AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹಣದ ತೈಲಿ ಇಟ್ಕೊಂಡು ಬಂದಿರುವ.. ವಿಜಯೇಂದ್ರ ಉದ್ದಟತನದ ಮಾತುಗಳಿಗೆ ತಕ್ಕ ಉತ್ತರ ಕೊಡಿ’

ತುಮಕೂರು: ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ದೊಡ್ಡ ಆಲದಮರ ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭಾಷಣ ನಡೆಸಿದ್ರು. ಈ ವೇಳೆ ಕುಮಾರಸ್ವಾಮಿ, ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಅಭ್ಯರ್ಥಿ ಅಮ್ಮಾಜಮ್ಮಾಗೆ ಬಿಜೆಪಿಯಿಂದ ಹಲವಾರು ಆಮಿಷ ನಮ್ಮ ಪಕ್ಷದ ಅಭ್ಯರ್ಥಿಯ ಮೇಲೆ ಬಿಜೆಪಿಯವರು ಹಲವಾರು ಆಮಿಷವೊಡ್ಡಿದ್ದರು. ಸ್ವತಃ ಡಿಸಿಎಂ ಅವರೆ ಮನೆ ಬಾಗಿಲಿಗೆ ಬಂದು ನಮ್ಮ ಪಕ್ಷಕ್ಕೆ ಬನ್ನಿ‌ ಎಂದು ಒತ್ತಡ ಏರಿದ್ರು. ಆದ್ರೆ ಅಮ್ಮಾಜಮ್ಮಾ ಅವರು ನಮ್ಮ ಪಕ್ಷಕ್ಕೆ ದ್ರೋಹ […]

‘ಹಣದ ತೈಲಿ ಇಟ್ಕೊಂಡು ಬಂದಿರುವ.. ವಿಜಯೇಂದ್ರ ಉದ್ದಟತನದ ಮಾತುಗಳಿಗೆ ತಕ್ಕ ಉತ್ತರ ಕೊಡಿ’
ಮಾಜಿ ಸಿಎಂ H.D.ಕುಮಾರಸ್ವಾಮಿ
ಆಯೇಷಾ ಬಾನು
|

Updated on:Oct 21, 2020 | 3:45 PM

Share

ತುಮಕೂರು: ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ದೊಡ್ಡ ಆಲದಮರ ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭಾಷಣ ನಡೆಸಿದ್ರು. ಈ ವೇಳೆ ಕುಮಾರಸ್ವಾಮಿ, ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಅಭ್ಯರ್ಥಿ ಅಮ್ಮಾಜಮ್ಮಾಗೆ ಬಿಜೆಪಿಯಿಂದ ಹಲವಾರು ಆಮಿಷ ನಮ್ಮ ಪಕ್ಷದ ಅಭ್ಯರ್ಥಿಯ ಮೇಲೆ ಬಿಜೆಪಿಯವರು ಹಲವಾರು ಆಮಿಷವೊಡ್ಡಿದ್ದರು. ಸ್ವತಃ ಡಿಸಿಎಂ ಅವರೆ ಮನೆ ಬಾಗಿಲಿಗೆ ಬಂದು ನಮ್ಮ ಪಕ್ಷಕ್ಕೆ ಬನ್ನಿ‌ ಎಂದು ಒತ್ತಡ ಏರಿದ್ರು. ಆದ್ರೆ ಅಮ್ಮಾಜಮ್ಮಾ ಅವರು ನಮ್ಮ ಪಕ್ಷಕ್ಕೆ ದ್ರೋಹ ಮಾಡಬಾರದು ಎಂದು ಜೆಡಿಎಸ್​ನಿಂದಲೇ ಸ್ಪರ್ಧೆ ಮಾಡ್ತಿದ್ದಾರೆ. ಸಿಎಂ ಮಗ ವಿಜಯೇಂದ್ರ ಹಣದ ತೈಲಿಯನ್ನೇ ಇಟ್ಟುಕೊಂಡು ಬಂದಿದ್ದಾರೆ. ಯುವಕರಿಗೆ ಆಮಿಷವೊಡ್ಡಿ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಅವರು ಹಣವನ್ನು ಕಷ್ಟಪಟ್ಟು ಸಂಪಾದನೆ ಮಾಡಿ ಹಣ ತಂದಿಲ್ಲ.

ಅದು ನಿಮ್ಮೆಲ್ಲರ ತೆರಿಗೆ ಹಣವಾಗಿದೆ. ನಿಮ್ಮದೇ ತೆರಿಗೆ ಹಣ ಸರ್ಕಾರದಲ್ಲಿ ಲೂಟಿ ಆಗ್ತಿದೆ. ಯುವಕರು ಬಿಜೆಪಿ, ಕಾಂಗ್ರೆಸ್​ನ ಯಾವುದೇ ಆಮೀಷಗಳಿಗೆ ಬಲಿಯಾಗಬೇಡಿ. ಬಿಜೆಪಿಯವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಚುನಾವಣೆ ಮಾಡ್ತಿದ್ದಾರೆ. ನಿಮ್ಮಗಳನ್ನ ಕೊಂಡುಕೊಳ್ತೀವಿ ಎನ್ನುವ ವಿಜಯೇಂದ್ರ ಉದ್ಧಟತನದ ಮಾತುಗಳಿಗೆ ಉತ್ತರ ಕೊಡಿ. ಇಂದು ಶಿರಾಗೆ ಬಂದಿರೋ ಸಿಎಂ ಮಗ ನಾಳೆ ಬೆಳಗ್ಗೆ ಈ ಕಡೆ ತಿರುಗಿ ನೋಡಲ್ಲ. ಆ ವ್ಯಕ್ತಿ ಬೆಂಗಳೂರಲ್ಲಿ ಕೂತು ಪ್ರತಿ ದಿನ ಹಣ ಲೂಟಿ ಮಾಡ್ತಿದ್ದಾನೆ. ಆ ವ್ಯಕ್ತಿಯ ನಡವಳಿಕೆ ಬರೀ ಹಣ ಲೂಟಿ ಅಷ್ಟೇ ಬೇರೆ ಸಾಧನೆ ಇಲ್ಲ. ಅವರ ಹಣಕ್ಕೆ ಮಾರು ಹೋಗದೇ ನಮ್ಮ ಪಕ್ಷಕ್ಕೆ ಮತ ನೀಡಿ ಎಂದು ಹೆಚ್. ಡಿ. ಕುಮಾರಸ್ವಾಮಿ ಬಿ.ಎಸ್.ವೈ ಪುತ್ರನ ವಿರುದ್ಧ ಮಾತನಾಡಿದ್ದಾರೆ.

Published On - 3:33 pm, Wed, 21 October 20