ಪಾನ್​ಶಾಪ್ ಬಂದ್ ಆದ್ರೆ ಏನಂತೆ? ಮಾಸ್ಕ್​ ಅಪ್ಪೋ ಮಾಸ್ಕು ಅಂತಾ ಹೊರಟೇಬಿಟ್ಟ ಇವ..

ಧಾರವಾಡ: ಕೊರೊನಾ ಮಹಾಮಾರಿಯಿಂದಾಗಿ ಲಾಕ್​ಡೌನ್ ಆಗಿ ಬಹುತೇಕ ಉದ್ಯಮಗಳು ಸಂಪೂರ್ಣವಾಗಿ ನೆಲಕಚ್ಚಿ ಹೋಗಿವೆ. ಅದರಲ್ಲೂ ಸಣ್ಣ ಸಣ್ಣ ಅಂಗಡಿಕಾರರಂತೂ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಸರ್ಕಾರ ಏನೆಲ್ಲಾ ಪ್ಯಾಕೇಜ್​ಗಳನ್ನು ಘೋಷಿಸಿದರೂ ಅವೆಲ್ಲ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅನ್ನುವಂತಾಗಿದೆ. ಇದೀಗ ಲಾಕ್​ಡೌನ್ ಸಡಿಲಿಕೆಯಾದರೂ ಅದರಿಂದ ಹೆಚ್ಚೇನೂ ಪರಿಣಾಮ ಬೀರಿಲ್ಲ. ಆತ್ಮನಿರ್ಭರ ಪರಿಕಲ್ಪನೆ ಸಾಕಾರಗೊಳಿಸಿದ ವಿಶೇಷ ಚೇತನ ಏಕೆಂದರೆ ಜನರಿಗೆ ಉದ್ಯೋಗವೇ ಇಲ್ಲದ್ದಕ್ಕೆ ಹಣ ಖರ್ಚು ಮಾಡಲು ಹೊರಗೆ ಬಾರದೇ ಹೋಟೆಲ್, ಪಾನ್ ಶಾಪ್ ಸೇರಿದಂತೆ ಅನೇಕ ವ್ಯಾಪಾರಗಳು ನೆಲಕಚ್ಚಿವೆ. […]

ಪಾನ್​ಶಾಪ್ ಬಂದ್ ಆದ್ರೆ ಏನಂತೆ? ಮಾಸ್ಕ್​ ಅಪ್ಪೋ ಮಾಸ್ಕು ಅಂತಾ ಹೊರಟೇಬಿಟ್ಟ ಇವ..
Follow us
ಸಾಧು ಶ್ರೀನಾಥ್​
|

Updated on: Jun 29, 2020 | 3:09 PM

ಧಾರವಾಡ: ಕೊರೊನಾ ಮಹಾಮಾರಿಯಿಂದಾಗಿ ಲಾಕ್​ಡೌನ್ ಆಗಿ ಬಹುತೇಕ ಉದ್ಯಮಗಳು ಸಂಪೂರ್ಣವಾಗಿ ನೆಲಕಚ್ಚಿ ಹೋಗಿವೆ. ಅದರಲ್ಲೂ ಸಣ್ಣ ಸಣ್ಣ ಅಂಗಡಿಕಾರರಂತೂ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಸರ್ಕಾರ ಏನೆಲ್ಲಾ ಪ್ಯಾಕೇಜ್​ಗಳನ್ನು ಘೋಷಿಸಿದರೂ ಅವೆಲ್ಲ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅನ್ನುವಂತಾಗಿದೆ. ಇದೀಗ ಲಾಕ್​ಡೌನ್ ಸಡಿಲಿಕೆಯಾದರೂ ಅದರಿಂದ ಹೆಚ್ಚೇನೂ ಪರಿಣಾಮ ಬೀರಿಲ್ಲ.

ಆತ್ಮನಿರ್ಭರ ಪರಿಕಲ್ಪನೆ ಸಾಕಾರಗೊಳಿಸಿದ ವಿಶೇಷ ಚೇತನ ಏಕೆಂದರೆ ಜನರಿಗೆ ಉದ್ಯೋಗವೇ ಇಲ್ಲದ್ದಕ್ಕೆ ಹಣ ಖರ್ಚು ಮಾಡಲು ಹೊರಗೆ ಬಾರದೇ ಹೋಟೆಲ್, ಪಾನ್ ಶಾಪ್ ಸೇರಿದಂತೆ ಅನೇಕ ವ್ಯಾಪಾರಗಳು ನೆಲಕಚ್ಚಿವೆ. ಇಂಥ ವೇಳೆಯಲ್ಲಿ ಕೊರೊನಾ ಮಹಾಮಾರಿಯನ್ನೇ ಮುಂದಿಟ್ಟುಕೊಂಡು ಪ್ರಧಾನಿ ಮೋದಿಯವರು ಹೇಳಿರೋ ಆತ್ಮನಿರ್ಭರ ಪರಿಕಲ್ಪನೆಯನ್ನು ಧಾರವಾಡದ ವಿಶೇಷಚೇತನ ವ್ಯಕ್ತಿಯೊಬ್ಬ ಸಾಕಾರಗೊಳಿಸಿದ್ದಾರೆ.

