ವೈದ್ಯನ ಕೈಗುಣ ಚೆನ್ನಾಗಿದೆ ಅಂತಾ.. ಕ್ಲಿನಿಕ್ ಎದುರು ಸಾಲುಗಟ್ಟಿ ನಿಲ್ತಿದ್ದ ರೋಗಿಗಳಿಗೆ ಸಿಕ್ತು ದೊಡ್ಡ ಶಾಕ್!
ನೋಡೋಕೆ ಹೈ-ಫೈ ಆಗಿರುವ ಬಡಾವಣೆಯ ಸುಜಾತಾ ಕ್ಲಿನಿಕ್ನಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಬೆಡ್ ಲಭ್ಯವಿದೆ. ಇದಲ್ಲದೆ, ಕ್ಲಿನಿಕ್ನ ಮೂಲೆ ಮೂಲೆಯಲ್ಲಿ ಎತ್ತ ನೋಡಿದರೂ ಅಲ್ಲಿ ಔಷಧಿಗಳು. ಆಸ್ವತ್ರೆಯಲ್ಲಿರಬೇಕಾದ ಎಲ್ಲಾ ಸೌಕರ್ಯಗಳೂ ಈ ಕ್ಲಿನಿಕ್ನಲ್ಲಿದ್ದರೂ ಅವನೆಲ್ಲ ಬಳಸಬೇಕಾದ ವ್ಯಕ್ತಿಯೇ ಅದಕ್ಕೆ ಅರ್ಹನಲ್ಲ ಅನ್ನೋದೆ ವಿಪರ್ಯಾಸ.

ಹೊಸಕೋಟೆ: ಕೊರೊನಾ ಮಹಾಮಾರಿ ಭೀತಿಯ ನಡುವೆ ಕಂಗಾಲಾಗಿರುವ ಜನರಿಗೆ ಇದೀಗ ನಕಲಿ ವೈದ್ಯರ ಹಾವಳಿ ಸಹ ಎದುರಾಗಿದೆ. ಹೌದು, ನಕಲಿ ವೈದ್ಯನೊಬ್ಬ ಅಧಿಕಾರಿಗಳ ಕೈಗೆ ತಗಲಾಕಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ MV ಬಡಾವಣೆಯಲ್ಲಿ ನಡೆದಿದೆ. ನಕಲಿ ವೈದ್ಯನ ಸಾಮ್ರಾಜ್ಯ ಕಂಡು ಖುದ್ದು ಅಧಿಕಾರಿಗಳೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ಕ್ಲಿನಿಕ್ನಲ್ಲಿ ಎಲ್ಲಾ ಅಸಲಿ.. ಆದ್ರೆ ಚಿಕಿತ್ಸೆ ಕೊಡಬೇಕಾದ ವೈದ್ಯಾನೇ ನಕಲಿ! ಯೆಸ್, ನೋಡೋಕೆ ಹೈ-ಫೈ ಆಗಿರುವ ಬಡಾವಣೆಯ ಸುಜಾತಾ ಕ್ಲಿನಿಕ್ನಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಬೆಡ್ ಲಭ್ಯವಿದೆ. ಇದಲ್ಲದೆ, ಕ್ಲಿನಿಕ್ನ ಮೂಲೆ ಮೂಲೆಯಲ್ಲಿ ಎತ್ತ ನೋಡಿದರೂ ಅಲ್ಲಿ ಔಷಧಿಗಳು. ಆಸ್ವತ್ರೆಯಲ್ಲಿರಬೇಕಾದ ಎಲ್ಲಾ ಸೌಕರ್ಯಗಳೂ ಈ ಕ್ಲಿನಿಕ್ನಲ್ಲಿದ್ದರೂ ಅವನೆಲ್ಲ ಬಳಸಬೇಕಾದ ವ್ಯಕ್ತಿಯೇ ಅದಕ್ಕೆ ಅರ್ಹನಲ್ಲ ಅನ್ನೋದೆ ವಿಪರ್ಯಾಸ.
ಹೌದು, ಕ್ಲಿನಿಕ್ನಲ್ಲಿ ಎಲ್ಲಾ ಔಷಧಿಗಳನ್ನು ಇಟ್ಟುಕೊಂಡು ಬಂದವರಿಗೆಲ್ಲ MBBS ಓದಿರುವ ವೈದ್ಯನಂತೆ ಬೇಕಾಬಿಟ್ಟಿ ಆ್ಯಂಟಿಬಯೋಟಿಕ್ ಕೊಟ್ಟು ಚಿಕಿತ್ಸೆ ಕೊಡ್ತಿದ್ದ ಮೋಹನ್ ಎಂಬ ಆಸಾಮಿಯ ನಕಲಿ ಬಂಡವಾಳ ಇದೀಗ ಪತ್ತೆಯಾಗಿದೆ. ಜನರಿಗೆ ಆಯುಷ್ ಚಿಕಿತ್ಸೆ ಕೊಡ್ತಿನಿ ಅಂತಾ ಆರೋಗ್ಯ ಇಲಾಖೆಯಿಂದ ಸರ್ಟಿಫಿಕೇಟ್ ಪಡೆದು ಬಂದವರಿಗೆಲ್ಲ ಅಲೋಪಥಿ ಚಿಕಿತ್ಸೆ ಕೊಟ್ಟು ಕಳಿಸುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ.
