ಟೀ ಸೆಷನ್ವರೆಗೂ ಬಂದ ಭಾರತದ ಬ್ಯಾಟ್ಸ್ಮನ್ಗಳಿಂದ ಚೇತೋಹಾರಿ ಆಟ: ಆದರೆ ಉಳಿದ 5 ವಿಕೆಟ್ ಬೀಳಲು 5 ಬಾಲ್ ಸಾಕು..
ಸದ್ಯದ ಪರಿಸ್ಥಿತಿಯಲ್ಲಿ ತಂಡದ ಸೋಲು ಗೆಲುವು, ಟೀಂ ಇಂಡಿಯಾದ ಉಳಿದ 5 ಆಟಗಾರರ ಬ್ಯಾಟಿಂಗ್ ಪ್ರದರ್ಶನದ ಮೇಲೆ ನಿಂತಿದೆ. ಹನುಮ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್ ಮೈದಾನದಲ್ಲಿ ತಾಳ್ಮೆಯ ಆಟಕ್ಕೆ ಮುಂದಾಗಿದ್ದಾರೆ.

ಸಿಡ್ನಿ: ಭಾರತ- ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ನ ಅಂತಿಮ ದಿನದಾಟದ ಕೊನೆಯ ಸೆಷನ್ ನಡೆಯುತ್ತಿದ್ದು, ಈ ಸೆಷನ್ನಲ್ಲಿ ಟೀಂ ಇಂಡಿಯಾದ ಆಟಗಾರರು ನೀಡುವ ಪ್ರದರ್ಶನದ ಮೇಲೆ ಪಂದ್ಯದ ಫಲಿತಾಂಶ ನಿರ್ಣಯವಾಗಲಿದೆ.
ಅಂತಿಮ ದಿನದಾಟದಲ್ಲಿ ಭಾರತೀಯ ಆಟಗಾರರು ಜವಬ್ದಾರಿಯುತವಾದ ಆಟಕ್ಕೆ ಮುಂದಾಗಿದ್ದಾರೆ. ಪಂದ್ಯದ ಆರಂಭದಲ್ಲಿ ನಾಯಕ ರಹಾನೆ ಬೇಗನೆ ವಿಕೆಟ್ ಒಪ್ಪಿಸಿದ್ದನ್ನು ಬಿಟ್ಟರೆ, ಉಳಿದ ಆಟಗಾರರು ತಮ್ಮ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿಬಾಯಿಸಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್ 2ನೇ ಇನ್ನಿಂಗ್ಸ್ನಲ್ಲಿ ಅದ್ಭುತವಾದ ಆಟ ಆಡಿದರು. ಈ ಮೂಲಕ ತಂಡಕ್ಕೆ 97 ರನ್ಗಳ ಅಮೂಲ್ಯ ಕೊಡುಗೆ ನೀಡಿದರು. ಹಾಗೆಯೇ ಪೂಜಾರ ಸಹ ತಂಡಕ್ಕೆ 77 ರನ್ಗಳ ಅವಶ್ಯಕ ಕೊಡುಗೆ ನೀಡಿದರು.
ಸದ್ಯದ ಪರಿಸ್ಥಿತಿಯಲ್ಲಿ ತಂಡದ ಸೋಲು ಗೆಲುವು, ಟೀಂ ಇಂಡಿಯಾದ ಉಳಿದ 5 ಆಟಗಾರರ ಬ್ಯಾಟಿಂಗ್ ಪ್ರದರ್ಶನದ ಮೇಲೆ ನಿಂತಿದೆ. ಹನುಮ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್ ಮೈದಾನದಲ್ಲಿ ತಾಳ್ಮೆಯ ಆಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರೇ ದಿನದ ಅಂತ್ಯದವರೆಗೂ ಬ್ಯಾಟಿಂಗ್ ಉಳಿಸಿಕೊಂಡರೆ ಪಂದ್ಯದ ಪಲಿತಾಂಶವೇ ಬದಲಾಗಬಹುದು. ಉಳಿದಿರುವ 22 ಓವರ್ಗಳಲ್ಲಿ ಟೀಂ ಇಂಡಿಯಾಗೆ 108 ರನ್ಗಳು ಬೇಕಾಗಿದೆ. ಆದರೆ ಟೀಂ ಆಸಿಸ್ಗೆ ಪಂದ್ಯ ಗೆಲ್ಲಲು ಬೇಕಾಗಿರುವುದು ಕೇವಲ 5 ಬಾಲ್ನಲ್ಲಿ 5 ವಿಕೆಟ್ಗಳಷ್ಟೇ.
ಗಾಯದ ಸಮಸ್ಯೆಯಲ್ಲೂ ವಿಶಿಷ್ಟ ಸಾಧನೆ ಮಾಡಿದ ಹನುಮ ವಿಹಾರಿ.. ಸದ್ಯದ ಪರಿಸ್ಥಿತಿಯಲ್ಲಿ ತಂಡದ ಬ್ಯಾಟಿಂಗ್ ಆದಾರಸ್ತಂಭವಾಗಿರುವ ಹನುಮ ವಿಹಾರಿ ಮಂಡಿ ನೋವಿಗೆ ಒಳಗಾಗಿದ್ದಾರೆ. ಆದರೂ ಸಹ ತಂಡಕ್ಕಾಗಿ ತಮ್ಮ ಬ್ಯಾಟಿಂಗ್ ಮುಂದುವರೆಸಿರುವ ವಿಹಾರಿ ಬರೋಬ್ಬರಿ 106 ಬಾಲ್ಗಳನ್ನ ಎದುರಿಸಿ ಕೇವಲ 6 ರನ್ ಗಳಿಸಿದ್ದಾರೆ.ಈ ಮೂಲಕ ಯಶ್ಪಾಲ್ ಶರ್ಮ ಹೆಸರಿಲ್ಲಿದ್ದ ಅತೀ ಹೆಚ್ಚು ಬಾಲ್ ಎದುರಿಸಿ ಕಡಿಮೆ ರನ್ (157 ಬಾಲ್ ಎದುರಿಸಿ 13 ರನ್ ಬಾರಿಸಿದ್ದರು) ಬಾರಿಸಿದ್ದ ದಾಖಲೆಯನ್ನು ಹನುಮ ವಿಹಾರಿ ಮುರಿಯುವ ಸನಿಹದಲ್ಲಿದ್ದಾರೆ.
Published On - 11:17 am, Mon, 11 January 21
