ಗೂಗಲ್ ಮ್ಯಾಪ್ಸ್​ನಲ್ಲಿ ನಿಮ್ಮೂರ ಮಾರ್ಗವನ್ನೂ ಸೇರಿಸಬಹುದು! ಹೇಗೆ ಎಂದು ತಿಳಿಯಲು ಇಲ್ಲಿ ನೋಡಿ

| Updated By: ganapathi bhat

Updated on: Apr 06, 2022 | 7:14 PM

WWW ಎಂದು ಎಲ್ಲರಿಗೂ ಪರಿಚಿತವಾದ ವರ್ಲ್ಡ್​ವೈಡ್ ವೆಬ್ ಇಂದಿಗೆ (ಮಾರ್ಚ್ 12) 32 ವರ್ಷಗಳನ್ನು ಪೂರೈಸಿಕೊಂಡಿದೆ. ಟಿಮ್ ಬರ್ನರ್ಸ್ ಲೀ ಸಿದ್ಧಪಡಿಸಿದ ವರ್ಲ್ಡ್​ವೈಡ್ ವೆಬ್ ಮೂರು ದಶಕಗಳನ್ನು ಮುಗಿಸಿ ಮುನ್ನುಗ್ಗುತ್ತಿದೆ.

ಗೂಗಲ್ ಮ್ಯಾಪ್ಸ್​ನಲ್ಲಿ ನಿಮ್ಮೂರ ಮಾರ್ಗವನ್ನೂ ಸೇರಿಸಬಹುದು! ಹೇಗೆ ಎಂದು ತಿಳಿಯಲು ಇಲ್ಲಿ ನೋಡಿ
ಪ್ರಾತಿನಿಧಿಕ ಚಿತ್ರ
Follow us on

ಗೂಗಲ್ ಮ್ಯಾಪ್ಸ್​ಗೆ ನೂತನ ಅಪ್​ಡೇಟ್ಸ್​ಗಳನ್ನು ನೀಡಲಾಗಿದೆ. ಜನರು ತಾವು ನಿಗದಿತವಾಗಿ ಭೇಟಿ ಮಾಡುವ ಸ್ಥಳೀಯ ಲೊಕೇಶನ್​ಗಳ ರಿವ್ಯೂ, ಫೊಟೋಗಳನ್ನು ಸೇರಿಸಲು ಗೂಗಲ್ ಅವಕಾಶ ನೀಡಿದೆ. ಈ ಮೂಲಕ, ಗೂಗಲ್​ನಲ್ಲಿ ಇಲ್ಲದ ಅಥವಾ ಗೂಗಲ್​ನಲ್ಲಿ ಇದುವರೆಗೆ ಕಾಣಿಸದೇ ಇರುವ ರಸ್ತೆಗಳನ್ನು ಬಳಕೆದಾರರೇ ಸೇರಿಸಬಹುದಾಗಿದೆ. ಬಳಕೆದಾರರು ಗೆರೆ ಎಳೆದು ಮತ್ತು ಹೆಸರು ದಾಖಲಿಸಿ ರಸ್ತೆಯನ್ನು ಸೇರಿಸಬಹುದಾಗಿದೆ. ಜತೆಗೆ, ತಪ್ಪಾಗಿ ಕಾಣುವ ರಸ್ತೆಗಳನ್ನು ಮರುಜೋಡಣೆಯೂ ಮಾಡಬಹುದು.

ಇದನ್ನೆಲ್ಲಾ ಮಾಡೋದು ಹೇಗೆ ಎಂದು ತಿಳಿಯಲು ಇಲ್ಲಿ ಓದಿ:

