GST ಸಂಗ್ರಹದಲ್ಲಿ ಗಣನೀಯ ಹೆಚ್ಚಳ: ಡಿಸೆಂಬರ್ನಲ್ಲೇ ಹೆಚ್ಚು ತೆರಿಗೆ ಕಲೆಕ್ಟ್ ಆಗಿರೋದು!
ಕಳೆದ ಮೂರು ತಿಂಗಳಿಂದ ಜಿಎಸ್ಟಿ ಸಂಗ್ರಹಣೆ ನಿರಂತರವಾಗಿ ಏರಿಕೆ ಕಾಣುತ್ತಿದೆ. ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹಣೆ 1 ಲಕ್ಷ ಕೋಟಿಯ ಗಡಿ ದಾಟಿದೆ ಎಂದು ಹಣಕಾಸು ಸಚಿವಾಲಯ ಖುಷಿ ವ್ಯಕ್ತಪಡಿಸಿದೆ.
ನವದೆಹಲಿ: ಡಿಸೆಂಬರ್ ತಿಂಗಳ ಜಿಎಸ್ಟಿ ಸಂಗ್ರಹಣೆ 1.15 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ ಎಂಬುದರ ಸಂಕೇತ ಇದು ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಕಳೆದ ಮೂರು ತಿಂಗಳಿಂದ ಜಿಎಸ್ಟಿ ಸಂಗ್ರಹಣೆ ನಿರಂತರವಾಗಿ ಏರಿಕೆ ಕಾಣುತ್ತಿದೆ. ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹಣೆ 1 ಲಕ್ಷ ಕೋಟಿ ರೂ. ಗಡಿ ದಾಟಿದೆ ಎಂದು ಹಣಕಾಸು ಸಚಿವಾಲಯ ಖುಷಿ ವ್ಯಕ್ತಪಡಿಸಿದೆ.
2020ರ ಡಿಸೆಂಬರ್ನಲ್ಲಿ ಒಟ್ಟು 1,15,174 ಕೋಟಿ ಜಿಎಸ್ಟಿ ಸಂಗ್ರಹವಾಗಿದೆ. ನವೆಂಬರ್ನಲ್ಲಿ ಇದರ ಪ್ರಮಾಣ 1.04 ಲಕ್ಷ ಕೋಟಿ ಇತ್ತು. ನವೆಂಬರ್ ತಿಂಗಳಿಗೆ ಹೋಲಿಕೆ ಮಾಡಿದರೆ ಶೇ.12 ಏರಿಕೆ ಕಂಡಂತೆ ಆಗಿದೆ ಎಂದು ಸರ್ಕಾರ ತಿಳಿಸಿದೆ.
ಕಳೆದ 21 ತಿಂಗಳುಗಳಿಂದ ಮಾಸಿಕ ಆದಾಯದಲ್ಲಿ ಇದು ಅತ್ಯಧಿಕ ಸಂಗ್ರಹಣೆ ಆಗಿದೆ. ಕೊರೊನಾ ವೈರಸ್, ನಕಲಿ ಬಿಲ್ಗಳು ಸೇರಿದಂತೆ ಅನೇಕ ಕಾರಣಗಳಿಂದ ಜಿಎಸ್ಟಿ ಸಂಗ್ರಹದಲ್ಲಿ ಕುಸಿತ ಕಂಡಿತ್ತು. ಜಿಎಸ್ಟಿ ಪ್ರಕ್ರಿಯೆಲ್ಲಿ ನಾವು ಸಾಕಷ್ಟು ಬದಲಾವಣೆ ಮಾಡಿದ್ದೇವೆ ಎಂದು ಹಣಕಾಸು ಸಚಿವಾಲಯ ಸುತ್ತೋಲೆಯಲ್ಲಿ ತಿಳಿಸಿದೆ.
2017ರ ಜುಲೈನಲ್ಲಿ ಜಿಎಸ್ಟಿ ಜಾರಿಗೆ ಬಂದಿತ್ತು. ಡಿಸೆಂಬರ್ 2020ರ ಜಿಎಸ್ಟಿ ಸಂಗ್ರಹಣೆ ಅತ್ಯಂತ ಹೆಚ್ಚಿನ ಸಂಗ್ರಹಣೆ ಆಗಿದೆ. 2019ರ ಏಪ್ರಿಲ್ನಲ್ಲಿ 1,13,866 ಕೋಟಿ ಜಿಎಸ್ಟಿ ಸಂಗ್ರಹವಾಗಿತ್ತು. ಇದು ಇತಿಹಾಸದಲ್ಲೇ ಅತ್ಯಧಿಕ ಜಿಎಸ್ಟಿ ಕಲೆಕ್ಷನ್ ಆಗಿದೆ. ಕಳೆದ ಏಪ್ರಿಲ್ನಲ್ಲಿ ಕೇವಲ 32 ಸಾವಿರ ಕೋಟಿ ಜಿಎಸ್ಟಿ ಸಂಗ್ರಹವಾಗಿತ್ತು.