India vs Australia 2020 ಟೀಂ ಇಂಡಿಯಾ ಗೆಲುವಿನ ರಹಸ್ಯ ಬಿಚ್ಚಿಟ್ಟ ಆಸ್ಟ್ರೇಲಿಯಾ ನಾಯಕ!
ನಮ್ಮ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡಿದರು. ಇದಕ್ಕೆ ಇಂಡಿಯಾ ಬೌಲರ್ಗಳ ಉತ್ತಮ ಪ್ರದರ್ಶನ ಕೂಡ ಕಾರಣ. ಇನ್ನೂ ಎರಡು ಪಂದ್ಯಗಳಿವೆ. ಅದರಲ್ಲಿ ನಾವು ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದರು ಟಿಮ್.
ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಟೀಂ ಇಂಡಿಯಾ 8 ವಿಕೆಟ್ಗಳ ಗೆಲುವು ದಾಖಲಿಸಿದೆ. ಬೌಲರ್ ಹಾಗೂ ಬ್ಯಾಟ್ಸ್ಮನ್ಗಳ ಅದ್ಭುತ ಸಾಂಘಿಕ ಪ್ರದರ್ಶನದಿಂದ ಟೀಂ ಇಂಡಿಯಾ ಗೆಲುವು ದಾಖಲಿಸಿದೆ. ಈ ಮಧ್ಯೆ ಭಾರತ ಗೆಲ್ಲಲು ಆಸ್ಟ್ರೇಲಿಯಾದ ಕಳಪೆ ಆಟ ಹಾಗೂ ಟೀಂ ಇಂಡಿಯಾ ಬೌಲರ್ಗಳ ಚಮತ್ಕಾರವೇ ಕಾರಣ ಎಂದು ನಾಯಕ ಟಿಮ್ ಪೈನ್ ಮ್ಯಾಚ್ ಕುರಿತು ಷರಾ ಬರೆದಿದ್ದಾರೆ.
ಇನ್ನೂ ಎರಡು ಪಂದ್ಯಗಳಿವೆ.. ’ಮ್ಯಾಚ್ ಪೂರ್ಣಗೊಂಡ ನಂತರದಲ್ಲಿ ಮಾತನಾಡಿದ ಟಿಮ್ ಪೈನ್, ನಿಜಕ್ಕೂ ನಾವು ನಿರಾಶೆಗೊಂಡಿದ್ದೇವೆ. ನಮ್ಮ ಆಟಗಾರರು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಎರಡರಲ್ಲೂ ನಾವು ಎಡವಿದ್ದೇವೆ. ಹೀಗಾದಾಗ ಗೆಲ್ಲುವುದು ಕಷ್ಟ ಎಂದಿದ್ದಾರೆ.
ನಮ್ಮ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡಿದರು. ಇದಕ್ಕೆ ಇಂಡಿಯಾ ಬೌಲರ್ಗಳ ಉತ್ತಮ ಪ್ರದರ್ಶನ ಕೂಡ ಕಾರಣ. ಇನ್ನೂ ಎರಡು ಪಂದ್ಯಗಳಿವೆ. ಅದರಲ್ಲಿ ನಾವು ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದರು ಟಿಮ್.
ಮುಂದಿನ ಟೆಸ್ಟ್ಗೆ ರೋಹಿತ್: ರೋಹಿತ್ ಈಗಾಗಲೇ ಆಸ್ಟ್ರೇಲಿಯಾಗೆ ತೆರಳಿ ಕ್ವಾರಂಟೈನ್ ಆಗಿದ್ದಾರೆ. ಈಗ ಕ್ವಾರಂಟೈನ್ ಅವಧಿ ಪೂರ್ಣಗೊಂಡಿದ್ದು, ಮೂರನೇ ಟೆಸ್ಟ್ಗೆ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಭಾರತದ ಬೌಲರ್ಗಳು ಮಿಂಚುತ್ತಿದ್ದಾರೆ. ಹೀಗಾಗಿ, ಬ್ಯಾಟಿಂಗ್ಗೆ ಬಲ ನೀಡಲು ರೋಹಿತ್ ಸೇರ್ಪಡೆ ಸಹಕಾರಿಯಾಗಲಿದೆ. ರೋಹಿತ್ ತಂಡ ಸೇರಿದರೆ ಮಯಾಂಕ್ ಅಗರ್ವಾಲ್ ಅಥವಾ ಚೇತೇಶ್ವರ್ ಪೂಜಾರ ತಂಡದಿಂದ ಹೊರಗುಳಿಯಬೇಕಾಗುತ್ತದೆ.
India vs Australia 2020 ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಟೀಂ ಇಂಡಿಯಾ ನಗುವಿನ ಕೇಕೆ: ಇಲ್ಲಿವೆ ಚಿತ್ರಗಳು