ಏನೋ ಮಾಡೋಕೆ ಹೋಗಿ ಇನ್ನೇನೋ ಆಯ್ತು! ಹಸುಗಳ ಕದ್ದ ಕಳ್ಳರು ಆಸ್ಪತ್ರೆ ಸೇರಿದ್ರು, ಆದ್ರೆ ಹಸುಗಳು

  • TV9 Web Team
  • Published On - 9:10 AM, 16 Jun 2020
ಏನೋ ಮಾಡೋಕೆ ಹೋಗಿ ಇನ್ನೇನೋ ಆಯ್ತು! ಹಸುಗಳ ಕದ್ದ ಕಳ್ಳರು ಆಸ್ಪತ್ರೆ ಸೇರಿದ್ರು, ಆದ್ರೆ ಹಸುಗಳು

ಶಿವಮೊಗ್ಗ: 2 ಹಸುಗಳನ್ನು ಕದ್ದು ಪರಾರಿಯಾಗುತ್ತಿದ್ದಾಗ ಕಾರು ಪಲ್ಟಿಯಾಗಿರುವ ಘಟನೆ ಉಂಬ್ಳೆಬೈಲು ಸಮೀಪದ ಮರಾಠಾ ಕ್ಯಾಂಪ್ ಬಳಿ ನಡೆದಿದೆ. ಖದೀಮರು ಬೆಳಗಿನ ಜಾವ ಎರಡು ಹಸುಗಳನ್ನು ಕದ್ದು ಕಾರಿನಲ್ಲಿ ಪರಾರಿಯಾಗುತ್ತಿದ್ದರು. ಈ ವೇಳೆ ಭಯಕ್ಕೂ, ನಿಯಂತ್ರಣ ತಪ್ಪಿಯೂ ಕಾರ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಪಲ್ಟಿಯಾದ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ 2 ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ. ಕಳ್ಳರು ಗೋಮಾತೆಯನ್ನು ಕದ್ದು ಭಾರಿ ಅನಾಹುತಕ್ಕೆ ಕಾರಣರಾಗಿದ್ದಾರೆ. ಇನ್ನು ಕಾರಿನಲ್ಲಿ ಮಚ್ಚು, ಲಾಂಗ್ ಸೇರಿದಂತೆ ಮಾರಕಾಸ್ತ್ರಗಳು ಪತ್ತೆಯಾಗಿವೆ.

ಕಾರ್ ಪಲ್ಟಿಯಾದ ವೇಳೆ ಮೂವರು ಹಸು ಕಳ್ಳರು ಕಾರ್​ನಲ್ಲಿ ಸಿಲುಕಿಕೊಂಡಿದ್ದರು. ಸ್ಥಳೀಯರೇ ಕಾರಿನಿಂದ ಅವರನ್ನು ಹೊರಗೆ ತೆಗೆದು ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಿದ್ರು. ಗ್ರಾಮಸ್ಥರ ಮಾನವೀಯತೆಯಿಂದ ಮೂವರ ಜೀವ ಉಳಿಸಿದಿದೆ. ಆದರೆ ಏನೂ ತಿಳಿಯದ ಮೂಕ ಪ್ರಾಣಿಗಳು ಜೀವ ಕಳೆದುಕೊಂಡಿವೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.