ಮೊಬೈಲ್ನಲ್ಲಿ ಮಾತ್ನಾಡ್ತಾ ಬೈಕ್ ಚಾಲನೆ, ಹಂಪ್ ಜಂಪ್ ಆಗಿ ಹಿಂದಿದ್ದ ಯೋಧನ ಪತ್ನಿ ಸಾವು
ಬಾಗಲಕೋಟೆ: ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಾ ಬೈಕ್ ಚಾಲನೆ ವೇಳೆ ಹಂಪ್‌ನಲ್ಲಿ ಬೈಕ್ ಹಾರಿದ್ದರಿಂದ ಹಿಂದೆ ಸವಾರಿ ಮಾಡುತ್ತಿದ್ದ ಯೋಧನ ಪತ್ನಿ ಕೆಳಕ್ಕೆ ಬಿದ್ದು ಮೃತಪಟ್ಟ ದುರ್ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮದ ಬಳಿ ನಡೆದಿದೆ. ಯೋಧ ಶೇಖರಯ್ಯ ಪತ್ನಿ ಪುಷ್ಪಲತಾ(35) ಮೃತ ದುರ್ದೈವಿ. ಬೈಕ್‌ನಲ್ಲಿ ಹೊರಡುವ ವೇಳೆ ಮಗನ ವಿಡಿಯೋ ಕಾಲ್ ಬಂದಿದೆ. ಹೀಗಾಗಿ ಯೋಧ ಶೇಖರಯ್ಯ ಮಗನ ಜೊತೆ ಮಾತನಾಡುತ್ತಲೇ ಬೈಕ್ ಚಲಾಯಿಸುತ್ತಿದ್ದರು. ಈ ವೇಳೆ ಮುಂದಿದ್ದ ಹಂಪ್ ಗಮನಿಸದೆ ಬೈಕ್ ಓಡಿಸಿದ ಪರಿಣಾಮ […]

ಬಾಗಲಕೋಟೆ: ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಾ ಬೈಕ್ ಚಾಲನೆ ವೇಳೆ ಹಂಪ್‌ನಲ್ಲಿ ಬೈಕ್ ಹಾರಿದ್ದರಿಂದ ಹಿಂದೆ ಸವಾರಿ ಮಾಡುತ್ತಿದ್ದ ಯೋಧನ ಪತ್ನಿ ಕೆಳಕ್ಕೆ ಬಿದ್ದು ಮೃತಪಟ್ಟ ದುರ್ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮದ ಬಳಿ ನಡೆದಿದೆ. ಯೋಧ ಶೇಖರಯ್ಯ ಪತ್ನಿ ಪುಷ್ಪಲತಾ(35) ಮೃತ ದುರ್ದೈವಿ.
ಬೈಕ್‌ನಲ್ಲಿ ಹೊರಡುವ ವೇಳೆ ಮಗನ ವಿಡಿಯೋ ಕಾಲ್ ಬಂದಿದೆ. ಹೀಗಾಗಿ ಯೋಧ ಶೇಖರಯ್ಯ ಮಗನ ಜೊತೆ ಮಾತನಾಡುತ್ತಲೇ ಬೈಕ್ ಚಲಾಯಿಸುತ್ತಿದ್ದರು. ಈ ವೇಳೆ ಮುಂದಿದ್ದ ಹಂಪ್ ಗಮನಿಸದೆ ಬೈಕ್ ಓಡಿಸಿದ ಪರಿಣಾಮ ಹಂಪ್‌ನಲ್ಲಿ ಬೈಕ್ ಜಂಪ್ ಆಗಿ ಬೈಕ್ ಹಿಂಬದಿ ಕುಳಿತಿದ್ದ ಯೋಧನ ಪತ್ನಿ ಪುಷ್ಪಲತಾ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಪತ್ನಿಯ ಸಾವಿನಿಂದ ಗಡಿ ಕಾಯೋ ಯೋಧ ರಸ್ತೆಯಲ್ಲಿ ಪತ್ನಿಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿ ಗೋಳಾಡಿದ್ದು ಸ್ಥಳದಲ್ಲಿ ಕರುಣಾಜನಕ ಸನ್ನಿವೇಶ ನಿರ್ಮಾಣವಾಗಿತ್ತು. ಇಂದು ಬೆಳಗ್ಗೆ ಕರ್ತವ್ಯಕ್ಕೆ ಜಮ್ಮು ಕಾಶ್ಮೀರಕ್ಕೆ ಹೊರಡಬೇಕಿದ್ದ ಯೋಧ ಪತ್ನಿಯನ್ನು ಕಳೆದುಕೊಂಡಿದ್ದಾರೆ. ಪತ್ನಿಯನ್ನು ಹಿರೆಮಳಗಾವಿ ಗ್ರಾಮದಲ್ಲಿರುವ ತವರು ಮನೆಗೆ ಬಿಡಲು ಹೋಗುವಾಗ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುಷ್ಪಲತಾ ಸಾವಿಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಮದುವೆಯಿಂದ ವಾಪಸಾಗುವಾಗ.. ತಾಯಿಯ ಕೈಯಲ್ಲಿದ್ದ ಮಗು ಬೈಕ್ನಿಂದ ಆಯತಪ್ಪಿ ಬಿದ್ದು ಸಾವು
Published On - 9:29 am, Mon, 23 November 20