ತಮ್ಮನ್ನು ಭೇಟಿಯಾಗಲು ಬಂದ ಆಪ್ ಕಾರ್ಯಕರ್ತರನ್ನು ತಡೆದ ಇನ್ಸ್ಪೆಕ್ಟರನ್ನು ಸಸ್ಪೆಂಡ್ ಮಾಡಲು ಅಗ್ರಹಿಸಿದರು ಐಜಿಪಿ ರವೀಂದ್ರನಾಥ
ಶಿವಸ್ವಾಮಿ ಕಾರ್ಯಕರ್ತರನ್ನು ತಡೆದ ವಿಚಾರ ಅವರಿಗೆ ಗೊತ್ತಾದಾಗ ಕೆಂಡಾಮಂಡಲವಾಗುತ್ತಾರೆ. ಕೂಡಲೇ ಡಿಜಿ-ಐಜಿಪಿ ಪ್ರವೀಣ್ ಸೂದ್ ಅವರಿಗೆ ಫೋನ್ ಮಾಡಿ ಕೋಪದಿಂದಲೇ ವಿಷಯವನ್ನು ತಿಳಿಸಿ ಶಿವಸ್ವಾಮಿಯನ್ನು ಸಸ್ಪೆಂಡ್ ಮಾಡುವಂತೆ ಅಗ್ರಹಿಸುತ್ತಾರೆ
Bengaluru: ಮೊನ್ನೆಯಷ್ಟೇ ಡಿಜಿಪಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಸುದ್ದಿಯಲ್ಲಿದ್ದ ಡಾ ರವೀಂದ್ರನಾಥ (Dr Ravindranth) ಅವರು ಗುರುವಾರ ಮತ್ತೊಮ್ಮೆ ಸುದ್ದಿಯಲ್ಲಿದ್ದರು. ಅವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ (Aam Aadmi Party) ಕೆಲ ಸದಸ್ಯರು ಭೇಟಿಯಾಗಲು ಕಚೇರಿಗೆ ಬಂದಾಗ ಸ್ಥಳದಲ್ಲಿದ್ದ ಹೈಗ್ರೌಂಡ್ಸ್ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ ಶಿವಸ್ವಾಮಿಯರು (Shivaswami) ತಡೆದಿದ್ದಾರೆ. ಆಪ್ ಕಾರ್ಯಕರ್ತರು ಮತ್ತು ಶಿವಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ನಾವು ಅವರನ್ನು ಭೇಟಿಯಾಗಲು ಅಪಾಯಿಂಟ್ಮೆಂಟ್ ತೆಗೆದುಕೊಂಡಿದ್ದೇವೆ ನಮ್ಮನ್ನು ವಿನಾಕಾರಣ ಯಾಕೆ ತಡೆಯುತ್ತಿದ್ದೀರಿ ಅಂತ ಅವರು ಕೇಳಿದಾಗ ಹಾಗೆಲ್ಲ ಬಿಡಲಾಗಲ್ಲ, ನಾವು ಡಿಜಿಪಿ ಅವರ ಅನುಮತಿ ಕೇಳಬೇಕಾಗುತ್ತದೆ ಅಂತ ಶಿವಸ್ವಾಮಿ ಹೇಳುತ್ತಾರೆ.
ಅಷ್ಟರಲ್ಲಿ ಡಾ ರವೀಂದ್ರನಾಥ ಅವರೇ ಹೊರಬಂದಾಗ ಆಪ್ ಕಾರ್ಯಕರ್ತರು ಮತ್ತು ಪೊಲೀಸರ ನಡೆಯುತ್ತಿದ್ದ ವಾಗ್ವಾದ ಗೋಚರಿಸುತ್ತದೆ. ಶಿವಸ್ವಾಮಿ ಕಾರ್ಯಕರ್ತರನ್ನು ತಡೆದ ವಿಚಾರ ಅವರಿಗೆ ಗೊತ್ತಾದಾಗ ಕೆಂಡಾಮಂಡಲವಾಗುತ್ತಾರೆ. ಕೂಡಲೇ ಡಿಜಿ-ಐಜಿಪಿ ಪ್ರವೀಣ್ ಸೂದ್ ಅವರಿಗೆ ಫೋನ್ ಮಾಡಿ ಕೋಪದಿಂದಲೇ ವಿಷಯವನ್ನು ತಿಳಿಸಿ ಶಿವಸ್ವಾಮಿಯನ್ನು ಸಸ್ಪೆಂಡ್ ಮಾಡುವಂತೆ ಅಗ್ರಹಿಸುತ್ತಾರೆ. ವಿಷಯವನ್ನು ವಿವರವಾಗಿ ತಿಳಿಸಲು ಅವರ ಕಚೇರಿಗೆ ಬರುತ್ತಿರುವುದಾಗಿ ರವೀಂದ್ರನಾಥ ಹೇಳುತ್ತಾರೆ.
ಡಿಜಿ-ಐಜಪಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತಾಡಿದ ರವೀಂದ್ರನಾಥ, ತಾವೊಬ್ಬ ಐಪಿಎಸ್ ಅಧಿಕಾರಿಯಾಗಿದ್ದು, ಜನರು ತಮ್ಮನ್ನು ಭೇಟಿಯಾಗುವ ಮತ್ತು ತಾವು ಸಾರ್ವಜನಿಕರನ್ನು ಭೇಟಿಯಾಗುವ ಸಂವೈಧಾನಿಕ ಹಕ್ಕು ತಮಗಿದೆ. ಆಪ್ ಕಾರ್ಯಕರ್ತರು ತಮ್ಮನ್ನು ಭೇಟಿಯಾಗಲು ಅಪಾಯಿಂಟ್ಮೆಂಟ್ ಪಡೆದುಕೊಂಡಿದ್ದರು. ಆದರೆ ಅವರನ್ನು ಒಬ್ಬ ಇನ್ಸ್ಪೆಕ್ಟರ್ ತಡೆದಿದ್ದಾರೆ. ಯಾಕೆ ಅಂತ ಕೇಳಿದಾಗ ಮೇಲಾಧಿಕಾರಿಗಳ ಆದೇಶ ಅಂತ ಅವರು ಹೇಳಿದರು. ದೊಡ್ಡ ಮೇಲಾಧಿಕಾರಿಯೆಂದರೆ ಡಿಜಿ-ಐಜಿಪಿಯವರು. ಹಾಗಾಗಿ ಅವರನ್ನು ಕೇಳಲು ಇಲ್ಲಿಗೆ ಬಂದಿದ್ದೆ. ಅವರು ಇಲ್ಲಿಲ್ಲ, ರೇಸ್ ಕೋರ್ಸ್ ರೋಡಲ್ಲಿ ಇದ್ದಾರಂತೆ. ಹಾಗಾಗಿ ಅವರಿರುವಲ್ಲಿಗೆ ಹೋಗುತ್ತಿದ್ದೇನೆ ಅಂತ ರವೀಂದ್ರನಾಥ್ ಹೇಳಿದರು.
ಇದನ್ನೂ ಓದಿ: ಡಿಜಿಪಿ ಡಾ.ಪಿ.ರವೀಂದ್ರನಾಥ್ ರಾಜೀನಾಮೆಗೂ ನನಗೂ ಸಂಬಂಧ ಇಲ್ಲ: ಶಾಸಕ ರೇಣುಕಾಚಾರ್ಯ ಸ್ಪಷ್ಟನೆ