ಕುಮಾರಸ್ವಾಮಿ ಬಗ್ಗೆ ‘ಕಳ್ಳನ ಮನಸ್ಸು ಹುಳ್ಳುಳ್ಳಗೆ’ ಅಂದಿದ್ಯಾಕೆ ಸಚಿವ ಸೋಮಣ್ಣ?
ಚಿಕ್ಕಬಳ್ಳಾಪುರ: ವಿ.ಸೋಮಣ್ಣ ಬಟ್ಟೆ ಕದಿಯುತ್ತಿದ್ದರು ಎಂದು ಬೆಳಗ್ಗೆಯಷ್ಟೇ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ವಸತಿ ಸಚಿವ ಸೋಮಣ್ಣ, ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂದು ಪ್ರತಿಕ್ರಿಯಿಸಿದ್ದಾರೆ. ಕಳ್ಳನ ಮನಸ್ಸು ಉಳ್ಳುಳ್ಳಗೆ ಅನ್ನೊ ಹಾಗೆ ಕುಮಾರಸ್ವಾಮಿ ವರ್ತಿಸುತ್ತಿದ್ದಾರೆ. ದೇವೇಗೌಡರಿಗೆ ಯಾವ ರೀತಿ ನೋವು ಕೊಟ್ರು ಅಂತ ಒಂದ್ಸಲ ತಿಳಿದುಕೊಳ್ಳಲಿ. ಯಾರು ಬಚ್ಚಾ ಅಂತ ಹೆಚ್ಡಿಕೆ ವಿಮರ್ಶೆ ಮಾಡಿಕೊಳ್ಳಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ತಂದೆ-ಮಗ ಸೋತಿದ್ದಾರೆ. ತುಮಕೂರಿನಲ್ಲಿ ತಂದೆ, ಮಂಡ್ಯದಲ್ಲಿ ಮಗ ಸೋತಿದ್ದರಿಂದ ಕುಮಾರಸ್ವಾಮಿಗೆ ತಲೆ ಕೆಟ್ಟಿದೆ ಎಂದು ಹೇಳಿದ್ದಾರೆ. […]
ಚಿಕ್ಕಬಳ್ಳಾಪುರ: ವಿ.ಸೋಮಣ್ಣ ಬಟ್ಟೆ ಕದಿಯುತ್ತಿದ್ದರು ಎಂದು ಬೆಳಗ್ಗೆಯಷ್ಟೇ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ವಸತಿ ಸಚಿವ ಸೋಮಣ್ಣ, ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕಳ್ಳನ ಮನಸ್ಸು ಉಳ್ಳುಳ್ಳಗೆ ಅನ್ನೊ ಹಾಗೆ ಕುಮಾರಸ್ವಾಮಿ ವರ್ತಿಸುತ್ತಿದ್ದಾರೆ. ದೇವೇಗೌಡರಿಗೆ ಯಾವ ರೀತಿ ನೋವು ಕೊಟ್ರು ಅಂತ ಒಂದ್ಸಲ ತಿಳಿದುಕೊಳ್ಳಲಿ. ಯಾರು ಬಚ್ಚಾ ಅಂತ ಹೆಚ್ಡಿಕೆ ವಿಮರ್ಶೆ ಮಾಡಿಕೊಳ್ಳಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ತಂದೆ-ಮಗ ಸೋತಿದ್ದಾರೆ. ತುಮಕೂರಿನಲ್ಲಿ ತಂದೆ, ಮಂಡ್ಯದಲ್ಲಿ ಮಗ ಸೋತಿದ್ದರಿಂದ ಕುಮಾರಸ್ವಾಮಿಗೆ ತಲೆ ಕೆಟ್ಟಿದೆ ಎಂದು ಹೇಳಿದ್ದಾರೆ.
ನಾನು ರಾಜಕೀಯಕ್ಕೆ ಬಂದಾಗ HDK ಕಣ್ಣೇ ಬಿಟ್ಟಿರಲಿಲ್ಲ: ಕುಮಾರಸ್ವಾಮಿಯ ಭಾಷೆಯೇ ಅವರಿಗೆ ಶಿಕ್ಷೆ ನೀಡುತ್ತಿದೆ. ನಾನು ದೇವೇಗೌಡರಿಗೆ ಯಾವುದೆ ಸಣ್ಣ ಅಪಚಾರ ಮಾಡಿಲ್ಲ. ಅವರು ದೇಶದ ಮಾಜಿ ಪ್ರಧಾನಿ, ಎಲ್ಲರಿಗೂ ಮಾರ್ಗದರ್ಶನ ಮಾಡಲಿ ಎಂದು ಹೇಳಿದ್ದೆ. ನಾನು ರಾಜಕಾರಣಕ್ಕೆ ಬಂದಾಗ ಕುಮಾರಸ್ವಾಮಿ ಇನ್ನೂ ಕಣ್ಣೆ ಬಿಟ್ಟಿರಲಿಲ್ಲ ಎಂದು ಕಿಡಿಕಾರಿದರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜರಬಂಡಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್ ಪರ ಪ್ರಚಾರದಲ್ಲಿ ವಾಗ್ದಾಳಿ ನಡೆಸಿದ್ದಾರೆ.
Published On - 4:24 pm, Fri, 29 November 19