ಪಾನ್​ಶಾಪ್ ಸಂಪೂರ್ಣವಾಗಿ ಬಂದ್ ಧಾರವಾಡದ ಟಿಕಾರೆ ರಸ್ತೆಯ ನಿಜಾಮುದ್ದೀನ್ ಬಟ್ಲರ್ ಅನ್ನೋ 36 ವರ್ಷ ವಯಸ್ಸಿನ ವಿಶೇಷ ಚೇತನ ವ್ಯಕ್ತಿ ಹಲವಾರು ವರ್ಷಗಳಿಂದ ನಗರದ ಸುಭಾಷ್ ರಸ್ತೆಯಲ್ಲಿ ಚಿಕ್ಕದೊಂದು ಪಾನ್ ಶಾಪ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದ ನಿಜಾಮುದ್ದೀನ್ ಕುಟುಂಬಕ್ಕೆ ಕೊರೊನಾ ಮಹಾಮಾರಿ ದೊಡ್ಡ ಹೊಡೆದ ನೀಡಿತು. ಪಾನ್​ಶಾಪ್ ಸಂಪೂರ್ಣವಾಗಿ ಬಂದ್ ಆಗಿ ಕುಟುಂಬ ನಿರ್ವಹಣೆಯೇ ಕಷ್ಟವಾಯಿತು.

ಮೊದಲೇ ವಿಶೇಷ ಚೇತನ. ಅಂಥದ್ದರಲ್ಲಿ ಪಾನ್ ಶಾಪ್ ಬಂದ್ ಆಗಿದ್ದು ಮತ್ತೊಂದು ಹೊಡೆತ. ಇದೇ ವೇಳೆ ಜಾಣತನ ಮೆರೆದ ನಿಜಾಮುದ್ದೀನ್ ಕೊರೊನಾ ಸಂದರ್ಭದಲ್ಲಿ ಅತಿ ಹೆಚ್ಚು ಬೇಡಿಕೆ ಇರೋ ಮಾಸ್ಕ್​ಗಳನ್ನು ಮನೆಯಲ್ಲಿಯೇ ತಯಾರಿಸಿದರು. ಸರ್ಕಾರದಿಂದ ನೀಡಲಾಗಿದ್ದ ಮೂರು ಗಾಲಿಯ ಬೈಕ್​ನ ಹಿಂದಿನ ಭಾಗದಲ್ಲಿ ಸ್ಟ್ಯಾಂಡ್ ಕಟ್ಟಿದರು. ಆ ಸ್ಟ್ಯಾಂಡ್​ಗೆ ಮಾಸ್ಕ್​ಗಳನ್ನು ತೂಗು ಹಾಕಿಕೊಂಡು ನಗರದಲ್ಲಿ ತಿರುಗಾಡಲು ಶುರು ಮಾಡಿದರು.

ಇದನ್ನು ಗಮನಿಸಿದ ಸಾರ್ವಜನಿಕರು ಇವರ ಬಳಿ ಮಾಸ್ಕ್ ಖರೀದಿಸಲು ಶುರು ಮಾಡಿದರು. ಒಂದೆರಡು ದಿನಗಳು ಕಳೆಯುತ್ತಿದ್ದಂತೆಯೇ ಸಾಕಷ್ಟು ಪ್ರಮಾಣದಲ್ಲಿ ಮಾಸ್ಕ್​ಗಳು ಮಾರಾಟವಾಗಿ, ನಿಜಾಮುದ್ದೀನ್ ಅವರ ಆತ್ಮವಿಶ್ವಾಸ ಹೆಚ್ಚಾಗತೊಡಗಿತು. ಆಗ ಬಗೆ ಬಗೆಯ ಮಾಸ್ಕ್​ಗಳನ್ನು ತಯಾರಿಸಿ ಮಾರುಕಟ್ಟೆಗೆ ತಂದರು. ಪಾನ್​ಶಾಪ್​ನಲ್ಲಿ ನಿತ್ಯವೂ ಎರಡು ಸಾವಿರ ರೂಪಾಯಿ ಗಳಿಸುತ್ತಿದ್ದ ನಿಜಾಮುದ್ದೀನ್ ಅವರಿಗೆ ಇದೀಗ ಅದರ ಅರ್ಧ ಭಾಗದಷ್ಟು ಆದಾಯ ಮಾಸ್ಕ್​ನಿಂದ ಬರತೊಡಗಿದೆ.

ಸದ್ಯಕ್ಕೆ ಮನೆಯನ್ನು ನಡೆಸುವಷ್ಟು ಆದಾಯದಿಂದಾಗಿ ಮತ್ತೆ ನೆಮ್ಮದಿ ಕಂಡುಕೊಂಡಿದ್ದಾರೆ. ಕೊಂಚ ಜಾಣತನದೊಂದಿಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಂಡರೆ ಹೇಗೆ ಬದುಕನ್ನು ರೂಪಿಸಿಕೊಳ್ಳಬಹುದು ಅನ್ನೋದಕ್ಕೆ ಈ ನಿಜಾಮುದ್ದೀನ್ ಅವರೇ ಸಾಕ್ಷಿ. -ನರಸಿಂಹಮೂರ್ತಿ ಪ್ಯಾಟಿ

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