‘ನಾನು-ದೇವೇಗೌಡರು ಇಲ್ಲದ್ದಿದ್ರೆ ಗೋಪಾಲಯ್ಯ ಎನ್​ಕೌಂಟರ್​ ಆಗಿಬಿಡ್ತಿದ್ರು’

ಬೆಂಗಳೂರು: ಡಿ.5ರಂದು ಉಪಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್​ ಅಭ್ಯರ್ಥಿ ಪರ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಬಿಜೆಪಿ ಅಭ್ಯರ್ಥಿ ಹಾಗೂ ಅನರ್ಹ ಶಾಸಕ ಗೋಪಾಲಯ್ಯ ವಿರುದ್ಧ ಕಿಡಿಕಾರಿದ್ದಾರೆ. ರೌಡಿಗಳಿಂದ ಎನ್​ಕೌಂಟರ್​ ಆಗ್ತಿದ್ರು:  ನಾನು, ಹೆಚ್​.ಡಿ.ದೇವೇಗೌಡರು ಇಲ್ಲದಿದ್ದರೆ ಗೋಪಾಲಯ್ಯ ಎನ್​ಕೌಂಟರ್​​ ಆಗ್ತಿದ್ದರು. ಸಮಾಜಘಾತುಕ ಚಟುವಟಿಕೆಯಲ್ಲಿ ಅವರು ಯಾವತ್ತೋ ಹೋಗಬೇಕಾಗಿತ್ತು. ಪೊಲೀಸರಿಂದ ಅಲ್ಲ, ರೌಡಿಗಳಿಂದ ಎನ್​ಕೌಂಟರ್ ಆಗ್ತಿದ್ದರು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಗೋಪಾಲಯ್ಯ ಬದಲಾಗ್ತಾರೆ ಅಂತ 2013ರಲ್ಲಿ ಒಂದು […]

‘ನಾನು-ದೇವೇಗೌಡರು ಇಲ್ಲದ್ದಿದ್ರೆ ಗೋಪಾಲಯ್ಯ ಎನ್​ಕೌಂಟರ್​ ಆಗಿಬಿಡ್ತಿದ್ರು’
ಸಾಧು ಶ್ರೀನಾಥ್​

Updated on: Nov 29, 2019 | 1:53 PM

ಬೆಂಗಳೂರು: ಡಿ.5ರಂದು ಉಪಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್​ ಅಭ್ಯರ್ಥಿ ಪರ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಬಿಜೆಪಿ ಅಭ್ಯರ್ಥಿ ಹಾಗೂ ಅನರ್ಹ ಶಾಸಕ ಗೋಪಾಲಯ್ಯ ವಿರುದ್ಧ ಕಿಡಿಕಾರಿದ್ದಾರೆ.

ರೌಡಿಗಳಿಂದ ಎನ್​ಕೌಂಟರ್​ ಆಗ್ತಿದ್ರು: 
ನಾನು, ಹೆಚ್​.ಡಿ.ದೇವೇಗೌಡರು ಇಲ್ಲದಿದ್ದರೆ ಗೋಪಾಲಯ್ಯ ಎನ್​ಕೌಂಟರ್​​ ಆಗ್ತಿದ್ದರು. ಸಮಾಜಘಾತುಕ ಚಟುವಟಿಕೆಯಲ್ಲಿ ಅವರು ಯಾವತ್ತೋ ಹೋಗಬೇಕಾಗಿತ್ತು. ಪೊಲೀಸರಿಂದ ಅಲ್ಲ, ರೌಡಿಗಳಿಂದ ಎನ್​ಕೌಂಟರ್ ಆಗ್ತಿದ್ದರು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಗೋಪಾಲಯ್ಯ ಬದಲಾಗ್ತಾರೆ ಅಂತ 2013ರಲ್ಲಿ ಒಂದು ಅವಕಾಶ ಕೊಟ್ಟಿದ್ದೆ. ಆದ್ರೆ ಅವರು ಬದಲಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Published On - 1:52 pm, Fri, 29 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us