ಆಕ್ಷೇಪಾರ್ಹ ‘ಸಾಮಾಜಿಕ ಸಂದೇಶ’ಕ್ಕೆ 5 ವರ್ಷ ಜೈಲು: ಕೇರಳ ಸರ್ಕಾರದ ಹೊಸ ಕಾನೂನು

ತಿರುವನಂತಪುರ: ಸಾಮಾಜಿಕ ಮಾಧ್ಯಮ ಅಥವಾ ಜಾಲತಾಣಗಳಲ್ಲಿ ಪ್ರಕಟವಾಗುವ ಯಾವುದೇ ಪೋಸ್ಟ್​ ಆಕ್ಷೇಪಾರ್ಹ ಅಥವಾ ಬೆದರಿಕೆಯೊಡ್ಡುವಂತೆ ಇದ್ದರೆ ಅಂಥವನ್ನು ಹಾಕಿದವರು ಅಥವಾ ಹಂಚಿಕೊಂಡವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುವ ಸುಗ್ರೀವಾಜ್ಞೆಗೆ ಕೇರಳ ರಾಜ್ಯಪಾಲ ಆರೀಫ್ ಮೊಹಮದ್ ಖಾನ್ ಸಹಿ ಹಾಕಿದ್ದಾರೆ. ಅಪರಾಧಕ್ಕೆ ಪ್ರೇರೇಪಿಸುವ ಅಥವಾ ಯಾರಿಗಾದರೂ ಬೆದರಿಕೆಯೊಡ್ಡುವ ಸಂದೇಶವನ್ನು ಯಾವುದೇ ಮಾಧ್ಯಮದ ಮೂಲಕ ಸಿದ್ಧಪಡಿಸುವುದು, ಕಳಿಸುವುದು, ಹಂಚಿಕೊಳ್ಳುವುದು ಅಪರಾಧವಾಗುತ್ತದೆ. ಇಂಥವರಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ₹ 10,000 ದಂಡ ಅಥವಾ ಎರಡನ್ನೂ ವಿಧಿಸಲು […]

ಆಕ್ಷೇಪಾರ್ಹ ‘ಸಾಮಾಜಿಕ ಸಂದೇಶ’ಕ್ಕೆ 5 ವರ್ಷ ಜೈಲು: ಕೇರಳ ಸರ್ಕಾರದ ಹೊಸ ಕಾನೂನು
Follow us
ಸಾಧು ಶ್ರೀನಾಥ್​
|

Updated on:Nov 23, 2020 | 11:00 AM

ತಿರುವನಂತಪುರ: ಸಾಮಾಜಿಕ ಮಾಧ್ಯಮ ಅಥವಾ ಜಾಲತಾಣಗಳಲ್ಲಿ ಪ್ರಕಟವಾಗುವ ಯಾವುದೇ ಪೋಸ್ಟ್​ ಆಕ್ಷೇಪಾರ್ಹ ಅಥವಾ ಬೆದರಿಕೆಯೊಡ್ಡುವಂತೆ ಇದ್ದರೆ ಅಂಥವನ್ನು ಹಾಕಿದವರು ಅಥವಾ ಹಂಚಿಕೊಂಡವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುವ ಸುಗ್ರೀವಾಜ್ಞೆಗೆ ಕೇರಳ ರಾಜ್ಯಪಾಲ ಆರೀಫ್ ಮೊಹಮದ್ ಖಾನ್ ಸಹಿ ಹಾಕಿದ್ದಾರೆ.

ಅಪರಾಧಕ್ಕೆ ಪ್ರೇರೇಪಿಸುವ ಅಥವಾ ಯಾರಿಗಾದರೂ ಬೆದರಿಕೆಯೊಡ್ಡುವ ಸಂದೇಶವನ್ನು ಯಾವುದೇ ಮಾಧ್ಯಮದ ಮೂಲಕ ಸಿದ್ಧಪಡಿಸುವುದು, ಕಳಿಸುವುದು, ಹಂಚಿಕೊಳ್ಳುವುದು ಅಪರಾಧವಾಗುತ್ತದೆ. ಇಂಥವರಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ₹ 10,000 ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಕೇರಳ ಪೊಲೀಸ್ ಕಾಯ್ದೆಗೆ ಹೊಸದೊಂದು ಪರಿಚ್ಛೇದ (118 A) ಸೇರಿಸುವ ಈ ವಿಧಿಗೆ ರಾಜ್ಯಪಾಲರು ಶನಿವಾರ ಸಹಿ ಹಾಕಿದ್ದಾರೆ.

