ಒಂದೇ ದಿನ ಮೂರು ಸೂಪರ್ ಓವರ್.. ಐಪಿಎಲ್ನಲ್ಲಿ ಹೊಸ ಇತಿಹಾಸ!
ಐಸಿಸಿ ನಿಯಮದ ಪ್ರಕಾರ ಮೊದಲ ಸೂಪರ್ನಲ್ಲಿ ಕಣಕ್ಕಿಳಿದ ಬ್ಯಾಟ್ಸ್ಮನ್ಗಳು ಮತ್ತೆ ಬ್ಯಾಟಿಂಗ್ ಮಾಡುವಂತಿಲ್ಲ. ಹಾಗೆಯೇ ಮೊದಲ ಸೂಪರ್ ಓವರ್ ಮಾಡಿದ ಬೌಲರ್ ಮತ್ತೊಮ್ಮೆ ಬೌಲಿಂಗ್ ಮಾಡೋಹಾಗಿಲ್ಲ.. ಆದ್ರಿಂದ, ಸೂಪರ್ ಓವರ್ 2.O ನಲ್ಲಿ ಮುಂಬೈ ಇಂಡಿಯನ್ಸ್ ಪರ ಕೆರಾನ್ ಪೊಲ್ಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯಾ ಇನ್ನಿಂಗ್ಸ್ ಆರಂಭಿಸಿದ್ರು. ಪಂಜಾಬ್ ಪರ ಮೊಹಮ್ಮದ್ ಶಮಿ ಬದಲು ಕ್ರಿಸ್ ಜೋರ್ಡನ್ ಬೌಲಿಂಗ್ ಮಾಡಲು ಮುಂದಾದ್ರು. ಹಾಗಾದ್ರೆ ಸೂಪರ್ ಓವರ್ 2.O ಹೇಗಿತ್ತು ಅನ್ನೋದನ್ನ ನೋಡೋದಾದ್ರೆ. ಬಾಲ್ ನಂ 1 1 […]
ಐಸಿಸಿ ನಿಯಮದ ಪ್ರಕಾರ ಮೊದಲ ಸೂಪರ್ನಲ್ಲಿ ಕಣಕ್ಕಿಳಿದ ಬ್ಯಾಟ್ಸ್ಮನ್ಗಳು ಮತ್ತೆ ಬ್ಯಾಟಿಂಗ್ ಮಾಡುವಂತಿಲ್ಲ. ಹಾಗೆಯೇ ಮೊದಲ ಸೂಪರ್ ಓವರ್ ಮಾಡಿದ ಬೌಲರ್ ಮತ್ತೊಮ್ಮೆ ಬೌಲಿಂಗ್ ಮಾಡೋಹಾಗಿಲ್ಲ.. ಆದ್ರಿಂದ, ಸೂಪರ್ ಓವರ್ 2.O ನಲ್ಲಿ ಮುಂಬೈ ಇಂಡಿಯನ್ಸ್ ಪರ ಕೆರಾನ್ ಪೊಲ್ಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯಾ ಇನ್ನಿಂಗ್ಸ್ ಆರಂಭಿಸಿದ್ರು. ಪಂಜಾಬ್ ಪರ ಮೊಹಮ್ಮದ್ ಶಮಿ ಬದಲು ಕ್ರಿಸ್ ಜೋರ್ಡನ್ ಬೌಲಿಂಗ್ ಮಾಡಲು ಮುಂದಾದ್ರು. ಹಾಗಾದ್ರೆ ಸೂಪರ್ ಓವರ್ 2.O ಹೇಗಿತ್ತು ಅನ್ನೋದನ್ನ ನೋಡೋದಾದ್ರೆ. ಬಾಲ್ ನಂ 1 1 ರನ್ ಕ್ರಿಸ್ ಜೋರ್ಡನ್ರ ಮೊದಲ ಎಸೆತವನ್ನ ಲಾಂಗ್ ಆನ್ನತ್ತ ಬಾರಿಸಿದ ಕೆರಾನ್ ಪೊಲ್ಲಾರ್ಡ್ 1 ರನ್ ಗಳಿಸಿದ್ರು
ಬಾಲ್ ನಂ 2 ವೈಡ್ ಹಾರ್ದಿಕ್ ಪಾಂಡ್ಯಾ ಸ್ಟ್ರೈಕ್ನಲ್ಲಿದ್ದಾದ ಜೋರ್ಡನ್ ಎರಡನೇ ಎಸೆತವನ್ನ ಆನ್ಸೈಡ್ನತ್ತ ವೈಡ್ ಹಾಕಿದ್ರು. ಬಾಲ್ ನಂ 2 1 ರನ್ ಎರಡನೇ ಎಸೆತವನ್ನ ಜೋರ್ಡನ್ ಯಾರ್ಕರ್ ಹಾಕಿದ್ರು. ಡೀಪ್ ಮಿಡ್ ವಿಕೆಟ್ನತ್ತ ಡ್ರೈವ್ ಮಾಡಿದ ಪಾಂಡ್ಯಾ 1 ರನ್ ಗಳಿಸಿದ್ರು
ಬಾಲ್ ನಂ 3 ಬೌಂಡರಿ ಮೂರನೇ ಎಸೆತವನ್ನ ಪವರ್ ಹಿಟ್ಟರ್ ಪೊಲ್ಲಾರ್ಡ್ ಡೀಪ್ ಕವರ್ನಲ್ಲಿ ಬೌಂಡರಿ ಬಾರಿಸಿದ್ರು. ಅಲ್ಲಿಗೆ ಮುಂಬೈ ಮೂರನೇ ಎಸೆತದಲ್ಲಿ 8 ರನ್ ಕಲೆಹಾಕ್ತು.
ಬಾಲ್ ನಂ 4 ವೈಡ್ ಸಾಕಷ್ಟು ಒತ್ತಡವನ್ನ ಎದುರಿಸಿದ ಜೋರ್ಡನ್ ನಾಲ್ಕನೇ ಎಸೆತವನ್ನ ವೈಡ್ ಹಾಕಿದ್ರು. ಬಾಲ್ ನಂ 4 1 ರನ್ 4 ನೇ ಎಸೆತದಲ್ಲಿ ಎರಡು ರನ್ ಕಂಪ್ಲೀಟ್ ಮಾಡೋಕಾಗದೇ ಹಾರ್ದಿಕ್ ಪಾಂಡ್ಯಾ ನಾನ್ ಸ್ಟ್ರೈಕ್ನತ್ತ ರನೌಟ್ ಆದ್ರು.
ಬಾಲ್ ನಂ 5 0 ರನ್ ಜೋರ್ಡನ್ 5ನೇ ಎಸೆತದಲ್ಲಿ ಪೊಲ್ಲಾರ್ಡ್ ಕೀಪರ್ ಕೈಗೆ ಕ್ಯಾಚ್ ಕೊಟ್ಟು ಔಟ್ ಆಗಿರ್ತರೆ. ಪೊಲ್ಲಾರ್ಡ್ ಔಟ್ ಅಂತ ಒಪ್ಪಿಕೊಳ್ಳದೇ ಡಿಆರ್ಎಸ್ ಮೊರೆ ಹೋದ್ರು. ಆದ್ರೆ ಅಸಲಿಗೆ ಚೆಂಡು ಬ್ಯಾಟ್ಗೆ ಬಡಿದಿದ್ದಿಲ್ಲ.
