ಟಿಕೆಟ್ ನೀಡ್ತೀನಂತ ಹೇಳಿಲ್ಲ ಎಂದ ಬಿಎಸ್​ವೈ, ಅನರ್ಹರಿಗೆ ಹೆಚ್ಚಿದ ಆತಂಕ

|

Updated on: Nov 03, 2019 | 2:48 PM

ಬೆಂಗಳೂರು: ಉಪಚುನಾವಣೆಗೆ ಇನ್ನೊಂದು ತಿಂಗಳು ಮಾತ್ರ ಬಾಕಿ ಇದೆ. ಇತ್ತ ಸುಪ್ರೀಂಕೋರ್ಟ್​ನಲ್ಲೂ ಅನರ್ಹ ಶಾಸಕರ ತೀರ್ಪು ನಿಗದಿಯಾಗಿದೆ. ಈ ಮಧ್ಯೆ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿದ ಹೇಳಿಕೆ ಅನರ್ಹರಲ್ಲಿ ಆತಂಕ ಹೆಚ್ಚಿಸಿದೆ. ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡುತ್ತೇನೆಂದು ನಾನು ಹೇಳಿಲ್ಲ. ಅನರ್ಹ ಶಾಸಕರು ತಮ್ಮದೇ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಮುಂದೇನು‌ ಮಾಡಬೇಕು ಎಂದು ಅವರೇ ತೀರ್ಮಾನಿಸ್ತಾರೆ. ಹೀಗಾಗಿ ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಅನರ್ಹರು ಬಾಂಬೆಗೆ ಹೋಗಿದ್ದು ದೇಶಕ್ಕೆ […]

ಟಿಕೆಟ್ ನೀಡ್ತೀನಂತ ಹೇಳಿಲ್ಲ ಎಂದ ಬಿಎಸ್​ವೈ,  ಅನರ್ಹರಿಗೆ ಹೆಚ್ಚಿದ ಆತಂಕ
Follow us on

ಬೆಂಗಳೂರು: ಉಪಚುನಾವಣೆಗೆ ಇನ್ನೊಂದು ತಿಂಗಳು ಮಾತ್ರ ಬಾಕಿ ಇದೆ. ಇತ್ತ ಸುಪ್ರೀಂಕೋರ್ಟ್​ನಲ್ಲೂ ಅನರ್ಹ ಶಾಸಕರ ತೀರ್ಪು ನಿಗದಿಯಾಗಿದೆ. ಈ ಮಧ್ಯೆ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿದ ಹೇಳಿಕೆ ಅನರ್ಹರಲ್ಲಿ ಆತಂಕ ಹೆಚ್ಚಿಸಿದೆ.

ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡುತ್ತೇನೆಂದು ನಾನು ಹೇಳಿಲ್ಲ. ಅನರ್ಹ ಶಾಸಕರು ತಮ್ಮದೇ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಮುಂದೇನು‌ ಮಾಡಬೇಕು ಎಂದು ಅವರೇ ತೀರ್ಮಾನಿಸ್ತಾರೆ. ಹೀಗಾಗಿ ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಅನರ್ಹರು ಬಾಂಬೆಗೆ ಹೋಗಿದ್ದು ದೇಶಕ್ಕೆ ಗೊತ್ತಿರುವ ವಿಚಾರ. ಆ ಮಾತನ್ನೇ ನಾನು ಹೇಳಿದ್ದೇನೆ. ಅದಕ್ಕೂ, ಕೇಂದ್ರ ಗೃಹ ಸಚಿವ ಅಮಿತ್ ಶಾಗೂ ಏನು ಸಂಬಂಧ ಎಂದು ಬಿಎಸ್​ವೈ ಖಾರವಾಗಿ ಪ್ರಶ್ನಿಸಿದ್ದಾರೆ.

ಸಿಎಂ ಹೇಳಿಕೆ ಬೆನ್ನಲ್ಲೇ ಬೆಂಗಳೂರಿಗೆ ರಮೇಶ್​ ದೌಡು:
ಅನರ್ಹರಿಗೂ ನಮಗೂ ಸಂಬಂಧವಿಲ್ಲವೆಂಬ ಸಿಎಂ ಹೇಳಿಕೆ ಬೆನ್ನಲ್ಲೇ ಬೆಂಗಳೂರಿನತ್ತ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ದಿಢೀರ್ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿಗೆ ಆಗಮಿಸಿದ ನಂತರ ಅನರ್ಹ ಶಾಸಕರು ಸಭೆ ಸೇರಿ ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

Published On - 2:47 pm, Sun, 3 November 19