ಕೋಟೆ ನಾಡಿನಲ್ಲಿ ಹೊರಬೀಡು ಆಚರಣೆ: ಇಡೀ ಊರಿಗೆ ಊರೇ ಖಾಲಿ!

ಚಿತ್ರದುರ್ಗ: ಗ್ರಾಮೀಣ ಭಾಗದಲ್ಲಿ ವರ್ಷಕ್ಕೊಮ್ಮೆ ಜಾತ್ರೆ ಉತ್ಸವಗಳು ನಡೆಯುವುದು, ಊರ ಉತ್ಸವಕ್ಕಾಗಿ ತೋರಣ ಕಟ್ಟಿ ಸಿಂಗಾರ ಮಾಡುವುದು ಸಹಜ. ಆದ್ರೆ, ಆ ಗ್ರಾಮದಲ್ಲಿ ಮಾತ್ರ ಜಾತ್ರೆಯ ದಿನ ಊರಿನಲ್ಲಿ ಜನರೇ ಇರೋದಿಲ್ಲ. ಇಡೀ ಊರೇ ಬೀಕೋ ಅಂತಿರುತ್ತೆ. ಅಷ್ಟಕ್ಕೂ ಏನಿದು ವಿಶಿಷ್ಟ ಆಚರಣೆ ಅನ್ನೋದು ಇಲ್ಲಿದೆ. ಒಂದೇ ಒಂದು ಮನೆ ಬಾಗಿಲು ತೆರೆದಿಲ್ಲ. ಇಡೀ ಊರಿನಲ್ಲಿ ಒಬ್ಬೇ ಒಬ್ರು ಕಣ್ಣಿಗೆ ಕಾಣ್ತಿಲ್ಲ. ಪ್ರತೀ ಮನೆಗೂ ಬೀಗ ಹಾಕಿದ್ರೆ, ಊರ ಸುತ್ತಾ ಬೇಲಿ ಹಾಕಿದ್ದಾರೆ. ಗಮನ ಸೆಳೆಯುತ್ತಿದೆ ಕೋಟೆನಾಡಿನ ‘ಹೊರಬೀಡು’  […]

ಕೋಟೆ ನಾಡಿನಲ್ಲಿ ಹೊರಬೀಡು ಆಚರಣೆ: ಇಡೀ ಊರಿಗೆ ಊರೇ ಖಾಲಿ!
Follow us
ಸಾಧು ಶ್ರೀನಾಥ್​
|

Updated on: Jan 21, 2020 | 12:19 PM

ಚಿತ್ರದುರ್ಗ: ಗ್ರಾಮೀಣ ಭಾಗದಲ್ಲಿ ವರ್ಷಕ್ಕೊಮ್ಮೆ ಜಾತ್ರೆ ಉತ್ಸವಗಳು ನಡೆಯುವುದು, ಊರ ಉತ್ಸವಕ್ಕಾಗಿ ತೋರಣ ಕಟ್ಟಿ ಸಿಂಗಾರ ಮಾಡುವುದು ಸಹಜ. ಆದ್ರೆ, ಆ ಗ್ರಾಮದಲ್ಲಿ ಮಾತ್ರ ಜಾತ್ರೆಯ ದಿನ ಊರಿನಲ್ಲಿ ಜನರೇ ಇರೋದಿಲ್ಲ. ಇಡೀ ಊರೇ ಬೀಕೋ ಅಂತಿರುತ್ತೆ. ಅಷ್ಟಕ್ಕೂ ಏನಿದು ವಿಶಿಷ್ಟ ಆಚರಣೆ ಅನ್ನೋದು ಇಲ್ಲಿದೆ. ಒಂದೇ ಒಂದು ಮನೆ ಬಾಗಿಲು ತೆರೆದಿಲ್ಲ. ಇಡೀ ಊರಿನಲ್ಲಿ ಒಬ್ಬೇ ಒಬ್ರು ಕಣ್ಣಿಗೆ ಕಾಣ್ತಿಲ್ಲ. ಪ್ರತೀ ಮನೆಗೂ ಬೀಗ ಹಾಕಿದ್ರೆ, ಊರ ಸುತ್ತಾ ಬೇಲಿ ಹಾಕಿದ್ದಾರೆ.

