Horoscope ದಿನ ಭವಿಷ್ಯ | ಈ ರಾಶಿಯವರಿಗೆ ತಮ್ಮ ಜಿಪುಣತನವೇ ತೊಂದರೆ ಉಂಟು ಮಾಡುತ್ತದೆ
Today Horoscope ಮಾರ್ಚ್ 19, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.
ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲಪಕ್ಷ, ಷಷ್ಠಿ ತಿಥಿ, ಶುಕ್ರವಾರ, ಮಾರ್ಚ್ 17, 2021. ಕೃತ್ತಿಕೆ ನಕ್ಷತ್ರ, ರಾಹುಕಾಲ : ಇಂದು ಬೆಳಿಗ್ಗೆ 10.52 ರಿಂದ ಇಂದು ಮಧ್ಯಾಹ್ನ 12.22ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.21. ಸೂರ್ಯಾಸ್ತ: ಸಂಜೆ 6.26.
ತಾ.19-03-2021 ರ ಶುಕ್ರವಾರದ ರಾಶಿಭವಿಷ್ಯ
ಮೇಷ: ಜಿಪುಣತನದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಸಹೋದರ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದೆ. ಪರಸ್ಪರ ದೋಷಾರೋಪ ಬೇಡ. ಮಿತ್ರರ ಸಹಾಯ ದೊರೆಯುವುದು. ಶುಭ ಸಂಖ್ಯೆ: 4
ವೃಷಭ: ಸಹೋದ್ಯೋಗಿಗಳೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅಪೂರ್ಣ ನಿರ್ಣಯಗಳು ಅಪಾಯ ತರಬಹುದು. ಅತೀ ವಿಶ್ವಾಸಿಕರೇ ಮೋಸಮಾಡುವ ಸಂಭವವಿದೆ. ದೂರ ಪ್ರಯಾಣ ಅಥವಾ ಪರಸ್ಥಳವಾಸ ಸಂಭವ. ಶುಭ ಸಂಖ್ಯೆ: 9
ಮಿಥುನ: ಹಣಕಾಸಿನ ವಿಷಯದಲ್ಲಿ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಸಹಾನುಭೂತಿಗೆ ಮಣಿಯದೆ ಇರುವುದು ಒಳಿತು. ಉನ್ನತ ಅಧಿಕಾರಿಗಳಿಂದ ತೊಂದರೆ ಉಂಟಾಗುವುದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಶುಭ ಸಂಖ್ಯೆ: 2
ಕರ್ಕ: ಅತಿಯಾದ ಮಾತು ಅಪಾಯಕ್ಕೆ ಕಾರಣ. ಆಲಸ್ಯದಿಂದ ಕಾರ್ಯಹಾನಿಯಾಗುವ ಸಾಧ್ಯತೆ ಇದೆ. ಆಸ್ತಿ ವ್ಯವಹಾರಗಳಲ್ಲಿ ತಜ್ಞರ ಸಹಾಯ ಪಡೆಯಿರಿ. ನೌಕರರಿಗೆ ಅಪೇಕ್ಷಿತ ಸ್ಥಾನಕ್ಕೆ ವರ್ಗಾವಣೆಯ ಆಗುವ ಯೋಗವಿದೆ. ಶುಭ ಸಂಖ್ಯೆ: 7
ಸಿಂಹ: ವ್ಯವಹಾರದಲ್ಲಿ ಹಾನಿ ಕಂಡುಬರುವುದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವುದು. ಶುಭ ಸಂಖ್ಯೆ: 5
