‘ಹಿಂದೆಂದೂ ಕಾಣದಷ್ಟು ವೇಗದಲ್ಲಿ ನಮ್ಮ ಸರಕಾರ ತಂತ್ರಜ್ಞಾನ ಬಳಕೆ ಮಾಡಿಕೊಳ್ತಿದೆ’
ಬೆಂಗಳೂರು: ಎರಡು ದಿನಗಳ ಕರ್ನಾಟಕ ಪ್ರವಾಸಕ್ಕೆ ಬಂದಿರುವ ಪ್ರಧಾನಿ ಮೋದಿ ಎರಡನೆಯ ದಿನವಾದ ಇಂದು ಜಿಕೆವಿಕೆಯಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನ ಜಿಕೆವಿಕೆಯಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಹೊಸ ವರ್ಷದ ನನ್ನ ಮೊದಲ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿದೆ. ಚಂದ್ರಯಾನ-2 ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿದ್ದೆ ಎಂದು ಹೇಳಿದರು. ಬೆಂಗಳೂರು ಮೊದಲು ಗಾರ್ಡನ್ ಸಿಟಿ ಆಗಿತ್ತು. ಈಗ ಸ್ಟಾರ್ಟ್‌ಅಪ್‌ಗಳ ನಗರವಾಗಿ ಬದಲಾಗಿದೆ. ಉದ್ಯಾನ ನಗರಿ ಬೆಂಗಳೂರು ಈಗ ವಿಜ್ಞಾನ ಮತ್ತು […]
ಬೆಂಗಳೂರು: ಎರಡು ದಿನಗಳ ಕರ್ನಾಟಕ ಪ್ರವಾಸಕ್ಕೆ ಬಂದಿರುವ ಪ್ರಧಾನಿ ಮೋದಿ ಎರಡನೆಯ ದಿನವಾದ ಇಂದು ಜಿಕೆವಿಕೆಯಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನ ಜಿಕೆವಿಕೆಯಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಹೊಸ ವರ್ಷದ ನನ್ನ ಮೊದಲ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿದೆ. ಚಂದ್ರಯಾನ-2 ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿದ್ದೆ ಎಂದು ಹೇಳಿದರು.
ಬೆಂಗಳೂರು ಮೊದಲು ಗಾರ್ಡನ್ ಸಿಟಿ ಆಗಿತ್ತು. ಈಗ ಸ್ಟಾರ್ಟ್‌ಅಪ್‌ಗಳ ನಗರವಾಗಿ ಬದಲಾಗಿದೆ. ಉದ್ಯಾನ ನಗರಿ ಬೆಂಗಳೂರು ಈಗ ವಿಜ್ಞಾನ ಮತ್ತು ಆವಿಷ್ಕಾರಕ್ಕೆ ಹೆಸರುವಾಸಿಯಾಗಿದೆ. ಎಲ್ಲ ಪ್ರತಿಭಾನಿತ್ವರ ತವರು ಬೆಂಗಳೂರು ಆಗಿದೆ. ಇವರ ಸಾಧನೆ ವೈಯಕ್ತಿಕ ಸಾಧನೆ ಅಲ್ಲ. ಇದರಲ್ಲಿ ದೇಶದ ಅಭಿವೃದ್ಧಿಯೂ ಇದೆ. ಭಾರತ ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಸಾಗಬೇಕಿದ್ದರೆ, ಸಮ ಸಮಾಜ ಸೃಷ್ಟಿ ಆಗಬೇಕಿದ್ದರೆ ವಿಜ್ಞಾನದ ನೆರವು ಬೇಕು.
ಅದರಲ್ಲೂ ಗ್ರಾಮೀಣ ಅಭಿವೃದ್ಧಿಗೆ ಮಾಹಿತಿ, ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಮಹತ್ವದ್ದು. ಹಿಂದೆಂದೂ ಕಾಣದಷ್ಟು ವೇಗದಲ್ಲಿ ನಮ್ಮ ಸರಕಾರ ತಂತ್ರಜ್ಞಾನ ವನ್ನು ಬಳಕೆ ಮಾಡಿಕೊಳ್ಳುತ್ತಿದೆ. ಮುಂದಿನ ದಶಕದಲ್ಲಿ ವಿಜ್ಞಾನವನ್ನು ಇನ್ನಷ್ಟು ಸಮರ್ಪಕವಾಗಿ ಬಳಸಿಕೊಳ್ಳಲು ಸರಕಾರ ತೀರ್ಮಾನಿಸಿದೆ. ಈ ಮೂಲಕ ಮಿತ ಖರ್ಚಿನ ಹಾಗೂ ನೀರಿನ ಕೃಷಿ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ಗ್ರಾಮೀಣ ಭಾಗದ ಅರ್ಥ ವ್ಯವಸ್ಥೆಯೇ ಬದಲಾಗಲಿದೆ ಎಂದು ಮೋದಿ ಭವಿಷ್ಯದ ಮುನ್ಸೂಚನೆ ನೀಡಿದರು.
ವಿಜ್ಞಾನ ಸಮ್ಮೇಳನದ ಮೂಲಕ ನಮ್ಮ ಕನಸು ನನಸಾಗಿಸುವತ್ತ ಮತ್ತೊಂದು ಹೆಜ್ಜೆ ಇಡ್ತಿದ್ದೇವೆ. ವಿಜ್ಞಾನ ಮತ್ತು ತಂತ್ರಜ್ಞಾನ ಭಾರತ ದೇಶದ ಶಕ್ತಿ. ದೇಶಕ್ಕಾಗಿ ಏನಾದರೂ ಮಾಡಬೇಕೆಂದು ವಿಜ್ಞಾನಿಗಳು ಪ್ರಯತ್ನ ಪಡುತ್ತಿದ್ದಾರೆ. ನಮ್ಮ ದೇಶದ ಅಭಿವೃದ್ಧಿ ವಿಜ್ಞಾನದ ಮೇಲೆ ಆಧಾರಿತವಾಗಿದೆ ಎಂದು ವಿಜ್ಞಾನಿಗಳ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
I-STEM ವೆಬ್ ಪೋರ್ಟಲ್ ಲೋಕಾರ್ಪಣೆ ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು Indian Science Technology and Engineering Facilities Map (I-STEM) ಎಂಬ ವೆಬ್ ಪೋರ್ಟಲ್ ಲೋಕಾರ್ಪಣೆ ಮಾಡಿದರು. ಮೋದಿ ಭಾಷಣ ಶುರು ಮಾಡುತ್ತಿದ್ದಂತೆ ಮೋದಿ ಮೋದಿ ಎಂದು ಸಭಿಕರು ಕೂಗು ಹಾಕಿದರು.
Published On - 11:06 am, Fri, 3 January 20