ಕ್ರೀಡಾ ವಿಜೇತರಿಗೆ ಇನ್ನೂ ಸಿಕ್ಕಿಲ್ಲ ಹಣ, ದಸರಾ ಉಸ್ತುವಾರಿ ಸಚಿವ ಸೋಮಣ್ಣ ಏನ್ಮಾಡಿದರು?
ಮೈಸೂರು: ದಸರಾ ಕ್ರೀಡಾಕೂಟದ ವಿಜೇತರಿಗೆ ಇನ್ನು ಹಣ ನೀಡದ ಅಧಿಕಾರಿಗೆ ವಸತಿ ಸಚಿವ ವಿ.ಸೋಮಣ್ಣ ವೇದಿಕೆಯಲ್ಲೇ ಬೆವರಿಳಿಸಿದ್ದಾರೆ. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯುವಜನ ಕ್ರೀಡಾ ಇಲಾಖೆ ಉಪ ನಿರ್ದೇಶಕ ಸುರೇಶ್‌ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ದಸರಾ ಕ್ರೀಡಾಕೂಟಕ್ಕೆ 7 ಕೋಟಿ ಹಣ ನೀಡಿದ್ದೇವೆ. ಆದ್ರೆ ಇವರು ಎಲ್ಲ ಹಣವನ್ನು ತಿಂದು ತೇಗಿದ್ದಾನೆ. ಮಕ್ಕಳಿಗೆ ನೀಡುವ ಹಣವನ್ನೂ ನೀಡಿಲ್ಲ. ಮೊದಲು ಅಕೌಂಟ್ ಬುಕ್ ತೆಗೆದುಕೊಂಡು ಬಾ. ಈಗಲೇ ಇವರನ್ನ ಸಸ್ಪೆಂಡ್ ಮಾಡಿ. ಇಲ್ಲಿಂದ ಜಾಗ ಖಾಲಿ […]
ಮೈಸೂರು: ದಸರಾ ಕ್ರೀಡಾಕೂಟದ ವಿಜೇತರಿಗೆ ಇನ್ನು ಹಣ ನೀಡದ ಅಧಿಕಾರಿಗೆ ವಸತಿ ಸಚಿವ ವಿ.ಸೋಮಣ್ಣ ವೇದಿಕೆಯಲ್ಲೇ ಬೆವರಿಳಿಸಿದ್ದಾರೆ. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯುವಜನ ಕ್ರೀಡಾ ಇಲಾಖೆ ಉಪ ನಿರ್ದೇಶಕ ಸುರೇಶ್‌ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ದಸರಾ ಕ್ರೀಡಾಕೂಟಕ್ಕೆ 7 ಕೋಟಿ ಹಣ ನೀಡಿದ್ದೇವೆ. ಆದ್ರೆ ಇವರು ಎಲ್ಲ ಹಣವನ್ನು ತಿಂದು ತೇಗಿದ್ದಾನೆ. ಮಕ್ಕಳಿಗೆ ನೀಡುವ ಹಣವನ್ನೂ ನೀಡಿಲ್ಲ. ಮೊದಲು ಅಕೌಂಟ್ ಬುಕ್ ತೆಗೆದುಕೊಂಡು ಬಾ. ಈಗಲೇ ಇವರನ್ನ ಸಸ್ಪೆಂಡ್ ಮಾಡಿ. ಇಲ್ಲಿಂದ ಜಾಗ ಖಾಲಿ ಮಾಡು. ನಾನು ಕ್ಯಾಬಿನೆಟ್‌ನಲ್ಲಿ ಅಪ್ರೂವ್ ಮಾಡ್ತೀನಿ. ಮೊದಲು ಅವರ ರಿಪೋರ್ಟ್ ನನಗೆ ಕಳುಹಿಸಿಕೊಡಿ ಎಂದು ಸಚಿವ ವಿ. ಸೋಮಣ್ಣ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Published On - 12:24 pm, Fri, 3 January 20