IBPS Clerk Result 2020: ಐಬಿಪಿಎಸ್ ಪರೀಕ್ಷಾ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ

IBPS Clerk prelims result 2020 ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು, ಮುಂದಿನ ಹಂತದಲ್ಲಿ IBPS Clerk 2020 mains ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.

IBPS Clerk Result 2020: ಐಬಿಪಿಎಸ್ ಪರೀಕ್ಷಾ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಪರೀಕ್ಷಾ ಫಲಿತಾಂಶ (ಪ್ರಾತಿನಿಧಿಕ ಚಿತ್ರ)
Edited By:

Updated on: Apr 06, 2022 | 8:13 PM

ದೆಹಲಿ: ಐಬಿಪಿಎಸ್ ಕ್ಲರ್ಕ್ ಪ್ರಿಲಿಮ್ಸ್ 2020ರ ಫಲಿತಾಂಶವನ್ನು ಇನ್​ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ಗುಮಾಸ್ತ ಹುದ್ದೆಯ ಪರೀಕ್ಷಾ ಫಲಿತಾಂಶವನ್ನು ಐಬಿಪಿಎಸ್ ಆನ್​ಲೈನ್​ನಲ್ಲಿ ಬಿಡುಗಡೆಗೊಳಿಸಿದೆ. ಕಳೆದ ವರ್ಷ ಡಿಸೆಂಬರ್ 5, 12 ಹಾಗೂ 13ರಂದು ನಡೆದ ಪರೀಕ್ಷೆಯಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳು, IBPS Clerk prelims result 2020 ಫಲಿತಾಂಶವನ್ನು ಪರಿಶೀಲಿಸಬಹುದು.

ತಮ್ಮ ರಿಜಿಸ್ಟ್ರೇಶನ್ ನಂಬರ್ ಅಥವಾ ಕ್ರಮ ಸಂಖ್ಯೆ (ರೋಲ್ ನಂಬರ್) ದಾಖಲಿಸಿ ಲಾಗ್​ಇನ್ ಆಗುವ ಮೂಲಕ ಫಲಿತಾಂಶ ಪಡೆದುಕೊಳ್ಳಬಹುದು. ಲಾಗ್​ಇನ್ ಆಗಲು ರಿಜಿಸ್ಟ್ರೇಶನ್ ನಂಬರ್ ಜೊತೆಗೆ, ಪಾಸ್​ವರ್ಡ್ ಮತ್ತು ಹುಟ್ಟಿದ ದಿನಾಂಕವನ್ನು ಕೂಡ ನಮೂದಿಸಬೇಕು. ಫಲಿತಾಂಶದಲ್ಲಿ ಅಭ್ಯರ್ಥಿಯ ಅರ್ಹತಾ ವಿವರಗಳು ಮತ್ತು ಇತರ ಪ್ರಮುಖ ವಿವರಗಳು ಇರಲಿದೆ. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು, ಮುಂದಿನ ಹಂತದಲ್ಲಿ IBPS Clerk 2020 mains ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.

IBPS Clerk prelims result 2020 ಫಲಿತಾಂಶ ನೋಡಲು ಇಲ್ಲಿ ಕ್ಲಿಕ್​ ಮಾಡಿ

IBPS Clerk 2020 prelims result ನೋಡುವುದು ಹೇಗೆ?
1. ibps.in ವೆಬ್​ಸೈಟ್​ಗೆ ಭೇಟಿ ನೀಡಿ.
2. IBPS Clerk result 2020 prelim ಲಿಂಕ್ ಕ್ಲಿಕ್ ಮಾಡಿ.
3. ಆಗ ಹೊಸತಾದ ಲಾಗ್​ಇನ್ ವಿಂಡೋ ತೆರೆದುಕೊಳ್ಳುತ್ತದೆ.
4. ರಿಜಿಸ್ಟ್ರೇಶನ್ ಅಥವಾ ರೋಲ್ ನಂಬರ್ ಮತ್ತು ಹುಟ್ಟಿದ ದಿನಾಂಕ ಹಾಗೂ ಪಾಸ್​ವರ್ಡ್ ನಮೂದಿಸಿ.
5. ಆಗ ಪರದೆಯ ಮೇಲೆ IBPS Clerk result ಕಾಣಿಸಿಕೊಳ್ಳುತ್ತದೆ.
6. ಫಲಿತಾಂಶವನ್ನು ಡೌನ್​ಲೋಡ್ ಮಾಡಿ ಇಟ್ಟುಕೊಳ್ಳಿ.

IBPS Clerk 2020 ಅಂಕಪಟ್ಟಿಯಲ್ಲಿ ಈ ವಿವರಗಳು ಲಭ್ಯವಿರುತ್ತದೆ
ಅಭ್ಯರ್ಥಿಯ ಹೆಸರು
ದಾಖಲಾತಿ (ರಿಜಿಸ್ಟ್ರೇಶನ್) ಸಂಖ್ಯೆ
ಕ್ರಮ ಸಂಖ್ಯೆ
ಅರ್ಹತಾ ವಿವರಗಳು

Published On - 3:52 pm, Sat, 6 February 21

TV9 Web

TV9 Kannada

Read More
Loading...
Unable to load recommendations.
Follow Us