ನಟ ಸುರೇಂದ್ರ ಬಂಟ್ವಾಳ್ ಬರ್ಬರ ಹತ್ಯೆ

ಮಂಗಳೂರು: ತುಳು ಚಿತ್ರಗಳಲ್ಲಿ ನಟಿಸಿದ್ದ ನಟ ಸುರೇಂದ್ರ ಬಂಟ್ವಾಳ್ ಅವರ ಬರ್ಬರ ಹತ್ಯೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಳಿಯ ಸುರೇಂದ್ರ ಬಂಟ್ವಾಳ್ ಫ್ಲಾಟ್​ನಲ್ಲೇ ಕಿರಾತಕರು ಕೊಲೆ ಮಾಡಿ ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಣಕಾಸು ವಿಚಾರಕ್ಕೆ ಜೊತೆಗಿದ್ದವರಿಂದಲೇ ನಟ ಬಂಟ್ವಾಳ್ ಹತ್ಯೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಇನ್ನು ಸವರ್ಣಧೀರ್ಘ ಸಂಧಿ ಕನ್ನಡ ಚಿತ್ರ ಸೇರಿದಂತೆ ಹಲವು ತುಳು ಚಿತ್ರಗಳಲ್ಲಿ ಬಂಟ್ವಾಳ್ ನಟಿಸಿದ್ದಾರೆ. ಕಳೆದ 2018ರ […]

ನಟ ಸುರೇಂದ್ರ ಬಂಟ್ವಾಳ್ ಬರ್ಬರ ಹತ್ಯೆ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Oct 21, 2020 | 3:06 PM

ಮಂಗಳೂರು: ತುಳು ಚಿತ್ರಗಳಲ್ಲಿ ನಟಿಸಿದ್ದ ನಟ ಸುರೇಂದ್ರ ಬಂಟ್ವಾಳ್ ಅವರ ಬರ್ಬರ ಹತ್ಯೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಳಿಯ ಸುರೇಂದ್ರ ಬಂಟ್ವಾಳ್ ಫ್ಲಾಟ್​ನಲ್ಲೇ ಕಿರಾತಕರು ಕೊಲೆ ಮಾಡಿ ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ.

ಹಣಕಾಸು ವಿಚಾರಕ್ಕೆ ಜೊತೆಗಿದ್ದವರಿಂದಲೇ ನಟ ಬಂಟ್ವಾಳ್ ಹತ್ಯೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಇನ್ನು ಸವರ್ಣಧೀರ್ಘ ಸಂಧಿ ಕನ್ನಡ ಚಿತ್ರ ಸೇರಿದಂತೆ ಹಲವು ತುಳು ಚಿತ್ರಗಳಲ್ಲಿ ಬಂಟ್ವಾಳ್ ನಟಿಸಿದ್ದಾರೆ. ಕಳೆದ 2018ರ ಜೂನ್‌ನಲ್ಲಿ ಪ್ರಕರಣವೊಂದರಲ್ಲಿ ಬಂಟ್ವಾಳ್ ಜೈಲು ಸೇರಿದ್ದರು.

ಬಂಟ್ವಾಳ ಪೇಟೆಯಲ್ಲಿ ತಲವಾರು ಹಿಡಿದು ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದರು. ಬೆದರಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಂತರ ಬಂಧನಕ್ಕೊಳಗಾಗಿ ಜಾಮೀನಿನ ‌ಮೇಲೆ ಹೊರಬಂದಿದ್ದರು. ಈ ಹಿಂದೆ ಹಿಂದೂ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಈಗ ಕೆಲ ದುಷ್ಕರ್ಮಿಗಳು ಅವರನ್ನ ಕೊಲೆ ಮಾಡಿದ್ದಾರೆ.