ಬೀದರ್: ಹೈದರಾಬಾದ್ ಕರ್ನಾಟಕದ ಪ್ರಮುಖ ದೇವಾಲಯಗಳಲ್ಲೊಂದಾದ ಮೈಲಾರ ಮಲ್ಲಣ್ಣ ದೇವಾಸ್ಥಾನದ ಹೊಂಡಗಳು ಇದೀಗ ಅವಸಾನದ ಅಂಚಿನಲ್ಲಿವೆ. ಶತಮಾನಗಳ ಇತಿಹಾಸ ಸಾರುವ ಅಪರೂಪದ ಹೊಂಡಗಳನ್ನು, ಇಲ್ಲಿನ ಮೂರ್ತಿಗಳನ್ನ ಸಂರಕ್ಷಿಸುವಲ್ಲಿ ಪುರಾತತ್ವ ಇಲಾಖೆ ವಿಫಲವಾಗಿದೆ. ಪರಿಣಾಮ ದಕ್ಷಿಣದ ಕಾಶಿ ಅಂತಲೇ ಪ್ರಸಿದ್ಧಿ ಪಡೆದಿರುವ ಮೈಲಾರ ಮಲ್ಲಣ್ಣ ದೇವಾಲಯದ ಹೊಂಡಗಳು ಈಗ ಅಳಿವಿನಂಚಿನಲ್ಲಿ ಕುಸಿಯುತ್ತಿವೆ.
ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷ
ಹೊಂಡಗಳಲ್ಲಿ ಸ್ನಾನ ಮಾಡಿ ದರ್ಶನ ಪಡೆದರೆ ಪಾಪ ಪರಿಹಾರ
ಪವಾಡ ಪುರುಷನ ನಾಡು ಎಂದೇ ಖ್ಯಾತಿಯಾಗಿರುವ ಸುಕ್ಷೇತ್ರ ಮೈಲಾರಕ್ಕೆ ಪ್ರತಿ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಹಾಗೇ ಬರುವ ಭಕ್ತರು ಹೊಂಡಗಳಲ್ಲಿ ಸ್ನಾನ ಮಾಡಿ ದರ್ಶನ ಪಡೆದರೆ ಪಾಪ ಪರಿಹಾರವಾಗುತ್ತದೆ ಅನ್ನುವ ನಂಬಿಕೆಯಿದೆ. ಹೀಗಾಗಿ ಪ್ರತಿಯೊಬ್ಬ ಭಕ್ತರು ಇಲ್ಲಿನ ಹೊಂಡಗಳಲ್ಲಿ ಸ್ನಾನ ಮಾಡುತ್ತಾರೆ. ಆದರೆ ಈಗ ಇಲ್ಲಿನ ಹೊಂಡಗಳಲ್ಲಿ ನೀರು ನಿಲ್ಲುತ್ತಿಲ್ಲ. ಸ್ನಾನ ಮಾಡದೇ ದೇವರ ದರ್ಶನ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿವೆ ಹೊಂಡಗಳು
ಪವಿತ್ರ ಸ್ನಾನ ಮಾಡದೇ ದೇವರ ದರ್ಶನದ ಅನಿವಾರ್ಯತೆ
ಇತಿಹಾಸ ಸಾರುವ ಪ್ರಸಿದ್ಧ ಹೊಂಡಗಳು ಈ ರೀತಿ ವಿನಾಶದ ಅಂಚಿಗೆ ಬಂದು ನಿಂತಿರೋದು ಸ್ಥಳೀಯರು ಮತ್ತು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಹೀಗೆ ಮುಂದುವರೆದರೆ ಇತಿಹಾಸ ಸಾರುವ ಅದ್ಭುತ ದೇವಸ್ಥಾನದ ಕುರುಹು ಕೂಡ ಅಳಿಯುವುದರಲ್ಲಿ ಅನುಮಾನವೇ ಇಲ್ಲಾ. ಹೀಗಾಗಿ ಕೂಡಲೇ ಪ್ರವಾಸೋದ್ಯಮ ಇಲಾಖೆ ಮತ್ತು ಪುರಾತತ್ವ ಇಲಾಖೆ ಇತ್ತ ಗಮನ ಹರಿಸಿ ಶಿಲ್ಪಕಲೆಯ ನಾಡನ್ನ ಸಂರಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ.
-ಸುರೇಶ್ ನಾಯ್ಕ್
Published On - 5:46 pm, Wed, 17 June 20