India vs Australia Test Series | ಮೂರನೇ ಟೆಸ್ಟ್ ಪಂದ್ಯಕ್ಕೆ ವರುಣನ ಅಡ್ಡಿ.. ಆಸಿಸ್ಗೆ ಆರಂಭಿಕ ಆಘಾತ
ಆಸಿಸ್ ತಂಡದಿಂದ ವಿಲ್ ಪುಕೊವ್ಸ್ಕಿ ಹಾಗೂ ಇಂದಿನ ಪಂದ್ಯಕ್ಕೆ ಆಯ್ಕೆಯಾಗಿರುವ ಡೇವಿಡ್ ವಾರ್ನರ್ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ತಂಡದ ಭರವಸೆಯ ಆಟಗಾರ ಡೇವಿಡ್ ವಾರ್ನರ್ಗೆ(5 ರನ್) ಟೀಂ ಇಂಡಿಯಾದ ವೇಗಿ ಮಹಮ್ಮದ್ ಸಿರಾಜ್ ಬಹುಬೇಗನೆ ಪೆವಿಲಿಯನ್ ದಾರಿ ತೋರಿಸಿದ್ದಾರೆ.

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಟೆಸ್ಟ್ ಸರಣಿಯ ಮೂರನೇ ಪಂದ್ಯ ಇಂದು ಸಿಡ್ನಿಯಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಆಸಿಸ್ ತಂಡದಿಂದ ವಿಲ್ ಪುಕೊವ್ಸ್ಕಿ ಹಾಗೂ ಇಂದಿನ ಪಂದ್ಯಕ್ಕೆ ಆಯ್ಕೆಯಾಗಿರುವ ಡೇವಿಡ್ ವಾರ್ನರ್ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ತಂಡದ ಭರವಸೆಯ ಆಟಗಾರ ಡೇವಿಡ್ ವಾರ್ನರ್ಗೆ(5 ರನ್) ಟೀಂ ಇಂಡಿಯಾದ ವೇಗಿ ಮಹಮ್ಮದ್ ಸಿರಾಜ್ ಬಹುಬೇಗನೆ ಪೆವಿಲಿಯನ್ ದಾರಿ ತೋರಿಸಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಬೇಕಾಯಿತು.
ನಂತರ ಬಂದ ಮಾರ್ನಸ್ ಲಾಬುಸ್ಚೆನ್, ವಿಲ್ ಪುಕೊವ್ಸ್ಕಿ ಜೊತೆ ಸೇರಿ ತಾಳ್ಮೆಯ ಆಟಕ್ಕೆ ಮುಂದಾಗಿದ್ದಾರೆ. ಆದರೆ ಏಳು ಓವರ್‌ಗಳ ನಂತರ, ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಗಿದೆ. ಅಂಪೈರ್‌ಗಳು ಪಿಚ್ ಪರಿಶೀಲಿಸುತ್ತಿದ್ದು, ಊಟದ ನಂತರವೂ ಸಹ ಆಟ ಪ್ರಾರಂಭವಾಗಿಲ್ಲ. ಸದ್ಯ ಆಸ್ಟ್ರೇಲಿಯಾ 21 ರನ್ಗೆ 1 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
Published On - 9:23 am, Thu, 7 January 21




