Horoscope ದಿನ ಭವಿಷ್ಯ | ಈ ರಾಶಿಯವರು ಯೋಜನೆಗಳಿಗೆ ಪೂರ್ವ ತಯಾರಿ ಮಾಡುವ ಅಗತ್ಯತೆ ಇದೆ
Today Horoscope ಮಾರ್ಚ್ 16, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.
ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲಪಕ್ಷ, ತದಿಗೆ ತಿಥಿ, ಮಂಗಳವಾರ, ಮಾರ್ಚ್ 16, 2021. ಅಶ್ವಿನಿ ನಕ್ಷತ್ರ, ರಾಹುಕಾಲ : ಇಂದು ಸಂಜೆ 3.25 ರಿಂದ ಇಂದು ಸಂಜೆ 4.55ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.23. ಸೂರ್ಯಾಸ್ತ: ಸಂಜೆ 6.26.
ತಾ.16-03-2021 ರ ಮಂಗಳವಾರದ ರಾಶಿಭವಿಷ್ಯ
ಮೇಷ: ಆರ್ಥಿಕ ಸ್ಥಿತಿ ಸುಧಾರಿಸುವುದು. ಮಕ್ಕಳ ಉದ್ಯೋಗದ ಸಮಸ್ಯೆಗೆ ಪರಿಹಾರ ದೊರೆಯುವುದು. ಜೀವನದ ಹೊಸ ಆಯಾಮದೆಡೆಗೆ ಸಾಗುವ ಸೂಚನೆ ಇದೆ. ಶುಭ ಸಂಖ್ಯೆ: 6
ವೃಷಭ: ಮಾತು ಹಿಡಿತದಲ್ಲಿರಲಿ. ಅನವಶ್ಯಕ ವಾಗ್ವಾದ ಉಂಟಾಗುವ ಸಂಭವವಿದೆ. ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವುದು. ಹಿತೈಷಿಗಳ ಸಲಹೆಯಂತೆ ಮುಂದುವರೆಯಿರಿ. ಶುಭ ಸಂಖ್ಯೆ: 1
ಮಿಥುನ: ಶಾಂತಚಿತ್ತರಾಗಿ ಕೆಲಸ ನಿರ್ವಹಿಸಿರಿ. ಹೊಸ ವ್ಯಾಪಾರ, ಉದ್ಯೋಗದ ಅವಕಾಶಗಳು ಕೂಡಿ ಬರುವವು. ಹಳೆಯ ಸವಸ್ಯಗಳು ಪರಿಹಾರವಾಗುವವು. ಶುಭಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಶುಭ ಸಂಖ್ಯೆ: 8
ಕರ್ಕ: ವ್ಯಾಪಾರದಲ್ಲಿ ಅದೃಷ್ಟಲಾಭವಿದೆ. ವಿದ್ಯಾರ್ಥಿಗಳ ಮನೋಭಿಲಾಷೆ ಈಡೇರುವುದು. ಮನೆಯ ಜವಾಬ್ದಾರಿಗಳು ಹೆಚ್ಚುವವು. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಶುಭ ಸಂಖ್ಯೆ: 5
ಸಿಂಹ: ಯೋಜನೆಗಳಿಗೆ ಪೂರ್ವ ತಯಾರಿ ಮಾಡುವ ಅಗತ್ಯತೆ ಕಂಡುಬರುವುದು. ಹಣಕಾಸಿನ ವಿಷಯದಲ್ಲಿ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಸಹಾನುಭೂತಿಗೆ ಮಣಿಯದೆ ಇರುವುದು ಒಳಿತು. ಶುಭ ಸಂಖ್ಯೆ: 9
ಕನ್ಯಾ: ಸಮಾಧಾನಕರ ಜೀವನವಿದೆ. ಅಧಿಕಾರಿಗಳ ಸಹಕಾರ ದೊರೆಯುವುದು. ಮನೆ ಕಟ್ಟುವ ಆಸೆ ಕೈಗೂಡುವ ಸಮಯ. ಬಂಧುಮಿತ್ರರ ಹಾರೈಕೆ ತಮ್ಮೊಂದಿಗಿದೆ. ದೂರಪ್ರಯಾಣ ಯೋಗವಿದೆ. ಶುಭ ಸಂಖ್ಯೆ: 2
ತುಲಾ: ಹೊಸ ಆಸ್ತಿ ಖರೀದಿ ಅಥವಾ ಹೊಸ ಹೂಡಿಕೆ ಈಗ ಬೇಡ. ಕಂಟಕದಿಂದ ಪಾರಾಗುವ ಯೋಗವಿದೆ. ಒಳ್ಳೆಯ ಸ್ವಭಾವ ಇರುವದರಿಂದ ಉದ್ಯೋಗದಲ್ಲಿ ಹೆಚ್ಚಿನ ಬಡ್ತಿಯಾಗುವ ಕಾಲ. ಆಸಕ್ತಿಗೆ ತಕ್ಕಂತೆ ಅವಕಾಶಗಳು ದೊರಕುವವು. ಶುಭ ಸಂಖ್ಯೆ: 7
ವೃಶ್ಚಿಕ: ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಅನವಶ್ಯಕ ಭಯ ಅಗತ್ಯವಿಲ್ಲ, ನಿಮ್ಮ ಸೇವೆ ಫಲ ನೀಡುವದು. ಸಂಕಷ್ಟದ ಮಧ್ಯೆಯೂ ಸಂತೋಷದ ದಿನಗಳಿವೆ. ಆಗಂತುಕರೊಂದಿಗೆ ಜಾಗೃತೆ ಅಗತ್ಯ. ಶುಭ ಸಂಖ್ಯೆ: 4
ಧನು: ವ್ಯವಹಾರದಲ್ಲಿ ಹಾನಿ ಕಂಡುಬರುವದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವುದು. ಶುಭ ಸಂಖ್ಯೆ: 3
ಮಕರ: ಹಾನಿ ತಪ್ಪಿಸಲು ಪ್ರಯತ್ನಿಸುವಿರಿ. ಕಠಿಣ ಆತಂಕದಿಂದ ಪಾರಾಗುವಿರಿ. ಅಧಿಕಾರಿಗಳ ಉಪದ್ರವಕ್ಕೆ ಮಣಿಯದೇ ಡಿಟ್ಟತನದಿಂದ ಕೆಲಸ ನಿರ್ವಹಿಸಿ. ವ್ಯಾಪಾರವೃದ್ಧಿಯಾಗುವುದು. ಆರ್ಥಿಕ ಸಂಕಷ್ಟ ದೂರಾಗುವುದು. ಶುಭ ಸಂಖ್ಯೆ: 4
ಕುಂಭ: ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ವ್ಯವಹಾರದಲ್ಲಿ ಅಡೆತಡೆಗಳು ಕಂಡುಬರುವವು. ಅನಿವಾರ್ಯ ಕೆಲಸಗಳಗೆ ಅಲೆದಾಟ ಕಂಡುಬರುವದು. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುವುದು. ಶುಭ ಸಂಖ್ಯೆ: 8
ಮೀನ: ದಿಟ್ಟತನ, ಮನೋಸ್ಥೈರ್ಯ, ನೇರ, ನಿಷ್ಟುರ ನಡೆಗಳಿಗೆ ಉತ್ತಮ ಫಲಪ್ರಾಪ್ತವಾಗುವುದು. ನಿಮ್ಮ ನಿರ್ಧಾರಗಳು ಪರಿವರ್ತನೆಗೆ ಕಾರಣವಾಗುವವು. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವದು. ಶುಭ ಸಂಖ್ಯೆ: 5 ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937