ಧುಮ್ಮಿಕ್ಕಿ ಹರಿಯುತ್ತಿದೆ ಕಾಫಿನಾಡಿನ ಹೆಬ್ಬೆ ಫಾಲ್ಸ್​, ರುದ್ರರಮಣೀಯ ದೃಶ್ಯ ಸೆಳೆಯುತ್ತಿದೆ ಕಣ್ಮನ!

ಚಿಕ್ಕಮಗಳೂರು: ಕಾಫಿನಾಡಿನ ಮುಳ್ಳಯ್ಯನಗಿರಿ ಹಾಗೂ ದತ್ತಪೀಠ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಹೆಬ್ಬೆ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ. ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಜಲಪಾತದ ಸೊಬಗಿಗೆ ಮನಸೋತ ಪ್ರವಾಸಿಗರು ಅದನ್ನು ಕಣ್ತುಂಬಿಕೊಳ್ಳಲು ತಂಡೋಪತಂಡವಾಗಿ ಬರುತ್ತಿದ್ದಾರೆ. ಕಳೆದೊಂದು ವಾರದಿಂದಲೂ ಧುಮ್ಮಿಕ್ಕಿ ಹರಿಯುತ್ತಿರೋ ಜಲಪಾತದ ಹಾಲ್ನೊರೆಯಂಥ ನೀರನ್ನು ನೋಡಿ ಎಂಜಾಯ್​ ಮಾಡ್ತಿದ್ದಾರೆ. ಸುಮಾರು 80 ಅಡಿ ಎತ್ತರವಿರುವ ಜಲಪಾತದ ರುದ್ರರಮಣೀಯ ದೃಶ್ಯಗಳನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿಯುತ್ತಿದ್ದಾರೆ.

ಧುಮ್ಮಿಕ್ಕಿ ಹರಿಯುತ್ತಿದೆ ಕಾಫಿನಾಡಿನ ಹೆಬ್ಬೆ ಫಾಲ್ಸ್​, ರುದ್ರರಮಣೀಯ ದೃಶ್ಯ ಸೆಳೆಯುತ್ತಿದೆ ಕಣ್ಮನ!
Edited By:

Updated on: Sep 21, 2020 | 1:47 PM

ಚಿಕ್ಕಮಗಳೂರು: ಕಾಫಿನಾಡಿನ ಮುಳ್ಳಯ್ಯನಗಿರಿ ಹಾಗೂ ದತ್ತಪೀಠ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಹೆಬ್ಬೆ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ.

ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಜಲಪಾತದ ಸೊಬಗಿಗೆ ಮನಸೋತ ಪ್ರವಾಸಿಗರು ಅದನ್ನು ಕಣ್ತುಂಬಿಕೊಳ್ಳಲು ತಂಡೋಪತಂಡವಾಗಿ ಬರುತ್ತಿದ್ದಾರೆ. ಕಳೆದೊಂದು ವಾರದಿಂದಲೂ ಧುಮ್ಮಿಕ್ಕಿ ಹರಿಯುತ್ತಿರೋ ಜಲಪಾತದ ಹಾಲ್ನೊರೆಯಂಥ ನೀರನ್ನು ನೋಡಿ ಎಂಜಾಯ್​ ಮಾಡ್ತಿದ್ದಾರೆ. ಸುಮಾರು 80 ಅಡಿ ಎತ್ತರವಿರುವ ಜಲಪಾತದ ರುದ್ರರಮಣೀಯ ದೃಶ್ಯಗಳನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿಯುತ್ತಿದ್ದಾರೆ.