ಗಮನ ಸೆಳೆಯುತ್ತಿದೆ ಕೋಟೆನಾಡಿನ ‘ಹೊರಬೀಡು’  ಕೋಟೆನಾಡು ಚಿತ್ರದುರ್ಗದಲ್ಲಿ ಒಂದಿಲ್ಲೊಂದು ವಿಶೇಷ ಹಬ್ಬಗಳ ಆಚರಣೆ ನಡೆಯುತ್ತೆ. ಇಂದಿಗೂ ಇಲ್ಲಿ ಹಲವು ಸಂಸ್ಕೃತಿಗಳು ಜೀವಂತವಾಗಿವೆ. ಇವುಗಳ ಸಾಲಿನಲ್ಲಿ ಕಾಣೋದೆ ಹೊರಬೀಡು ಆಚರಣೆ. ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗೊಲ್ಲರಹಟ್ಟಿಯಲ್ಲಿ ವರ್ಷಕ್ಕೊಮ್ಮೆ ಬಾಲ ರಂಗನಾಥ ಸ್ವಾಮಿ ಜಾತ್ರೆ ನಡೆಯುತ್ತೆ. ಆದ್ರೆ, ಊರ ಉತ್ಸವಕ್ಕೂ ಮುನ್ನ ‘ಹೊರಬೀಡು’ ಆಚರಣೆ ಆಚರಿಸಲಾಗುತ್ತೆ. ಸೂರ್ಯೋದಯದ ವೇಳೆಗೆ ಇಡೀ ಊರ ಜನ ತಮ್ಮ ಜಾನುವಾರುಗಳ ಸಮೇತ ನಿತ್ಯ ಉಪಯೋಗಿ ವಸ್ತುಗಳೊಂದಿಗೆ ಊರು ತೊರೆಯುತ್ತಾರೆ. ಇಡೀ ಗ್ರಾಮಕ್ಕೆ ಮುಳ್ಳು ಬೇಲಿ ಹಾಕಿ ಊರ ಹೊರ ಭಾಗದ ತೋಟ, ಜಮೀನುಗಳಲ್ಲಿ ಸೇರುತ್ತಾರೆ. ಇದನ್ನೇ ಹೊರಬೀಡು ಆಚರಣೆ ಅಂತಾರೆ.

ಸೂರ್ಯಾಸ್ತದವರೆಗೆ ಜಮೀನುಗಳಲ್ಲೇ ಕಾಲ ಕಳೆಯುತ್ತಾರೆ: ಇನ್ನು ಬೆಳಗ್ಗೆ ಸೂರ್ಯೋದಯದ ವೇಳೆಗೆ ಊರು ತೊರೆದವರು ಸಂಜೆ ಸೂರ್ಯಾಸ್ತದವರೆಗೆ ತೋಟ ಜಮೀನುಗಳಲ್ಲೇ ಕಾಲ ಕಳೆಯುತ್ತಾರೆ. ಈ ವೇಳೆ ತಮ್ಮಿಷ್ಟದ ತಿಂಡಿ ತಿನಿಸುಗಳನ್ನು ತಯಾರಿಸಿ ಕುಟುಂಬದೊಂದಿಗೆ ಊಟ ಮಾಡಿ ಖುಷಿ ಪಡ್ತಾರೆ. ಸಂಜೆ ವೇಳೆಗೆ ಗೋಮಾತೆಯೊಂದಿಗೆ ಗ್ರಾಮ ಪ್ರವೇಶಿಸುತ್ತಾರೆ. ಈ ಆಚರಣೆಯಿಂದ ಗ್ರಾಮಕ್ಕೆ ಒಳಿತಾಗಿ ಮಳೆ ಬೆಳೆ ಸಮೃದ್ಧವಾಗಿ ಆಗುತ್ತೆ ಅನ್ನೋದು ಜನರ ನಂಬಿಕೆ. ಒಟ್ನಲ್ಲಿ ವರ್ಷಕ್ಕೊಮ್ಮೆ ಇಡೀ ಊರ ಜನರೇ ಗ್ರಾಮ ತೊರೆಯೋ ಮೂಲಕ ಹೊರಬೀಡು ಆಚರಣೆ ಮಾಡುತ್ತಾರೆ. ಆಧುನಿಕತೆಯ ನಡುವೆಯೂ ತಮ್ಮ ಸಂಪ್ರದಾಯ, ಸಂಸ್ಕೃತಿಯನ್ನ ಉಳಿಸಿಕೊಂಡು ಬರ್ತಿದ್ದಾರೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್