ದಾಳಿ ವೇಳೆ ಬಯಲಾಯ್ತು ನಕಲಿ ವೈದ್ಯನ ಅಸಲಿಯತ್ತು ನಗರದ ರೋಗಿಗಳು ಈತ MBBS ಓದಿರೋ ವೈದ್ಯ. ಎಲ್ಲಾ ಕಾಯಿಲೆಗಳಿಗೂ ಚೆನ್ನಾಗಿ ಟ್ರೀಟ್ಮೆಂಟ್ ಕೊಡ್ತಾನೆ. ರೋಗ ಬೇಗ ವಾಸಿಯಾಗುತ್ತೆ ಅಂದುಕೊಂಡು ಚಿಕಿತ್ಸೆಗೆ ಹೋದ್ರೆ ಮೋಹನ್ ಹೈ-ಡೋಸೇಜ್ ಔಷಧಿಗಳನ್ನ ನೀಡಿ ಕಳಿಸುತ್ತಿದ್ದ ಎಂದು ತಿಳಿದುಬಂದಿದೆ. ಹಾಗಾಗಿ, ಇಂದು ಹೊಸಕೋಟೆ ತಾಲೂಕಿನ THO ಮಂಜುನಾಥ್ ನೇತೃತ್ವದ ತಂಡವೊಂದು ನಗರದ ಕ್ಲಿನಿಕ್ಗಳು ಯಾವ ರೀತಿ ಕಾರ್ಯ ನಿರ್ವಹಿಸುತ್ತಿವೆ ಅಂತಾ ಪರಿಶೀಲನೆ ಮಾಡುತ್ತಾ ಸುಜಾತ ಕ್ಲಿನಿಕ್ಗೂ ಎಂಟ್ರಿಕೊಟ್ಟಿದ್ದಾರೆ.
ತಪಾಸಣೆ ನಡೆಸಿದ ವೇಳೆ ಕ್ಲಿನಿಕ್ನಲ್ಲಿ ಸಿಕ್ಕ ಸಿಕ್ಕ ಕಡೆ ಔಷಧಿ ಅಂಗಡಿಯ ರೀತಿಯಲ್ಲಿ ಸಂಗ್ರಹಿಸಿಟ್ಟಿದ್ದ ಔಷಧಿಗಳನ್ನ ಕಂಡುಬಂದಿದೆ. ಸುಮಾರು 15 ಮೂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಮೌಲ್ಯದ ಌಂಟಿಬಯೋಟಿಕ್, ಸ್ಟೆರಾಯ್ಡ್ ಗ್ಲೂಕೋಸ್ ಬಾಟಲ್ಗಳು ಪತ್ತೆಯಾಗಿದೆ.
ಇದನ್ನು ಕಂಡು ಒಂದು ಕ್ಷಣ ಬೆಚ್ಚಿ ಬಿದ್ದ ತಂಡ ಮೋಹನ್ಗೆ ತನ್ನ ಸರ್ಟಿಫಿಕೇಟ್ ತೋರಿಸುವಂತೆ ಹೇಳಿದ್ದಾರೆ. ಈ ವೇಳೆ ನಕಲಿ ವೈದ್ಯ ತನ್ನ ಆಯುಷ್ ಸರ್ಟಿಫಿಕೇಟ್ ನೀಡಿದ್ದಾನೆ. ಆಗ ಈತನ ಅಸಲಿಯತ್ತು ಬೆಳಕಿಗೆ ಬಂದಿದೆ. ಸದ್ಯ, ಔಷಧಿ ಸೇರಿದಂತೆ ಎಲ್ಲವನ್ನೂ ವಶಕ್ಕೆ ಪಡೆದ ಆರೋಗ್ಯಾಧಿಕಾರಿಗಳು ಕ್ಲಿನಿಕ್ಗೆ ಬೀಗ ಜಡಿದಿದ್ದಾರೆ. -ನವೀನ್
ಭಾರತ್ ಬಯೋಟೆಕ್ಗೆ ವಿದೇಶಿ ಪ್ರತಿನಿಧಿಗಳ ಭೇಟಿ.. ಲಸಿಕೆ ತುರ್ತು ಬಳಕೆ, ಅನುಮತಿ ನಿರಾಕರಿಸಿದ ಕೇಂದ್ರ ಸರ್ಕಾರ