ಅಣ್ಣಾ, ನಿನ್ನಿಂದ ಸಾಲಮನ್ನಾ ಆಯ್ತು ಅಂತಾರೆ.. ಆದ್ರೆ ವೋಟ್ ಮಾತ್ರ ನನಗೆ ಕೊಡಲ್ಲ -HDK ನೋವು
ಬೆಂಗಳೂರು: ಅಣ್ಣಾ, ನಿನ್ನಿಂದ ಸಾಲಮನ್ನಾ ಆಯ್ತು ಎಂದು ಜನ ಕೃತಜ್ಞತೆ ಸಲ್ಲಿಸುತ್ತಾರೆ. ಆದರೆ, ಚುನಾವಣೆಯಲ್ಲಿ ಮಾತ್ರ ಮತವನ್ನು ನಮ್ಮ ಪಕ್ಷಕ್ಕೆ ಕೊಡೋದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಮ್ಮ ನೋವು ತೋಡಿಕೊಂಡರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರದಲ್ಲಿ ಜೆಡಿಎಸ್ನ ವಾರ್ಡ್ ಕಚೇರಿ ಉದ್ಘಾಟಿಸಿ ಮಾತನಾಡಿದ ಮಾಜಿ ಸಿಎಂ, ಬೆಂಗಳೂರು ಮಹಾನಗರ ಪಾಲಿಕೆಯನ್ನು ‘ಬೃಹತ್’ ಮಾಡಿದ್ದೇ ನಾನು ಎಂದು ಸಹ ಹೇಳಿದರು. ದಾಸರಹಳ್ಳಿ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ 36 ಲಕ್ಷ ರೂಪಾಯಿ ಅನುದಾನ ನೀಡಿದ್ದೆ. ನಗರಕ್ಕೆ […]

ಬೆಂಗಳೂರು: ಅಣ್ಣಾ, ನಿನ್ನಿಂದ ಸಾಲಮನ್ನಾ ಆಯ್ತು ಎಂದು ಜನ ಕೃತಜ್ಞತೆ ಸಲ್ಲಿಸುತ್ತಾರೆ. ಆದರೆ, ಚುನಾವಣೆಯಲ್ಲಿ ಮಾತ್ರ ಮತವನ್ನು ನಮ್ಮ ಪಕ್ಷಕ್ಕೆ ಕೊಡೋದಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಮ್ಮ ನೋವು ತೋಡಿಕೊಂಡರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರದಲ್ಲಿ ಜೆಡಿಎಸ್ನ ವಾರ್ಡ್ ಕಚೇರಿ ಉದ್ಘಾಟಿಸಿ ಮಾತನಾಡಿದ ಮಾಜಿ ಸಿಎಂ, ಬೆಂಗಳೂರು ಮಹಾನಗರ ಪಾಲಿಕೆಯನ್ನು ‘ಬೃಹತ್’ ಮಾಡಿದ್ದೇ ನಾನು ಎಂದು ಸಹ ಹೇಳಿದರು.
ದಾಸರಹಳ್ಳಿ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ 36 ಲಕ್ಷ ರೂಪಾಯಿ ಅನುದಾನ ನೀಡಿದ್ದೆ. ನಗರಕ್ಕೆ ಕಾವೇರಿ ನೀರಿನ ಸಮರ್ಪಕ ಪೂರೈಕೆಗೆ ಜೆಡಿಎಸ್ ಕಾರಣ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ರಾಜ್ಯದ ಅಭಿವೃದ್ಧಿಯ ಕಾಳಜಿಯಿಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಟೀಕಿಸಿದರು.
ಬಿಜೆಪಿಯವರದ್ದು 10 ಪರ್ಸೆಂಟ್ ಸರ್ಕಾರ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳ್ತಾರೆ. ಕಾಂಗ್ರೆಸ್ನವರು ಪರ್ಸೆಂಟೇಜ್ ಸರ್ಕಾರ ನಡೆಸುತ್ತಿದ್ದರು ಎಂದು ಮೋದಿ ಹೇಳ್ತಾರೆ. ಆದರೆ ನನ್ನ ಬಗ್ಗೆ ಹಾಗೆ ಹೇಳಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೆಮ್ಮೆಯಿಂದ ಹೇಳಿದರು.



