ಮದುವೆ ಫೋಟೋ, ವಿಡಿಯೋ ದಾಖಲೆ ಸಹಿತ ಕೋರ್ಟ್‌ಗೆ ತೆರಳಿದ ತಹಶೀಲ್ದಾರ್

  • TV9 Web Team
  • Published On - 10:49 AM, 16 Jun 2020
ಮದುವೆ ಫೋಟೋ, ವಿಡಿಯೋ ದಾಖಲೆ ಸಹಿತ ಕೋರ್ಟ್‌ಗೆ ತೆರಳಿದ ತಹಶೀಲ್ದಾರ್

ದಾವಣಗೆರೆ: ನಿನ್ನೆ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ತಾಂಡಾದಲ್ಲಿ ನಡೆದ ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ಪುತ್ರ ಅವಿನಾಶ್ ವಿವಾಹಕ್ಕೆ ಗಣ್ಯಾತಿಗಣ್ಯರು, ರಾಜಕಾರಣಿಗಳು ಭಾಗವಹಿಸಿದ್ದರು. ಈ ವೇಳೆ ಕೊರೊನಾ ನಿಯಮಗಳನ್ನು ಉಲ್ಲಂಘಿಸಲಾಗಿತ್ತು.

50 ಜನರ ಬದಲಿಗೆ ಸಾವಿರಾರು ಜನ ಮದುವೆಯಲ್ಲಿ ಭಾಗಿಯಾಗಿದ್ರು. ಸಾಮಾಜಿಕ ಅಂತರ, ಮಾಸ್ಕ್​ ಧರಿಸದೆ ನಿರ್ಲಕ್ಷ್ಯ ವಹಿಸಲಾಗಿತ್ತು. ಹೀಗಾಗಿ ಹರಪನಹಳ್ಳಿ ತಹಶೀಲ್ದಾರ್ ನಾಗವೇಣಿ ಈ ಸಂಬಂಧ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ಕೇಸ್ ದಾಖಲಾಗಿದೆ ಎಂದೂ ಭಾವಿಸಲಾಗಿತ್ತು. ಆದ್ರೆ ಅಸಮರ್ಪಕ ದೂರು ಹಿನ್ನೆಲೆಯಲ್ಲಿ ಪೊಲೀಸರು FIR ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ ಮದುವೆಯ ಭಾವಚಿತ್ರ, ವಿಡಿಯೋ ದಾಖಲೆ ಸಹಿತ ದೂರು ಸಲ್ಲಿಸಲು ತಹಶೀಲ್ದಾರ್ ಇದೀಗ ಕೋರ್ಟ್‌ಗೆ ತೆರಳಿದ್ದಾರೆ.