Ashok Dinda: ಎಲ್ಲ ಮಾದರಿ ಕ್ರಿಕೆಟ್​ಗೆ ವಿದಾಯ ಹೇಳಿದ ಟೀಂ ಇಂಡಿಯಾ ವೇಗಿ ಅಶೋಕ್​ ದಿಂಡಾ

| Updated By: ಸಾಧು ಶ್ರೀನಾಥ್​

Updated on: Feb 03, 2021 | 12:03 PM

Ashok Dinda Retirement: ಈಡನ್ ಗಾರ್ಡನ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದಿಂಡಾ, ಇಂದು ನಾನು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಹೊಂದುತ್ತಿದ್ದೇನೆ. ಈ ನಿಟ್ಟಿನಲ್ಲಿ ನಾನು ಬಿಸಿಸಿಐ ಮತ್ತು ಗೋವಾ ಕ್ರಿಕೆಟ್ ಸಂಘಕ್ಕೆ ಇಮೇಲ್ ಕಳುಹಿಸಿದ್ದೇನೆ ಎಂದರು.

Ashok Dinda: ಎಲ್ಲ ಮಾದರಿ ಕ್ರಿಕೆಟ್​ಗೆ ವಿದಾಯ ಹೇಳಿದ ಟೀಂ ಇಂಡಿಯಾ ವೇಗಿ ಅಶೋಕ್​ ದಿಂಡಾ
ವೇಗದ ಬೌಲರ್ ಅಶೋಕ್ ದಿಂಡಾ
Follow us on

ಟೀಂ ಇಂಡಿಯಾದ ಹಿರಿಯ ವೇಗದ ಬೌಲರ್ ಅಶೋಕ್ ದಿಂಡಾ (Ashok Dinda) ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಫೆಬ್ರವರಿ 2 ರಂದು, ಅವರು ಎಲ್ಲಾ ಸ್ವರೂಪದ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ, ಅವರ ಸುಮಾರು ಒಂದೂವರೆ ದಶಕದ ಸುದೀರ್ಘ ವೃತ್ತಿಜೀವನ ಕೊನೆಗೊಂಡಿದೆ. ಭಾರತಕ್ಕಾಗಿ 13 ಏಕದಿನ ಮತ್ತು ಒಂಬತ್ತು ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ 36 ವರ್ಷದ ದಿಂಡಾ, ಗೋವಾ ಪರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ (Syed Mushtaq Ali Trophy) ಮೂರು ಪಂದ್ಯಗಳನ್ನು ಆಡಿದರು. ಇದರ ನಂತರ ಅವರ ದೇಹವು ಕ್ರಿಕೆಟ್​ಗೆ ಸರಿಯಾಗಿ ಬೆಂಬಲ ನೀಡದ ಕಾರಣ ದಿಂಡಾ ಈ ತೀರ್ಮಾನ ತೆಗೆದುಕೊಂಡಿದ್ದಾರೆ.

ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಹೊಂದುತ್ತಿದ್ದೇನೆ..
ಈಡನ್ ಗಾರ್ಡನ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದಿಂಡಾ, ಇಂದು ನಾನು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಹೊಂದುತ್ತಿದ್ದೇನೆ. ಈ ನಿಟ್ಟಿನಲ್ಲಿ ನಾನು ಬಿಸಿಸಿಐ ಮತ್ತು ಗೋವಾ ಕ್ರಿಕೆಟ್ ಸಂಘಕ್ಕೆ ಇಮೇಲ್ ಕಳುಹಿಸಿದ್ದೇನೆ ಎಂದರು. ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಅವಿಶೇಕ್ ದಾಲ್ಮಿಯಾ, ಕಾರ್ಯದರ್ಶಿ ಸ್ನೇಹಶಿಶ್ ಗಂಗೂಲಿ ಮತ್ತು ಜಂಟಿ ಕಾರ್ಯದರ್ಶಿ ದೇವವ್ರತಾ ದಾಸ್ ಅವರು ದಿಂಡಾ ಅವರ ಕೊಡುಗೆಗಾಗಿ ಧನ್ಯವಾದಗಳನ್ನು ಅರ್ಪಿಸಿ, ಬೆಳ್ಳಿ ಫಲಕ ನೀಡಿ ಸನ್ಮಾನಿಸಿದರು.

