ರಾಯಚೂರು: ಜಿಲ್ಲೆಯಲ್ಲಿ 1 ವಾರದಿಂದ ನಿರಂತರ ಮಳೆಯಾಗುತ್ತಿದೆ. ಇದರಿಂದ ಬೂರ್ದಿಪಾಡ ಗ್ರಾಮದಲ್ಲಿ ಜಮೀನಿನಲ್ಲಿ ನೀರು ನಿಂತಿದೆ. ಹೆಸರು, ಹತ್ತಿ, ಮೆಣಸಿನಕಾಯಿ ಬೆಳೆಗಳು ಜಲಾವೃತಗೊಂಡಿವೆ.
ಸ್ವಿಮ್ಮಿಂಗ್ ಪೂಲ್ ಆಯ್ತು ಜಮೀನು ಹೀಗೆ ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆಯಿಂದ ತೋಟಗಳಲ್ಲಿ ನೀರು ನಿಂತು ರೈತರು ಕಂಗಾಲಾಗಿದ್ದಾರೆ. ಸುತ್ತಮುತ್ತಲ ಹಳ್ಳಕೊಳ್ಳದಿಂದ ಬಂದ ನೀರು ಜಮೀನಿನಲ್ಲೆ ನಿಂತಿದೆ. ಈ ಮಧ್ಯೆ ಅದೇ ನೀರಿನಲ್ಲಿ ರೈತರು ಈಜಾಡುತ್ತಿದ್ದಾರೆ.
ಬೆಳೆ ಮಧ್ಯೆಯೇ ಈಜಾಡಿದ ರೈತ ಇನ್ನು, ರಾಯಚೂರ ತಾಲೂಕಿನ ಬೂರ್ದಿಪಾಡ ರೈತನ ಜಮೀನಿನಲ್ಲಂತೂ ಎದೆಯತ್ತರದಷ್ಟು ನೀರು ನಿಂತಿದೆ. ಹೆಸರು, ಹತ್ತಿ ಮೆಣಸಿನಕಾಯಿ ಬೆಳೆದಿದ್ದ ರೈತ ಮಲ್ಲಯ್ಯ ಬೆಳೆ ಕಳಕೊಂಡು ಪಡಿಪಾಟಲು ಅನುಭವಿಸುತ್ತಿದ್ದಾನೆ. ಜಮೀನಿಗೆ ನುಗ್ಗಿದ ನೀರು ತೆರವುಗೊಳಿಸಲು ಆಗದೆ, ಬೆಳೆ ಕಳಕೊಂಡು ಕಂಗಾಲಾದ ರೈತ ಮಲ್ಲಯ್ಯ ಆ ನೀರಿನಲ್ಲೇ ಈಜು ಹೊಡೆಯುವ ಮೂಲಕ ತೋಟದಲ್ಲಿ ನೀರು ಹೇಗೆ ನಿಂತಿದೆ ಎಂಬುದನ್ನು ಸಾಕ್ಷ್ಯ ರೂಪದಲ್ಲಿ ತೋರಿಸಿದ್ದಾನೆ.