Horoscope: ವೃಶ್ಚಿಕ ರಾಶಿಯವರಿಗೆ ಹತ್ತಿರದವರಿಂದಲೇ ಮೋಸವಾಗುವ ಸಂಭವವಿದೆ
Dina Bhavishya: ಫೆಬ್ರವರಿ 09, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಪುಷ್ಯಮಾಸ, ಹೇಮಂತ ಋತು, ಕೃಷ್ಣಪಕ್ಷ, ತ್ರಯೋದಶಿ ತಿಥಿ, ಮಂಗಳವಾರ, ಫೆಬ್ರವರಿ 9, 2021. ರಾಹುಕಾಲ: ಇಂದು ಸಂಜೆ 3.21ರಿಂದ ಸಂಜೆ 4.47ವರೆಗೆ. ಸೂರ್ಯೋದಯ: ಬೆಳಿಗ್ಗೆ 6.45. ಸೂರ್ಯಾಸ್ತ: ಸಂಜೆ 6.14.
ತಾ.09-02-2021 ರ ಮಂಗಳವಾರ ರಾಶಿಭವಿಷ್ಯ
ಮೇಷ: ಕೌಟುಂಬಿಕ ಕಲಹ ಹೆಚ್ಚಾಗುವ ಸಾಧ್ಯತೆ ಇದೆ ಸಮಾಧಾನ ಚಿತ್ತದಿಂದ ವರ್ತಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವದು. ಹಾನಿ ಇಲ್ಲ ಆದರೆ ಲಾಭವೂ ಇಲ್ಲದ ಸ್ಥಿತಿ ಇರುವದು. ಶುಭ ಸಂಖ್ಯೆ: 4
ವೃಷಭ: ಹಿರಿಯರಿಗೆ ಅನಾರೋಗ್ಯ ಸಂಭವ. ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಉದ್ಯೋಗ ಬದಲಿ ಮಾಡುವದು ಸದ್ಯಕ್ಕೆ ಬೇಡ. ಹಣಕಾಸಿನ ವಿಷಯದಲ್ಲಿ ಬಂಧುಗಳು ಸಹಕಾರ ತೋರುವರು. ಶುಭ ಸಂಖ್ಯೆ: 7
ಮಿಥುನ: ಕೃಷಿಮೂಲದ ಲಾಭ ದೊರೆಯುವದು. ಸಹೋದ್ಯೋಗಿಗಳ ಸಹಾಯ ಅಪೃಕ್ಷಿಸದೇ ಸ್ವಂತಬಲದಿಂದ ಕೆಲಸ ನಿರ್ವಹಿಸಿರಿ.ಕೈಗೊಂಡ ಕಾರ್ಯಗಳು ಯಶಸ್ವಿಯಾಗುವವು. ನೌಕರರಿಗೆ ಕಿರಿಕಿರಿಯಾಗುವ ಸಂಭವವಿದೆ. ಶುಭ ಸಂಖ್ಯೆ: 2
ಕರ್ಕ: ಆಸ್ತಿ ವಿಷಯಕ್ಕೆ ಸಂಬಂಧಿಸಿಂತೆ ತೊಂದರೆಯಾಗುವ ಸಂಭವವಿದೆ. ಆದಾಯ ಉತ್ತಮವಾಗಿರುವದು.ನೌಕರಿಯಲ್ಲಿ ಅಸಹಕಾರ ಎದುರಿಬೇಕಾಗುವದು. ಗ್ರಹಸೌಖ್ಯವಿದ್ದರೂ ಮಾನಸಿಕ ನೆಮ್ಮದಿ ಇರಲಾರದು. ಶುಭ ಸಂಖ್ಯೆ: 9
ಸಿಂಹ: ನಿಶ್ಚಿತ ಕೆಲಸಕ್ಕೆ ಬೆಂಬಲ ಸಿಗುವದರಿಂದ ಉತ್ತಮ ಫಲ ದೊರೆಯುವದು. ಸುಮ್ಮನೇ ಕೂಡದ ಜಾಯಮಾನ ಇರುವದರಿಂದ ಹೊಸ ಯೋಜನೆಯನ್ನು ರೂಪಿಸುವಿರಿ. ಹಿಂದಿನ ಬಾಕಿ ವಸೂಲಾತಿಗೆ ಶ್ರಮಿಸಬೇಕಾಗುವದು. ಶುಭ ಸಂಖ್ಯೆ: 1
