ಮಾರ್ಪಾಡು ಮಾಡಿದ್ದರಿಂದ ಕಾಯ್ದೆ ಪರ ಮತ ಹಾಕಿದ್ದೇವೆ.. HDKಗೆ ಬೆಂಬಲವಾಗಿ ನಿಂತ ಅಗ್ರಜ
ಕಾಯ್ದೆಯಲ್ಲಿ ಮಾರ್ಪಾಡು ಮಾಡಿದ್ದಕ್ಕೆ ಕಾಯ್ದೆಗೆ ಬೆಂಬಲ ನೀಡಿದ್ವಿ. ಮಾರ್ಪಾಡು ಮಾಡಿದ್ದರಿಂದ ಕಾಯ್ದೆ ಪರ ಮತ ಹಾಕಿದ್ದೇವೆ. ಒಂದು ವೇಳೆ, ತಪ್ಪಾಗಿದ್ದರೆ ತಿದ್ದಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ಹಾಸನ: ಕಾಯ್ದೆಯಲ್ಲಿ ಮಾರ್ಪಾಡು ಮಾಡಿದ್ದಕ್ಕೆ ಕಾಯ್ದೆಗೆ ಬೆಂಬಲ ನೀಡಿದ್ವಿ. ಮಾರ್ಪಾಡು ಮಾಡಿದ್ದರಿಂದ ಕಾಯ್ದೆ ಪರ ಮತ ಹಾಕಿದ್ದೇವೆ. ಒಂದು ವೇಳೆ, ತಪ್ಪಾಗಿದ್ದರೆ ತಿದ್ದಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ. ತನ್ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ನಿರ್ಧಾರಕ್ಕೆ ಅಗ್ರಜ ರೇವಣ್ಣ ಒಪ್ಪಿಗೆ ಸೂಚಿಸಿದ್ದಾರೆ.
ಭೂ ಸುಧಾರಣಾ ಕಾಯ್ದೆಗೆ ನಮ್ಮ ವಿರೋಧವಿದೆ ಎಂದ ರೇವಣ್ಣ ರೈತರ ವಿರುದ್ಧದ ಕಾಯ್ದೆಯಾದರೆ ನಮ್ಮ ವಿರೋಧವಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ತಿದ್ದುಪಡಿ ಮಾಡ್ತೇವೆ. ರೈತರ ವಿರುದ್ಧದ ಕಾಯ್ದೆಗಳನ್ನ ತಿದ್ದುಪಡಿ ಮಾಡುತ್ತೇವೆ. ಇಲ್ಲವಾದ್ರೆ ರಾಜಕೀಯದಲ್ಲಿ ಇರುವುದಿಲ್ಲ ಎಂದು ರೇವಣ್ಣ ಖಡಾಖಂಡಿತವಾಗಿ ಹೇಳಿದರು.
ನಾನಾಗಲಿ, ದೇವೇಗೌಡರಾಗಲಿ, ಕುಮಾರಸ್ವಾಮಿಯಾಗಲಿ ಸದಾ ರೈತರ ಪರ ನಾನು ಸಿಎಂ ಅವರನ್ನು ಖುದ್ದಾಗಿ ಭೇಟಿ ಮಾಡಿಲ್ಲ. ಮೀಟಿಂಗ್ ಮುಗಿದ ನಂತರ ಬರುತ್ತಿದ್ದರು ಆಗ ಭೇಟಿಯಾಗಿದ್ದೆವು. ಎಲ್ಲಾ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಸಿಎಂ ಹೇಳಿದ್ರು. ನಾನಾಗಲಿ, ದೇವೇಗೌಡರಾಗಲಿ ಅಥವಾ ಕುಮಾರಸ್ವಾಮಿಯಾಗಲಿ ಸದಾ ರೈತರ ಪರ ಇರುತ್ತೇವೆ ಎಂದು ರೇವಣ್ಣ ಹೇಳಿದರು.
ನಾನು ಕಾಂಗ್ರೆಸ್ ಪರನೂ ಇಲ್ಲಾ, ಬಿಜೆಪಿ ಪರನೂ ಇಲ್ಲ. ದೇವೇಗೌಡರ ಪ್ರಾದೇಶಿಕ ಪಕ್ಷವನ್ನು ಉಳಿಸುವುದೇ ನನ್ನ ಗುರಿ. ಆದರೆ, ಈ ಎರಡು ರಾಜಕೀಯ ಪಕ್ಷಗಳು ಅಡ್ಜಸ್ಟಮೆಂಟ್ ಮಾಡಿಕೊಂಡಿವೆ ಎಂದು ಹೇಳಿದರು. ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವಿನ ವಾಗ್ದಾಳಿ ವಿಚಾರವಾಗಿ ನಾನೇಕೆ ಒಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಬೇಕು ಎಂದು ಸಿದ್ದರಾಮಯ್ಯ ಬಗ್ಗೆ ಮಾತನಾಡಲು ರೇವಣ್ಣ ನಿರಾಕರಿಸಿದರು.
Published On - 6:03 pm, Fri, 11 December 20