ಪ್ರಥಮ ದರ್ಜೆಯಲ್ಲಿ 420 ವಿಕೆಟ್‌ಗಳನ್ನು ಪಡೆದಿರುವ ದಿಂಡಾ..
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ದಿಂಡಾ ದೆಹಲಿ ಡೇರ್‌ಡೆವಿಲ್ಸ್, ಕೋಲ್ಕತಾ ನೈಟ್ ರೈಡರ್ಸ್, ಪುಣೆ ವಾರಿಯರ್ಸ್, ರೈಸಿಂಗ್ ಪುಣೆ ಸೂಪರ್‌ಜಿಯಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಪ್ರತಿನಿಧಿಸಿದ್ದಾರೆ. ಈ ವೇಗದ ಬೌಲರ್ 78 ಐಪಿಎಲ್ ಪಂದ್ಯಗಳಲ್ಲಿ 22.20 ಸ್ಟ್ರೈಕ್ ದರದಲ್ಲಿ 68 ವಿಕೆಟ್ ಪಡೆದಿದ್ದಾರೆ. 116 ಪ್ರಥಮ ದರ್ಜೆ ಪಂದ್ಯಗಳಲ್ಲಿ 420 ವಿಕೆಟ್ ಪಡೆದಿರುವ ದಿಂಡಾ, ಮಾಜಿ ಎಡಗೈ ಸ್ಪಿನ್ನರ್ ಉತ್ತಪಾಲ್ ಚಟರ್ಜಿ ನಂತರ ಬಂಗಾಳದ ಎರಡನೇ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ.

2009 ರಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿತ್ತು..
ಅಶೋಕ್ ದಿಂಡಾ ಅವರು 2010 ರಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಆದರೆ 2013 ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ನಂತರ ಅವರನ್ನು ಟೀಂ ಇಂಡಿಯಾದಿಂದ ಕೈಬಿಡಲಾಯಿತು. ಇದರ ನಂತರ, ದಿಂಡಾ ಮತ್ತೆ ಟೀಮ್ ಇಂಡಿಯಾಕ್ಕೆ ಬರಲು ಸಾಧ್ಯವಾಗಲಿಲ್ಲ. 13 ಏಕದಿನ ಪಂದ್ಯಗಳಲ್ಲಿ 12 ವಿಕೆಟ್ ಪಡೆದಿದ್ದಾರೆ. ಅದೇ ಸಮಯದಲ್ಲಿ, ಒಂಬತ್ತು ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 17 ವಿಕೆಟ್​ಗಳನ್ನು ಪಡೆಯುವಲ್ಲಿ ದಿಂಡಾ ಯಶಸ್ವಿಯಾಗಿದ್ದಾರೆ. ಡಿಸೆಂಬರ್ 2009 ರಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಟಿ 20 ಪಂದ್ಯವನ್ನು ಆಡಿದ ದಿಂಡಾ, ಮೂರು ವರ್ಷಗಳ ನಂತರ 2012 ರ ಡಿಸೆಂಬರ್‌ನಲ್ಲಿ ಪಾಕಿಸ್ತಾನ ವಿರುದ್ಧ ಮೈದಾನಕ್ಕಿಳಿದಿದ್ದರು. ಈ ಪಂದ್ಯದ ನಂತರ ಅವರನ್ನು ಈ ಮಾದರಿಯಲ್ಲಿ ಭಾರತೀಯ ತಂಡದಿಂದ ಕೈಬಿಡಲಾಯಿತು.

ಮೊದಲ ಪಂದ್ಯದಲ್ಲೇ ಶೂನ್ಯ ಸುತ್ತಿದ್ದ ಧೋನಿ.. ಅಂತರ​ರಾಷ್ಟ್ರೀಯ ಕ್ರಿಕೆಟ್​ ಜಗತ್ತಿಗೆ ಕಾಲಿರಿಸಿ ಇಂದಿಗೆ 16 ವರ್ಷ