  • ಈ ಕೆಲಸವನ್ನು ಮಾಡಲು ಬಳಕೆದಾರರು ತಮ್ಮ ಡೆಸ್ಕ್​ಟಾಪ್​ನಲ್ಲಿ (ಕಂಪ್ಯೂಟರ್) ಗೂಗಲ್ ಮ್ಯಾಪ್ಸ್ ಅಪ್ಲಿಕೇಷನ್ ಹೊಂದಿರಬೇಕು
  • ಮೊತ್ತಮೊದಲು ತಮ್ಮ ಡೆಸ್ಕ್​ಟಾಪ್​ಗಳ ಮೂಲಕ maps.google.comಗೆ ಭೇಟಿ ನೀಡಬೇಕು
  • ಅಲ್ಲಿ ನಿಮಗೆ ಯಾವುದೇ ಮಾರ್ಗ ಕಾಣುತ್ತಿಲ್ಲವಾದರೆ, ಆಗ ಸೈಡ್ ಮೆನು ಬಟನ್ ಕ್ಲಿಕ್ ಮಾಡಬೇಕು
  • ಅಲ್ಲಿ edit the map ಆಯ್ಕೆ ಕ್ಲಿಕ್ ಮಾಡಬೇಕು, ಬಳಿಕ missing road ಆರಿಸಿಕೊಳ್ಳಬೇಕು
  • ರಸ್ತೆ ಹಾದುಹೋಗಿರುವಂತೆ ಗೆರೆ ಎಳೆಯಬೇಕು. ಹೀಗೆ ಜೋಡಿಸಿದ ಹೊಸ ರಸ್ತೆಗೆ ಹೆಸರನ್ನು ಕೂಡ ಸೂಚಿಸಬಹುದು
  • ರಸ್ತೆಗಳನ್ನು ಸೇರಿಸಿ, ಅಥವಾ ತಪ್ಪಾಗಿ ಗುರುತಾಗಿರುವ ರಸ್ತೆ ಸರಿಪಡಿಸಿ ಬಳಿಕ ಹೆಸರು ದಾಖಲಿಸಬಹುದು. ಈ ಆಯ್ಕೆಯನ್ನು ಗೂಗಲ್ ನೀಡುತ್ತಿದೆ

World Wide Webಗೆ 32 ವರ್ಷ!
ತಂತ್ರಜ್ಞಾನ ಲೋಕದಲ್ಲಿ ಮತ್ತೊಂದು ಸಂತಸದ ವಿಚಾರವಿದೆ. WWW ಎಂದು ಎಲ್ಲರಿಗೂ ಪರಿಚಿತವಾದ ವರ್ಲ್ಡ್​ವೈಡ್ ವೆಬ್ ಇಂದಿಗೆ (ಮಾರ್ಚ್ 12) 32 ವರ್ಷಗಳನ್ನು ಪೂರೈಸಿಕೊಂಡಿದೆ. ಟಿಮ್ ಬರ್ನರ್ಸ್ ಲೀ ಸಿದ್ಧಪಡಿಸಿದ ವರ್ಲ್ಡ್​ವೈಡ್ ವೆಬ್ ಮೂರು ದಶಕಗಳನ್ನು ಮುಗಿಸಿ ಮುನ್ನುಗ್ಗುತ್ತಿದೆ. ಅಕ್ಟೋಬರ್ 1990ರಲ್ಲಿ ಮೊದಲ ವೆಬ್ ಬ್ರೌಸರ್​ನ್ನು ಬರೆದರು. ಅಥವಾ ಅದನ್ನು ಬ್ರೌಸರ್ ಎಡಿಟರ್ ಎನ್ನಬಹುದು. WorldWideWeb ಎಂದು ಕರೆಯಲ್ಪಟ್ಟ ಬ್ರೌಸರ್, 1990ರ ಸಮಯದಲ್ಲಿ ವೆಬ್ ನೋಡುವ ಅವಕಾಶ ನೀಡಿದ್ದ ಏಕೈಕ ಬ್ರೌಸರ್ ಆಗಿತ್ತು. ಬಳಿಕ ಈ ಬ್ರೌಸರ್ ಎಡಿಟರ್​ನ್ನು ನೆಕ್ಸಸ್ (Nexus) ಎಂದು ಹೆಸರಿಸಲಾಯಿತು. ಈಗ WorldWideWebನ್ನು ಸ್ಪೇಸ್ ಮೂಲಕ ಅಂದರೆ World Wide Web ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Udupi Ramachandra Rao: ಭಾರತದ ಹಿರಿಯ ವಿಜ್ಞಾನಿ ಯುಆರ್ ರಾವ್​ಗೆ ವಿಶೇಷ ಡೂಡಲ್​ ಮೂಲಕ ಗೌರವ ಸಮರ್ಪಿಸಿದ ಗೂಗಲ್​

Netflix Mobile+ 299 Plan: ನೆಟ್​ಫ್ಲಿಕ್ಸ್​ನಿಂದ ಮೊಬೈಲ್+ ಪ್ಲಾನ್ ರೂ. 299ಕ್ಕೆ: ಏನಿದು ಪ್ಲಾನ್, ಯಾರಿಗೆ?

Published On - 7:01 pm, Fri, 12 March 21