ಕನ್ಯಾ: ನಿಶ್ಚಿತ ಆರ್ಥಿಕ ಸ್ಥಿತಿ ಇರುವುದರಿಂದ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅಲ್ಪ ಹಾನಿಯ ಸಂಭವವಿದೆ. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಿರಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ. ಶುಭ ಸಂಖ್ಯೆ: 8
ತುಲಾ: ಮಾತು ಹಿಡಿತದಲ್ಲಿರಲಿ. ಅನವಶ್ಯಕ ವಾಗ್ವಾದ ಉಂಟಾಗುವ ಸಂಭವವಿದೆ. ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವುದು. ಹಿತೈಷಿಗಳ ಸಲಹೆಯಂತೆ ಮುಂದುವರೆಯಿರಿ. ಶುಭ ಸಂಖ್ಯೆ: 3
ವೃಶ್ಚಿಕ: ಚಂಚಲಚಿತ್ತದಿಂದ ಕಾರ್ಯಹಾನಿಯಾಗುವ ಲಕ್ಷಣಗಳಿವೆ. ಆಸ್ತಿ ಸಂಬಂಧಿತ ಕ್ರಯವಿಕ್ರಯ ವ್ಯವಹಾರಗಳು ಕುದುರುವವು. ಅನವಶ್ಯಕ ಮಾತಿನಿಂದ ಇಕ್ಕಟ್ಟಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ತಜ್ಞರ ಸಹಾಯ ಪಡೆಯಿರಿ. ಶುಭ ಸಂಖ್ಯೆ: 4
ಧನು: ಕೆಲಸಕ್ಕೆ ತಕ್ಕ ಪ್ರೋತ್ಸಾಹ ದೊರೆಯುವುದು. ಶಾಂತಿ, ನೆಮ್ಮದಿಯುಕ್ತ ಜೀವನ ಇರುವದು. ನಡೆಯುತ್ತಿರುವ ದಾರಿ ಸರಿಯಾಗಿ ಇರುವುದರಿಂದ ಗುರಿ ಮುಟ್ಟುವುದು ನಿಶ್ಚಿತ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುವುದು. ಶುಭ ಸಂಖ್ಯೆ: 6
ಮಕರ: ಸಮಾಧಾನಕರ ಜೀವನವಿದೆ. ಅಧಿಕಾರಿಗಳ ಸಹಕಾರ ದೊರೆಯುವುದು. ಮನೆ ಕಟ್ಟುವ ಆಸೆ ಕೈಗೂಡುವ ಸಮಯ. ಬಂಧುಮಿತ್ರರ ಹಾರೈಕೆ ತಮ್ಮೊಂದಿಗಿದೆ. ದೂರ ಪ್ರಯಾಣ ಯೋಗವಿದೆ. ಶುಭ ಸಂಖ್ಯೆ: 9
ಕುಂಭ: ಅಪಮಾನ, ಅಪವಾದದಂತಹ ಸಮಸ್ಯೆಗೆ ಸಿಲುಕದಂತೆ ಜಾಗರೂಕರಾಗಿರಿ. ಈ ಸಮಯದಲ್ಲಿ ಮಾತನಾಡುವ ಬದಲು ಮಾತು ಕೇಳುವದು ಉತ್ತಮ. ಮಕ್ಕಳು ಶಾಲಾ ಕಾಲೇಜುಗಳಲ್ಲಿ ಸಾಧನೆ ತೋರುವುರು. ಶುಭ ಸಂಖ್ಯೆ: 1
ಮೀನ: ವ್ಯಥಾ ಚಿಂತೆ, ತಪ್ಪು ಕಲ್ಪನೆ, ನಿಷ್ಟುರ ಮಾತುಗಳನ್ನು ಕೇಳುವ ಸಂಭವ, ಜನ್ಮಸ್ಥ ಶುಕ್ರ ಇರುವುದರಿಂದ ಆರ್ಥಿಕ ಸುಭದ್ರತೆ ಇರುವುದು. ವಿದ್ಯಾರ್ಥಿಗಳಿಗೆ ಪರಿಶ್ರಮ ಅವಶ್ಯಕ. ಮನೆಯಲ್ಲಿ ಸಂತೋಷವಿರುವುದು. ಗೋಸೇವೆಯಿಂದ ಕಷ್ಟಪರಿಹಾರ. ಶುಭ ಸಂಖ್ಯೆ: 5 ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937