ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ, ವಾಹನ ಸವಾರರ ಪರದಾಟ

ಬೆಂಗಳೂರು: ರಾಜಧಾನಿಯಲ್ಲಿಂದು ವರುಣನ ಅಬ್ಬರ ಜೋರಾಗಿದೆ. ನಗರದ ಹಲವೆಡೆ ಮಳೆ ಸುರಿಯುತ್ತಿದೆ. ಆಫೀಸ್​ಗೆ, ಕಚೇರಿಗಳಿಗೆ ಹೋಗುತ್ತಿರುವವರಿಗೆ ಮಳೆರಾಯ ತೊಂದರೆಯನುಂಟು ಮಾಡಿದ್ದಾನೆ. ನಗರಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಕೆ.ಆರ್. ಮಾರುಕಟ್ಟೆ, ಶಾಂತಿನಗರ, ಕೋರಮಂಗಲ, ಮೆಜೆಸ್ಟಿಕ್, ಆರ್.ಆರ್.ನಗರ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಮಲ್ಲತ್ತಹಳ್ಳಿಯಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಆರ್.ಆರ್.ನಗರ ಆರ್ಚ್ ಬಳಿಯ ರಸ್ತೆ ಜಲಾವೃತ: ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಗೆ ಆರ್.ಆರ್.ನಗರ ಆರ್ಚ್ ಬಳಿಯ ರಸ್ತೆ ಜಲಾವೃತಗೊಂಡಿದೆ. ರಸ್ತೆ ಮೇಲೆ ನಿಂತಿರುವ ನೀರು ಹೊರಹಾಕಲು ಟ್ರಾಫಿಕ್ ಪೊಲೀಸರು […]

ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ, ವಾಹನ ಸವಾರರ ಪರದಾಟ

Updated on: Oct 19, 2020 | 9:54 AM

ಬೆಂಗಳೂರು: ರಾಜಧಾನಿಯಲ್ಲಿಂದು ವರುಣನ ಅಬ್ಬರ ಜೋರಾಗಿದೆ. ನಗರದ ಹಲವೆಡೆ ಮಳೆ ಸುರಿಯುತ್ತಿದೆ. ಆಫೀಸ್​ಗೆ, ಕಚೇರಿಗಳಿಗೆ ಹೋಗುತ್ತಿರುವವರಿಗೆ ಮಳೆರಾಯ ತೊಂದರೆಯನುಂಟು ಮಾಡಿದ್ದಾನೆ. ನಗರಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಕೆ.ಆರ್. ಮಾರುಕಟ್ಟೆ, ಶಾಂತಿನಗರ, ಕೋರಮಂಗಲ, ಮೆಜೆಸ್ಟಿಕ್, ಆರ್.ಆರ್.ನಗರ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಮಲ್ಲತ್ತಹಳ್ಳಿಯಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದೆ.

ಆರ್.ಆರ್.ನಗರ ಆರ್ಚ್ ಬಳಿಯ ರಸ್ತೆ ಜಲಾವೃತ:
ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಗೆ ಆರ್.ಆರ್.ನಗರ ಆರ್ಚ್ ಬಳಿಯ ರಸ್ತೆ ಜಲಾವೃತಗೊಂಡಿದೆ. ರಸ್ತೆ ಮೇಲೆ ನಿಂತಿರುವ ನೀರು ಹೊರಹಾಕಲು ಟ್ರಾಫಿಕ್ ಪೊಲೀಸರು ಹರಸಾಹಸ ನಡೆಸಿದ್ದಾರೆ. ಹಾಗೂ ಮೋರಿ ಸ್ವಚ್ಛಗೊಳಿಸಲಾಗುತ್ತಿದೆ. ಜೊತೆಗೆ ಮೈಸೂರು ರಸ್ತೆ ಫ್ಲೈ ಓವರ್ ಮೇಲೂ ಸಹ ಇಂತಹದ್ದೇ ದೃಶ್ಯ ಕಂಡು ಬಂದಿದೆ. ರಸ್ತೆ ಮೇಲೆ ನೀರು ನಿಂತ ಕಾರಣ ವಾಹನ ಸವಾರರ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋರಮಂಗಲದಲ್ಲಿ ತುಂತುರು ಮಳೆ:
ಕೋರಮಂಗಲದಲ್ಲಿ ಮಳೆಯಿಂದಾಗಿ ಬೀದಿ ಬದಿ ವ್ಯಾಪಾರಿಗಳು, ವಾಹನ ಸವಾರರು ಪರದಾಡುತ್ತಿದ್ದಾರೆ. ಮಳೆ‌ಯಿಂದಾಗಿ ಕಚೇರಿಗಳಿಗೆ ತೆರಳ್ತಿರೊ ವಾಹನ ಸವಾರರು ಮರದ ಕೆಳಗೆ ಆಶ್ರಯ ಪಡೆದು ನಿಂತಿರುವ ದೃಶ್ಯ ಕಾಣಸಿಕ್ಕಿದೆ.