ಈ ಕಾನೂನು ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕಲು ಬಳಕೆಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಆದರೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕಾನೂನನ್ನು ಸಮರ್ಥಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ನಿಂದನೆ ಹೆಚ್ಚಾಗುತ್ತಿದೆ. ಈ ಪ್ರವೃತ್ತಿಗೆ ಕಡಿವಾಣ ಹಾಕಲು ಕಾನೂನು ಬೇಕಿತ್ತು ಎಂದು ಹೇಳಿದ್ದಾರೆ.

ಸುಗ್ರೀವಾಜ್ಞೆ ವಿರೋಧಿಸಿ ಹೈಕೋರ್ಟ್​ ಮೆಟ್ಟಿಲು ಏರಲು ವಕೀಲ ಅನೂಪ್ ಕುಮಾರನ್ ಸಿದ್ಧರಾಗಿದ್ದಾರೆ. ರಾಜ್ಯ ಸರ್ಕಾರವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿರುವ ನಿಂದನಾತ್ಮಕ ಪೋಸ್ಟ್​ಗಳಿಂದ ಜನರನ್ನು, ಮುಖ್ಯವಾಗಿ ಮಹಿಳೆಯರ ಘನತೆ ಕಾಪಾಡಲು ಇಂಥ ಕಾನೂನು ಅಗತ್ಯವಿತ್ತು ಎಂದು ಹೇಳುತ್ತಿದೆ. ಆದರೆ ವಾಸ್ತವವಾಗಿ ಇಂಥ ಕಾನೂನುಗಳು ಸರ್ಕಾರವನ್ನು ಟೀಕಿಸುವವರನ್ನು ಹತ್ತಿಕ್ಕಲು ಬಳಕೆಯಾಗುತ್ತದೆ ಎಂದು ಅನೂಪ್ ಕುಮಾರನ್ ಹೇಳಿದ್ದಾರೆ.

ಈ ಹಿಂದೆ ಕೇರಳ ಸರ್ಕಾರ ತನ್ನ ಪೊಲೀಸ್​ ಕಾಯ್ದೆಗೆ 118 (ಡಿ) ವಿಧಿಯನ್ನು ಸೇರ್ಪಡೆಗೊಳಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲು ಯತ್ನಿಸಿತ್ತು. ಆದರೆ ಸುಪ್ರೀಂ ಕೋರ್ಟ್​ ಈ ವಿಧಿಯ ಸೇರ್ಪಡೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿ, ರದ್ದುಪಡಿಸಿತ್ತು.

ಸಾಮಾಜಿಕ ಮಾಧ್ಯಮಗಳ ಮೂಲಕ ದ್ವೇಷದ ಪ್ರಚಾರ ಹಾಗೂ ವ್ಯಕ್ತಿಗತ ದಾಳಿ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇರಳ ಹೈಕೋರ್ಟ್​ ಕಳೆದ ತಿಂಗಳು ಪೊಲೀಸರಿಗೆ ನಿರ್ದೇಶನ ನೀಡಿತ್ತು. ಈ ಬೆಳವಣಿಗೆಯ ನಂತರ ಕೇರಳ ಸಚಿವ ಸಂಪುಟ ಸುಗ್ರೀವಾಜ್ಞೆಯ ಕರಡನ್ನು ರಾಜ್ಯಪಾಲರಿಗೆ ಕಳಿಸಿಕೊಡಲು ಸಮ್ಮತಿಸಿತ್ತು.

ಕೋವಿಡ್-19 ವ್ಯಾಪಿಸಿದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಬಿತ್ತುವ ಯತ್ನಗಳೂ ಹೆಚ್ಚಾಗಿವೆ. ಹಾಲಿ ಅಸ್ತಿತ್ವದಲ್ಲಿರುವ ಕಾನೂನುಗಳಿಂದ ಈ ಪರಿಸ್ಥಿತಿಯನ್ನು ನಿರ್ವಹಿಸಲು ಆಗುವುದಿಲ್ಲ. ಐಟಿ ಕಾಯ್ದೆಯ 66-ಎ ಪರಿಚ್ಛೇದವನ್ನು ಸುಪ್ರೀಂಕೋರ್ಟ್​ ರದ್ದುಪಡಿಸಿದೆ. ದ್ವೇಷ ಹರಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುವವರನ್ನು ನಿಯಂತ್ರಿಸಲು ಪೊಲೀಸರಿಗೆ ಕಾಯ್ದೆಯ ಬಲ ಬೇಕಿತ್ತು ಎಂದು ಕೇರಳ ಸರ್ಕಾರ ಹೇಳಿದೆ.

Published On - 10:52 am, Mon, 23 November 20

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