇದು ಇತಿಹಾಸದಲ್ಲೇ ಅತ್ಯಧಿಕ ಜಿಎಸ್​ಟಿ ಕಲೆಕ್ಷನ್​ ಆಗಿದೆ. ಕಳೆದ ಏಪ್ರಿಲ್​ನಲ್ಲಿ ಕೇವಲ 32 ಸಾವಿರ ಕೋಟಿ ಜಿಎಸ್​ಟಿ ಸಂಗ್ರಹವಾಗಿತ್ತು.

ಇದನ್ನೂ ಓದಿ: GST ಸಂಗ್ರಹದಲ್ಲಿ ಗಣನೀಯ ಹೆಚ್ಚಳ: ಡಿಸೆಂಬರ್​​ನಲ್ಲೇ ಹೆಚ್ಚು ತೆರಿಗೆ ಕಲೆಕ್ಟ್​ ಆಗಿರೋದು!

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us