ಕನ್ಯಾ: ಬಂಧುವರ್ಗದಲ್ಲಿ ನಕಾರಾತ್ಮಕ ಚಿಂತನೆ ಇರುವದು. ಸತತ ಪ್ರಯತ್ನವಿಲ್ಲದೇ ಫಲ ದೊರೆಯಲಾರದು. ದಿನನಿತ್ಯದ ಕೆಲಸಕ್ಕೂ ವಿನಾಕಾರಣ ಅಡೆತಡೆ ಕಂಡುಬರುವ ಲಕ್ಷಣವಿದೆ. ಬುದ್ದಿಯಿಂದ ತಾಳ್ಮೆಕಳೆದುಕೊಳ್ಳದೇ ಮುಂದುವರೆಯಿರಿ. ಶುಭ ಸಂಖ್ಯೆ: 5
ತುಲಾ: ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸಿ. ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುವಿರಿ. ಸಾಮಜಿಕ ಗೌರವಗಳು ಅರಸಿಕೊಂಡು ಬರಲಿವೆ. ಮಾಲೀಕತ್ವದ ಆಸ್ತಿ ಕೈತಪ್ಪದಂತೆ ಎಚ್ಚರಿಕೆ ವಹಿಸಿರಿ. ಧನದ ಅಪವ್ಯಯ ಆಗದಂತೆ ನೋಡಿರಿ. ಶುಭ ಸಂಖ್ಯೆ: 7
ವೃಶ್ಚಿಕ: ಸಹೋದ್ಯೋಗಿಗಳೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅಪೂರ್ಣ ನಿರ್ಣಯಗಳು ಅಪಾಯ ತರಬಹುದು. ಅತೀ ವಿಶ್ವಾಸಿಕರೇ ಮೋಸಮಾಡುವ ಸಂಭವವಿದೆ. ದೂರ ಪ್ರಯಾಣ ಅಥವಾ ಪರಸ್ಥಳವಾಸ ಸಂಭವ. ಶುಭ ಸಂಖ್ಯೆ: 8
ಧನು:ಮನಸ್ಸು ಚಂಚಲವಾಗಿ ಮಾಡುವ ಕಾರ್ಯ ಅರ್ದಕ್ಕೆ ನಿಲ್ಲುವ ಸಂಭವವಿದೆ. ಕಷ್ಟಕಾಲದಲ್ಲಿಯೂ ಪರೋಪಕಾರದ ಬುದ್ಧಿ ತೋರುವಿರಿ. ಸಹಕಾರಿ ವಲಯದದಲ್ಲಿ ಅಪೇಕ್ಷಿತ ಲಾಭ ದೊರೆಯುವದು. ವಿದೇಶ ಪ್ರಯಾಣದ ಯೋಗವಿದೆ. ಶುಭ ಸಂಖ್ಯೆ: 3
ಮಕರ: ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ. ಶುಭ ಸಂಖ್ಯೆ: 2
ಕುಂಭ: ವಿಶೇಷ ರೀತಿಯ ಕಾರ್ಯ ಒದಗಿ ಬಂದು ಸಂತಸ ಉಂಟಾಗುತ್ತದೆ. ಸ್ಥಾನಮಾನಗಳಿಗೂ ಕೊರತೆ ಇಲ್ಲ. ವಿಶೇಷ ವಸ್ತು ಸಂಗ್ರಹ. ಅನಾರೋಗ್ಯ್ಗ ತೋರಿಬಂದು ಕಿರಿಕಿರಿ ಎನಿಸಬಹುದು. ಶುಭ ಸಂಖ್ಯೆ: 4
ಮೀನ: ಅನಾವಶ್ಯಕ ತಿರುಗಾಟ, ನೌಕರಿಯಲ್ಲಿ ಕಿರಿಕಿರಿ, ಸ್ಥಾನಪಲ್ಲಟ ಸಾಧ್ಯತೆ, ಬಡ್ತಿಯೋಗ, ವ್ಯಾಪಾರಿಗಳಿಗೆ ಸ್ಥಳದ ವಿಚಾರವಾಗಿ ಚಿಂತೆ ಇರುವದು. ಮಹಿಳೆಯರು, ವಿದ್ಯಾರ್ಥಿಗಳಿಗೆ ಸಂತೋಷ ಇರುವದು. ತರಕಾರಿ ದಾನ ಮಾಡಿರಿ. ಶುಭ ಸಂಖ್ಯೆ: 9

ಬಸವರಾಜ ಗುರೂಜಿ
(ಡಾ.ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ: 99728 48937)
Published On - 6:38 am, Tue, 9 February 21