ಇಂಗ್ಲೆಂಡ್ ವಿರುದ್ದ ಭಾರತ ಮೊದಲ ಟೆಸ್ಟ್ ಸೋತಾಗ ಭಾರತದ ಪ್ರದರ್ಶನವನ್ನು ಮತ್ತು ವಿರಾಟ್ ಕೊಹ್ಲಿಯ ನಾಯಕತ್ವವನ್ನು ಬಹಳ ಜನರು ಟೀಕಿಸಿದ್ದರು. ಆದರೆ, ಭಾರತ ಸೋಲಿನ ವಿರುದ್ಧ ಪುಟಿದೆದ ಕೊಹ್ಲಿ ಪಡೆ ನಂತರದ ಮೂರು ಟೆಸ್ಟ್ ಪಂದ್ಯಗಳನ್ನು ಬಹಳ ಸುಲಭವಾಗಿ ಗೆದ್ದು ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಂಡಿದೆ. ಅದಕ್ಕೂ ಮಿಗಿಲಾದ ಸಂಗತಿಯೆಂದರೆ, ಈ ಸರಣಿ ಗೆಲುವು ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ (WTC ) ಆಡುವ ಅರ್ಹತೆ ದೊರಕಿಸಿದೆ. ಹಾಗೆ ನೋಡಿದರೆ, ಕೊನೆಯ ಟೆಸ್ಟ್ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿದ್ದರೂ ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸುತ್ತಿತ್ತು.
ನಾವು ಈಗಾಗಲೇ ಚರ್ಚಿಸಿರುವಂತೆ ನ್ಯೂಜಿಲೆಂಡ್ ಅದಾಗಲೇ ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸಿದೆ. ಪ್ರತಿಷ್ಠಿತ ಫೈನಲ್ ಪಂದ್ಯವು ಜೂನ್ನಲ್ಲಿ ಕ್ರಿಕೆಟ್ ಕಾಶಿಯೆಂದು ಕರೆಸಿಕೊಳ್ಳುವ ಇಂಗ್ಲೆಂಡ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಭಾರತದ ಅನೇಕ ಆಟಗಾರರು ಡಬ್ಲ್ಯೂಟಿಸಿ ಚಾಂಪಿಯನ್ಶಿಪ್ ಗೆಲ್ಲುವುದು 50 ಓವರ್ಗಳ ಐಸಿಸಿ ವಿಶ್ವಕಪ್ ಗೆಲ್ಲುವದಕ್ಕಿಂತ ಮಹತ್ವದ್ದು ಅಂತ ಹೇಳಿದ್ದಾರೆ. ಹಾಗಾಗಿ, ಭಾರತೀಯರೆಲ್ಲರು ಆ ಪಂದ್ಯಕ್ಕಾಗಿ ಕಾತುರದಿಂದ ಎದುರು ನೋಡುತ್ತಿದ್ದಾರೆ.
That victory against England means India finish the league phase of the inaugural ICC World Test Championship with a fine view from the top of the table ?#INDvENG | #WTC21 pic.twitter.com/rXFiKPXdB7
— ICC (@ICC) March 6, 2021
ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಕೊನೆಯ ಟೆಸ್ಟ್ ಆರಂಭವಾಗುವ ಮೊದಲು ಡಬ್ಲ್ಯೂಟಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿತ್ತು ಮತ್ತು ಭಾರತ ಎರಡನೇ ಸ್ಥಾನದಲ್ಲಿತ್ತು. ಆದರೆ, ಇಂದಿನ ಭರ್ಜರಿ ಜಯದೊಂದಿಗೆ ಭಾರತ ಈ ಟೇಬಲ್ನ ಅಗ್ರಸ್ಥಾನಕ್ಕೆ ಜಿಗಿದಿದೆ. ಭಾರತದ ಪರ್ಸೆಂಟೇಜ್ ಆಫ್ ಪಾಯಿಂಟ್ಸ್ (ಪಿಸಿಟಿ) 72.2 ಇದ್ದರೆ ನ್ಯೂಜಿಲೆಂಡ್ ಪಿಸಿಟಿ 70.0 ಇದೆ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಮವಾಗಿ 3 ಮತ್ತು 4 ನೇ ಸ್ಥಾನದಲ್ಲಿವೆ. 2019 ರ ಜೂನ್ನಿಂದ 2021 ರ ಜೂನ್ವರೆಗಿನ ಡಬ್ಲ್ಯೂಟಿಸಿ ಸೈಕಲ್ನಲ್ಲಿ ಭಾರತ 5 ಸರಣಿಗಳನ್ನಾಡಿ, 12 ಟೆಸ್ಟ್ ಪಂದ್ಯಗಳನ್ನು ಗೆದ್ದು 4 ರಲ್ಲಿ ಮಾತ್ರ ಸೋತು 1 ಪಂದ್ಯ ಡ್ರಾ ಮಾಡಿಕೊಂಡಿದೆ. ಇದೇ ಅವಧಿಯಲ್ಲಿ ನ್ಯೂಜಿಲೆಂಡ್ ಸಹ 5 ಸರಣಿಗಳನ್ನಾಡಿ 7 ಗೆದ್ದು 4ರಲ್ಲಿ ಸೋಲುಂಡಿದೆ.
ಅಂದ ಹಾಗೆ, ಐಸಿಸಿ ಟೆಸ್ಟ್ ರ್ಯಾಕಿಂಗ್ನಲ್ಲೂ ಬಾರತ ಮೊದಲ ಸ್ಥಾನಕ್ಕೆ ಜಿಗಿದಿದೆ. ಇಲ್ಲೂ ಭಾರತ ನ್ಯೂಜಿಲೆಂಡನ್ನು ಮೊದಲ ಸ್ಥಾನದಿಂದ ಪಲ್ಲಟಗೊಳಿಸಿದೆ.
India on ?
Virat Kohli and Co. are No.1 in the @MRFWorldwide ICC Test Team Rankings ? pic.twitter.com/uHG4q0pUlj
— ICC (@ICC) March 6, 2021
ಹೊಸದಾಗಿ ಬಿಡುಗಡೆಯಾಗಿರುವ ಐಸಿಸಿ ರ್ಯಾಕಿಂಗ್ಗಳ ಪ್ರಕಾರ, 122 ಅಂಕ ಗಳಿಸಿರುವ ಭಾರತ ಮೊದಲ ಸ್ಥಾನವನ್ನು ಆಕ್ರಮಿಸಿದರೆ, 118 ಅಂಕಗಳೊಂದಿಗೆ ನ್ಯೂಜಿಲೆಂಡ್ ಒಂದು ಸ್ಥಾನ ಕೆಳಗಡೆ ಜಾರಿದೆ. ಆಸ್ಟ್ರೇಲಿಯಾ 113 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ 105 ಪಾಯಿಂಟ್ಸ್ ಗಳಿಸಿರುವ ಇಂಗ್ಲೆಂಡ್ 4ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: India vs England 4th Test Day 3: ಭರ್ಜರಿ ಜಯದೊಂದಿಗೆ ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸಿದ ಭಾರತ
Published On - 5:23 pm, Sat, 6 March 21