Viral Audio: ನಾನು ಹೇಳಿದ್ದು ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರು ಹಣ ನೀಡಿ ಜನರನ್ನು ಕರೆತಂದ ಬಗ್ಗೆ: ಸಿದ್ದರಾಮಯ್ಯ

Viral Audio: ನಾನು ಹೇಳಿದ್ದು ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರು ಹಣ ನೀಡಿ ಜನರನ್ನು ಕರೆತಂದ ಬಗ್ಗೆ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 03, 2023 | 2:15 PM

ನಿಮ್ಮ ಪಕ್ಷದವರೇ ವಿಡಿಯೋ ಮಾಡಿದ್ದಾರಲ್ಲಾ ಎಂಬ ಪ್ರಶ್ನೆಗೂ ಸಿದ್ದರಾಮಯ್ಯನವರು, ಹೌದು ಒಂದು ಸದುದ್ದೇಶ ಇಟ್ಟುಕೊಂಡೇ ಅವರು ಮಾಡಿದ್ದು ಎಂದರು.

ಬೆಳಗಾವಿ: ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಪ್ರಜಾಧ್ವನಿಯಾತ್ರೆಗೆ ರೂ. 500 ಕೊಟ್ಟು ಜನರನ್ನು ಕರೆತರುವಂತೆ ಹೇಳಿದ್ದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವ (PM Narendra Modi) ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರು ಜನರಿಗೆ ರೂ. 1000 ಕೊಡುತ್ತೇನೆಂದು ಹೇಳಿ ರೂ 500 ಕೊಟ್ಟಿದ್ದಕ್ಕೆ ಆದ ಜಗಳದ ವಿಷಯದಲ್ಲಿ ಮಾತಾಡಿದ್ದು ಅದರೆ ತನ್ನ ಮಾತನ್ನು ತಿರುಚಿ ಸಾಮಾಜಿಕ ಮಾಧ್ಯಮಗಳಲ್ಲಿ (Social media) ಹರಿಬಿಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ನಿಮ್ಮ ಪಕ್ಷದವರೇ ವಿಡಿಯೋ ಮಾಡಿದ್ದಾರಲ್ಲಾ ಎಂಬ ಪ್ರಶ್ನೆಗೂ ಸಿದ್ದರಾಮಯ್ಯನವರು, ಹೌದು ಒಂದು ಸದುದ್ದೇಶ ಇಟ್ಟುಕೊಂಡೇ ಅವರು ಮಾಡಿದ್ದು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