ಅಕ್ರಮ ಜಾನುವಾರು ಸಾಗಾಟ: ವಾಹನವನ್ನು ಬೆನ್ನಟ್ಟಿ ರಾಸುಗಳನ್ನು ರಕ್ಷಿಸಿದ ಖಾಕಿ ಪಡೆ

ಮಂಗಳೂರು: ಗಾಳಿಯಲ್ಲಿ ಗುಂಡು ಹಾರಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಪೊಲೀಸರು ರಕ್ಷಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಮೂಡುಕೊಣಾಜೆ ಎಂಬಲ್ಲಿ ನಡೆದಿದೆ. ಶಿರ್ತಾಡಿ ಕಡೆಯಿಂದ 6 ದನಗಳನ್ನು ರಿಟ್ಸ್ ಕಾರಿನಲ್ಲಿ ತುಂಬಿಸಿಕೊಂಡು ಅಕ್ರಮವಾಗಿ ಜಾನುವಾರು ಸಾಗಿಸ್ತಿದ್ದವರ ಬಂಧಿಸಲು ಮೂಡುಬಿದ್ರೆ ವೃತ್ತ ನಿರೀಕ್ಷಕ BS ದಿನೇಶ್ ಕುಮಾರ್ ತಂಡ ಚೇಸಿಂಗ್ ಮಾಡಿದೆ. ಈ ವೇಳೆ ಜೀಪ್‌ಗೆ ಡಿಕ್ಕಿ ಹೊಡೆಯಲು ಕದೀಮರು ಪ್ರಯತ್ನಿಸಿದ್ದಾರೆ. ಆಗ ಪೊಲೀಸ್ ಅಧಿಕಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಆರೋಪಿಗಳು […]

ಅಕ್ರಮ ಜಾನುವಾರು ಸಾಗಾಟ: ವಾಹನವನ್ನು ಬೆನ್ನಟ್ಟಿ ರಾಸುಗಳನ್ನು ರಕ್ಷಿಸಿದ ಖಾಕಿ ಪಡೆ
ಆಯೇಷಾ ಬಾನು

Updated on: Oct 11, 2020 | 11:15 AM

ಮಂಗಳೂರು: ಗಾಳಿಯಲ್ಲಿ ಗುಂಡು ಹಾರಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಪೊಲೀಸರು ರಕ್ಷಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಮೂಡುಕೊಣಾಜೆ ಎಂಬಲ್ಲಿ ನಡೆದಿದೆ.

ಶಿರ್ತಾಡಿ ಕಡೆಯಿಂದ 6 ದನಗಳನ್ನು ರಿಟ್ಸ್ ಕಾರಿನಲ್ಲಿ ತುಂಬಿಸಿಕೊಂಡು ಅಕ್ರಮವಾಗಿ ಜಾನುವಾರು ಸಾಗಿಸ್ತಿದ್ದವರ ಬಂಧಿಸಲು ಮೂಡುಬಿದ್ರೆ ವೃತ್ತ ನಿರೀಕ್ಷಕ BS ದಿನೇಶ್ ಕುಮಾರ್ ತಂಡ ಚೇಸಿಂಗ್ ಮಾಡಿದೆ. ಈ ವೇಳೆ ಜೀಪ್‌ಗೆ ಡಿಕ್ಕಿ ಹೊಡೆಯಲು ಕದೀಮರು ಪ್ರಯತ್ನಿಸಿದ್ದಾರೆ.

ಆಗ ಪೊಲೀಸ್ ಅಧಿಕಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ನಂತರ ಪೊಲೀಸರು 6 ಜಾನುವಾರು ರಕ್ಷಿಸಿ, ಕಾರನ್ನು ವಶಕ್ಕೆ ಪಡೆದಿದ್ದಾರೆ. ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us