ನವದೆಹಲಿ: ಪಾಕಿಸ್ತಾನ ಮತ್ತೆ ತನ್ನ ಕುತಂತ್ರವನ್ನ ಮೆರೆದಿದೆ. ಪಾಕಿಸ್ತಾನ ಜೈಲಿನಲ್ಲಿರುವ ಭಾರತದ ಪ್ರಜೆ ಕುಲಭೂಷಣ್ ಜಾಧವ್ ಭೇಟಿಗೆ ಭಾರತಕ್ಕೆ ಮಕ್ತ ಅವಕಾಶ ನೀಡುವುದಾಗಿ ಹೇಳಿದ ಮಾತಿಗೆ ತಪ್ಪಿದೆ. ಹೀಗಾಗಿ ಕುಲಭೂಷಣ್ ಜಾಧವ್ ಅವರ ಭೇಟಿಗೆ ಹೋಗಿದ್ದ ಅಧಿಕಾರಿಗಳು ವಾಪಸ್ ಬಂದಿದ್ದಾರೆ.
ಹೌದು ಕುಲಭೂಷಣ್ ಭೇಟಿಗೆ ಭಾರತಕ್ಕೆ ಮಕ್ತ ಅವಕಾಶ ನೀಡಬೇಕೆಂದು ಅಂತಾರಾಷ್ಟ್ರೀಯ ಕೋರ್ಟ್ ನೀಡಿದ್ದ ತಿರ್ಪು ಪಾಲಿಸಲು ಪಾಕಿಸ್ತಾನ ವಿಫಲವಾಗಿದೆ. ಭಾರತದ ರಾಜತಾಂತ್ರಿಕ ಅಧಿಕಾರಿಗಳಿಗೆ ಜಾಧವ್ ಅವರನ್ನು ಮುಕ್ತವಾಗಿ ಭೇಟಿ ಮಾಡಲು ಅವಕಾಶ ನೀಡುವ ಬದಲು ಅಲ್ಲಿ ತನ್ನ ಭದ್ರತಾ ಸಿಬ್ಬಂದಿಯನ್ನು ನೇಮಿಸಿದೆ. ಅಷ್ಟೇ ಅಲ್ಲ ಅಧಿಕಾರಿಗಳು ಮತ್ತು ಜಾಧವ್ ಬೇಟಿಯನ್ನ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲು ಮುಂದಾಗಿದೆ. ಹೀಗಾಗಿ ಜಾಧವ್ ಮುಕ್ತಮನಸ್ಸಿನಿಂದ ಭಾರತದ ಅಧಿಕಾರಿಗಳೊಂದಿಗೆ ಮಾತನಾಡಲು ಸಾಧ್ಯವಾಗಿಲ್ಲ.
ಈ ಬಗ್ಗೆ ಪಾಕಿಸ್ತಾನಕ್ಕೆ ತನ್ನ ಪ್ರತಿಭಟನೆ ಸಲ್ಲಿಸಿರುವ ವಿದೇಶಾಂಗ ಸಚಿವಾಲಯ, ಇದು ಅಂತಾರಾಷ್ಟ್ರೀಯ ಕೋರ್ಟ್ ನೀಡಿದ್ದ ತೀರ್ಪಿನ ಉಲ್ಲಂಘನೆಯಾಗಿದೆ. ಜಾಧವ್ ಮುಕ್ತ ಭೇಟಿಗೆ ಅವಕಾಶ ನೀಡಿಲ್ಲ. ಭೇಟಿಯ ಸಂದರ್ಭದಲ್ಲಿ ಪಾಕ್ ಅಧಿಕಾರಿಗಳು ಜಾಧವ್ ಪಕ್ಕವೇ ನಿಂತು ಅವರು ಮುಕ್ತವಾಗಿ ಮಾತನಾಡದ ವಾತಾವರಣ ಸೃಷ್ಟಿಸಿದ್ದರು. ಇದು ಕೋರ್ಟ್ ಮತ್ತು ರಾಜತಾಂತ್ರಿಕ ನಿಯಮಗಳ ಉಲ್ಲಂಘನೆ ಎಂದು ತನ್ನ ಪ್ರತಿಭಟನೆ ಸಲ್ಲಿಸಿದೆ.