ಮಂಗಳೂರು: ಸಾಲಬಾಧೆಯಿಂದ ಹೆಂಡತಿ ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆ

ಆತ ದಾವಣಗೆರೆ ಮೂಲದ ವ್ಯಕ್ತಿ, ದಾವಣಗೆರೆಯಿಂದ ಮೈಸೂರಿಗೆ ಬಂದು ಮೆಕ್ಯಾನಿಕಲ್ ಲೇತ್ ಕಂಪೆನಿ ಇಟ್ಟುಕೊಂಡಿದ್ದರು. ಮದುವೆಯಾಗಿ ಅವಳಿ ಜವಳಿ ಮಕ್ಕಳಿದ್ದರು. ಮೈಸೂರಿನಿಂದ ಮಂಗಳೂರಿಗೆ ಬಂದು ಡೆತ್​ನೋಟ್​ ಬರೆದಿಟ್ಟು ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳೂರು: ಸಾಲಬಾಧೆಯಿಂದ ಹೆಂಡತಿ ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆ
ಮೃತ ಕುಟುಂಬ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Apr 01, 2023 | 12:54 PM

ಮಂಗಳೂರು: ಈತನ ಹೆಸರು ದೇವೇಂದ್ರ, ವಯಸ್ಸು 48 ದಾವಣಗೆರೆ ಮೂಲದರು. ಕಳೆದ ಹಲವಾರು ವರ್ಷಗಳ ಹಿಂದೆ ಮೈಸೂರಿಗೆ ಬಂದು ವಿಜಯನಗರದ ವಾಣಿವಿಲಾಸ ಬಡಾವಣೆಯಲ್ಲಿ ವಾಸವಿದ್ದರು. ಮೈಸೂರಿನಲ್ಲಿ ಮೆಕ್ಯಾನಿಕಲ್ ಲೇತ್ ಶಾಪ್ ಇಟ್ಟುಕೊಂಡಿದ್ದರಂತೆ. ಇವರ ಹೆಂಡತಿ ಹೆಸರು ನಿರ್ಮಲ. ಈ ದಂಪತಿಗೆ 9 ವರ್ಷದ ಚೈತ್ರಾ ಮತ್ತು ಚೈನತ್ಯ ಎನ್ನುವ ಅವಳಿ ಜವಳಿ ಹೆಣ್ಣು ಮಕ್ಕಳಿಬ್ಬಿರಿದ್ದರು. ಮಾರ್ಚ್ 27 ರಂದು ಇಡೀ ಕುಟುಂಬ ಮಂಗಳೂರಿಗೆ ಆಗಮಿಸಿದೆ. ಮಂಗಳೂರಿನ ಹೃದಯಭಾಗ ಹಂಪನಕಟ್ಟೆಯಲ್ಲಿರುವ ಕರುಣಾ ರೆಸಿಡೆನ್ಸಿ ಎನ್ನುವ ಲಾಡ್ಜ್ ನಲ್ಲಿ ರೂಂ ಮಾಡಿ ಉಳಿದುಕೊಂಡಿದ್ದಾರೆ. ಮಾರ್ಚ್ 29 ರಂದು ರೂಂನ್ನು ಒಂದು ದಿನ ಎಕ್ಸ್ಟೆಂಡ್ ಮಾಡಿಕೊಂಡಿದ್ದಾರೆ. ನಿನ್ನೆ(ಮಾ.30) ಸಂಜೆ ರೂಂ ಖಾಲಿ ಮಾಡಬೇಕಿತ್ತು. ಆದರೆ ರೂಂ ಖಾಲಿ ಮಾಡಿಲ್ಲ. ಇಂದು(ಮಾ.31) ಲಾಡ್ಜ್ ಸಿಬ್ಬಂದಿ ಅನುಮಾನಗೊಂಡು ರೂಂನ್ನು ತೆರೆದು ನೋಡಿದಾಗ ಅಲ್ಲಿ ಇಡೀ ಕುಟುಂಬ ಸಾವನ್ನಪ್ಪಿರೊದು ಕಂಡು ಬಂದಿದೆ. ಬಳಿಕ ಲಾಡ್ಜ್​ ಸಿಬ್ಬಂದಿ ತಕ್ಷಣ ಬಂದರು ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಬಂದ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಪರಿಶೀಲನೆ ನಡೆಸಿದ್ದಾರೆ.

ಡೆತ್​ನೋಟ್ ಬರೆದಿಟ್ಟು ಸಾವು

ಇನ್ನು ತನಿಖೆ ಬಳಿಕ ಮೊದಲು ದೇವೇಂದ್ರ ಪತ್ನಿ ಮತ್ತು ಮಕ್ಕಳಿಗೆ ಆಹಾರದಲ್ಲಿ ವಿಷ ನೀಡಿ ನಂತರ ತಾನು ನೇಣಿಗೆ ಶರಣಾಗಿದ್ದಾನೆ ಎನ್ನುವುದು ಗೊತ್ತಾಗಿದೆ. ಇನ್ನು ದೇವೇಂದ್ರ ಸಾಯುವ ಮುನ್ನ ಡೆತ್​ನೋಟ್ ಬರೆದಿಟ್ಟಿದ್ದಾನೆ. ಸಾಲದ ಬಾದೆಯೇ ಆತ್ಮಹತ್ಯೆಗೆ ಕಾರಣ ಎಂದು ಬರೆದಿದ್ದಾರೆ. ಸಾಲಗಾರರು ಮತ್ತು ಮಾರಾಟಗಾರರ ಕಾಟದಿಂದ ಪ್ರಾಣ ಬಿಡುತ್ತಿರುವುದಾಗಿ ಬರೆದಿದ್ದಾನೆ. ಇನ್ನು ತನ್ನ ಸಾವಿನ ಬಳಿಕ ಕಂಪೆನಿ ಯಾರಿಗೆ ಹೋಗಬೇಕು ಎನ್ನುವುದನ್ನ ಕೂಡ ಅದರಲ್ಲಿ ಬರೆಯಲಾಗಿದೆ. ಸ್ಥಳಕ್ಕೆ ವಿಧಿವಿಜ್ಞಾನ ತಂಡ ಆಗಮಿಸಿ ಸಾಕ್ಷಿ ಸಂಗ್ರಹ ಮಾಡಿದೆ.

ಇದನ್ನೂ ಓದಿ:Gurugram: ಪ್ರಿಯಕರನ ಆತ್ಮಹತ್ಯೆ ಸುದ್ದಿ ಕೇಳಿ ನೊಂದು ಬೆಂಕಿ ಹಚ್ಚಿಕೊಂಡು ಯುವತಿ ಆತ್ಮಹತ್ಯೆ

ಇನ್ನು ಮೃತರ ಸಂಬಂಧಿಕರು ಮಂಗಳೂರಿಗೆ ಆಗಮಿಸಿದ ಬಳಿಕ ಮೃತದೇಹಗಳನ್ನು ಲಾಡ್ಜ್​ನಿಂದ ಶಿಫ್ಟ್ ಮಾಡಲಾಯಿತು. ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ದುರ್ಘಟನೆ ಹಿಂದೆ ಏನೇನಿದೆ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

ವರದಿ: ಪೃಥ್ವಿರಾಜ್ ಬೊಮ್ಮನಕೆರೆ ಟಿವಿ9 ಮಂಗಳೂರು

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