ಮನೆಮದ್ದು: ಹೆಸರು ಬಜೆ ಬೇರು.. ಇದರ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭ ಹತ್ತು ಹಲವಾರು!
ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಔಷಧವಾಗಿ ಇದನ್ನು ಬಳಸುತ್ತಾರೆ. ರುಚಿಯಲ್ಲಿ ಸ್ವಲ್ಪ ಖಾರ. ಆದರೆ, ಇದರಿಂದ ಹೊರಹೊಮ್ಮುವ ಸುವಾಸನೆ ಮಾತ್ರ ಸೂಪರ್!
ಬಜೆ ಸಸ್ಯ ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ . ಅಧಿಕ ನೀರನ್ನು ಹೀರಿಕೊಳ್ಳುವ ಈ ಸಸ್ಯ ಭದ್ರವಾಗಿ ಬೇರೂರುತ್ತದೆ. ಜೊತೆಗೆ, ಮನೆ ಮದ್ದಾಗಿ ಬಳಸುವ ಈ ಗಿಡ ಬಜೆ ಬೇರು ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಔಷಧವಾಗಿ ಇದನ್ನು ಬಳಸುತ್ತಾರೆ. ರುಚಿಯಲ್ಲಿ ಸ್ವಲ್ಪ ಖಾರ. ಆದರೆ, ಇದರಿಂದ ಹೊರಹೊಮ್ಮುವ ಸುವಾಸನೆ ಮಾತ್ರ ಸೂಪರ್!
ಅಂದ ಹಾಗೆ, ಈ ಬೇರಲ್ಲಿರುವ ಲಾಭ ಮಾತ್ರ ಹತ್ತಾರು. ಅವುಗಳಲ್ಲಿ ಆರೋಗ್ಯಕ್ಕೆ ಅತ್ಯಂತ ಲಾಭದಾಯಕವಾದದ್ದನ್ನು ನೋಡುವುದಾದರೇ..
1. ಉತ್ತಮ ಜೀರ್ಣಕ್ರಿಯೆ: ಬಜೆ ಬೇರನ್ನು ತಿಂಗಳಿಗೆ 2 ಬಾರಿ ತೇಯ್ದು ಒಂದು ಚಮಚ ಸೇವಿಸುವುದರಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಜೊತೆಗೆ, ಹೊಟ್ಟೆ ನೋವು, ಜಂತು ಹುಳು ಈ ರೀತಿಯ ಸಮಸ್ಯೆಗಳ ನಿವಾರಣೆಗೆ ಬಜೆ ಬೇರು ಬಹಳ ಪರಿಣಾಮಕಾರಿ.
2.ಚಿಕ್ಕ ಮಕ್ಕಳಲ್ಲಿ ಮಾತು ಶುದ್ಧತೆ: ಮಕ್ಕಳ ಉಚ್ಛಾರಣೆಯಲ್ಲಿ ತೊದಲು ಕಂಡುಬಂದರೆ ಪ್ರತಿದಿನ ಬಜೆ ಬೇರನ್ನು ತೇಯ್ದು ಕೊಡುವುದರಿಂದ ಮಾತಿನಲ್ಲಿ ಶುದ್ಧತೆ ಕಂಡುಬರುತ್ತದೆ. ಕೇವಲ ಮಕ್ಕಳಲ್ಲದೆ ವಯಸ್ಕರೂ ಸಹ ಈ ಬೇರನ್ನು ಸೇವಿಸುವ ಮೂಲಕ ಸ್ಪಷ್ಟವಾಗಿ ಉಚ್ಛರಿಸಬಹುದಾಗಿದೆ.
3.ಶ್ವಾಸಕೋಶ ಸಂಬಂಧಿ ಸಮಸ್ಯೆಗೆ ಪರಿಹಾರ: ಉಸಿರಾಟ ಕ್ರಿಯೆ, ಕೆಮ್ಮು, ಕಫದಂತಹ ಸಮಸ್ಯೆಗಳಿಗೆ ಬಜೆ ಬೇರನ್ನು ಕುಟ್ಟಿ, ಪುಟಿ ಮಾಡಿ, ನೀರಿನಲ್ಲಿ ಕುದಿಸಿ, ಕಷಾಯ ಮಾಡಿ ಸೇವಿಸುವುದು ಉತ್ತಮ. ನೆಗಡಿ(ಶೀತ), ಜ್ವರದ ಸಮಸ್ಯೆಗಳಿಗೂ ಬಜೆ ಬೇರಿನ ಕಷಾಯ ಅತ್ಯಂತ ಪರಿಣಾಮಕಾರಿ.