ಬಾಲ್ ನಂ 6 2 ರನ್ ಜೋರ್ಡನ್ರ ಕೊನೇ ಎಸೆತದಲ್ಲಿ ಪೊಲ್ಲಾರ್ಡ್ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸರ್ ಬಾರಿಸಿದ್ರು. ಆದ್ರೆ ಕನ್ನಡಿಗ ಮಯಾಂಕ್ ಅಗರ್ವಾಲ್ ಬೌಂಡರಿಗೆರೆಯ ತುದಿಯಲ್ಲೇ ನಿಂತು ಕ್ಯಾಚ್ ಹಿಡಿದು, ಮೈದಾನದೊಳಗೆ ಚೆಂಡನ್ನ ಎಸೀತಾರೆ. ಅಲ್ಲಿಗೆ ಮಯಾಂಕ್ 4 ರನ್ ಸೇವ್ ಮಾಡ್ತಾರೆ. ಇದ್ರೊಂದಿಗೆ ಮುಂಬೈ ಸೂಪರ್ ಓವರ್ನಲ್ಲಿ 11 ರನ್ ಗಳಿಸುತ್ತೆ.
12 ರನ್ಗಳ ಗುರಿ ಬೆನ್ನತ್ತಿದ್ದ ಪಂಜಾಬ್ ಪರ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಹಾಗೂ ಕನ್ನಡಿಗ ಮಯಾಂಕ್ ಇನ್ನಿಂಗ್ಸ್ ಆರಂಭಿಸಿದ್ರೆ, ಟ್ರೆಂಟ್ ಬೌಲ್ಟ್ ಬೌಲಿಂಗ್ ಮಾಡಿದ್ರು.
ಬಾಲ್ ನಂ 1 6 ರನ್ ಟ್ರೆಂಟ್ ಬೌಲ್ಟ್ ಹಾಕಿದ ಫುಲ್ಟಾಸ್ ಎಸೆತವನ್ನ ಕ್ರಿಸ್ ಗೇಲ್, 90 ಮೀಟರ್ ಉದ್ದದ ಭರ್ಜರಿ ಸಿಕ್ಸರ್ ಬಾರಿಸಿದ್ರು. ಅಲ್ಲಿಗೆ ಪಂಜಾಬ್ ಗೆಲ್ಲೋಕೆ 5 ಬಾಲ್ನಲ್ಲಿ 6 ರನ್ ಬೇಕಾಗುತ್ತೆ.
ಬಾಲ್ ನಂ 2 1 ರನ್ ಎರಡನೇ ಎಸೆತದಲ್ಲಿ ಕ್ರಿಸ್ ಗೇಲ್ ಸ್ಕ್ಯಾರ್ ಲೆಗ್ನತ್ತ ಡ್ರೈವ್ ಮಾಡಿ ಒಂದು ರನ್ ಗಳಿಸ್ತಾರೆ.
ಬಾಲ್ ನಂ 3 4 ರನ್ ಮೂರನೇ ಎಸೆತದಲ್ಲಿ ಮಯಾಂಕ್ ಅಗರ್ವಾಲ್ ಡೀಪ್ ಎಕ್ಟ್ರಾ ಕವರ್ನತ್ತ ಬೌಂಡರಿ ಬಾರಿಸಿದ್ರು..
ಬಾಲ್ ನಂ 4 4 ರನ್ ನಾಲ್ಕನೇ ಎಸೆತದಲ್ಲಿ ಮಯಾಂಕ್ ಡೀಪ್ ಮಿಡ್ ವಿಕೆಟ್ನತ್ತ ಬೌಂಡರಿ ಬಾರಿಸಿ ಪಂಜಾಬ್ಗೆ ಗೆಲುವು ತಂದುಕೊಡ್ತಾರೆ. ಇದ್ರೊಂದಿಗೆ ಎರಡನೇ ಸೂಪರ್ ಓವರ್ನಲ್ಲಿ ಗೆದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಕ್ಯಾಂಪ್ನಲ್ಲಿ ಆಟಗಾರರ ಖುಷಿಗೆ ಪಾರಾವೇ ಇರಲಿಲ್ಲ.
Published On - 9:00 am, Mon, 19 October 20