AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ಸರ್ಕಾರದ ಹೊಸ ಕೊರೊನಾ ಮಾರ್ಗಸೂಚಿಯಲ್ಲಿ ಏನೇನಿದೆ ಗೊತ್ತಾ?

ಬೆಂಗಳೂರು: ಕೊರೊನಾ ಸೋಂಕಿತರು ಹಾಗೂ ಸೋಂಕಿಲ್ಲದ ವ್ಯಕ್ತಿಗಳಿಗೆ ಚಿಕಿತ್ಸೆ ಕುರಿತುಂತೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಕಾರ, ಸೋಂಕಿಲ್ಲದವರು ಜ್ವರ ಕೆಮ್ಮು ಉಸಿರಾಟದ ತೊಂದರೆ ಕಂಡುಬಂದ್ರೆ ಟೋಲ್ ಫ್ರೀ ನಂಬರ್ 14410 ಗೆ ಕರೆ ಮಾಡಿ ಚಿಕಿತ್ಸೆ ಪಡೆಯಬಹದು.ಕೇವಲ ಅವಶ್ಯಕತೆ ಇದ್ರೆ ಮಾತ್ರ ಮನೆಯಿಂದ ಹೊರಹೋಗಬಹುದಾಗಿದೆ. ಹಾಗೆ ಹೊರಗೆ ಹೋಗುವಾಗ ಮುಖಕ್ಕೆ ಖಡ್ಡಾಯವಾಗಿ ಮಾಸ್ಕ್ ಬಳಸಬೇಕು ಎಂದು ತಿಳಿಸಿದೆ. ಇನ್ನು ಕೊರೊನಾ ಸೋಂಕಿತರಿಗೂ ಸಲಹೆ ನೀಡಿದ […]

ರಾಜ್ಯ ಸರ್ಕಾರದ ಹೊಸ ಕೊರೊನಾ ಮಾರ್ಗಸೂಚಿಯಲ್ಲಿ ಏನೇನಿದೆ ಗೊತ್ತಾ?
Guru
|

Updated on: Jul 16, 2020 | 10:00 PM

Share

ಬೆಂಗಳೂರು: ಕೊರೊನಾ ಸೋಂಕಿತರು ಹಾಗೂ ಸೋಂಕಿಲ್ಲದ ವ್ಯಕ್ತಿಗಳಿಗೆ ಚಿಕಿತ್ಸೆ ಕುರಿತುಂತೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಕಾರ, ಸೋಂಕಿಲ್ಲದವರು ಜ್ವರ ಕೆಮ್ಮು ಉಸಿರಾಟದ ತೊಂದರೆ ಕಂಡುಬಂದ್ರೆ ಟೋಲ್ ಫ್ರೀ ನಂಬರ್ 14410 ಗೆ ಕರೆ ಮಾಡಿ ಚಿಕಿತ್ಸೆ ಪಡೆಯಬಹದು.ಕೇವಲ ಅವಶ್ಯಕತೆ ಇದ್ರೆ ಮಾತ್ರ ಮನೆಯಿಂದ ಹೊರಹೋಗಬಹುದಾಗಿದೆ. ಹಾಗೆ ಹೊರಗೆ ಹೋಗುವಾಗ ಮುಖಕ್ಕೆ ಖಡ್ಡಾಯವಾಗಿ ಮಾಸ್ಕ್ ಬಳಸಬೇಕು ಎಂದು ತಿಳಿಸಿದೆ.

ಇನ್ನು ಕೊರೊನಾ ಸೋಂಕಿತರಿಗೂ ಸಲಹೆ ನೀಡಿದ ಆರೋಗ್ಯ ಇಲಾಖೆ, ಉಸಿರಾಟದ ತೊಂದರೆ ಕಂಡುಬಂದಲ್ಲಿ 108 ಆ್ಯಂಬುಲೆನ್ಸ್ ಗೆ ಕರೆಮಾಡಬೇಕು. ಯಾವುದೇ ಗುಣಲಕ್ಷಣಗಳು ಇಲ್ಲದಿದ್ದರೆ ಮನೆಯಲ್ಲೇ ಪ್ರತ್ಯೇಕವಾಗಿ ಕ್ವಾರೆಂಟೈನ್ ಆಗಬೇಕು. ಅಂಥವರ ಆರೋಗ್ಯ ಪರಿಶೀಲನೆಗೆ ಅಧಿಕಾರಿಗಳೇ ಅವರನ್ನು ಸಂಪರ್ಕಿಸುತ್ತಾರೆ ಎಂದು ತಿಳಿಸಿದೆ.

ಒಂದು ವೇಳೆ ಯಾರಾದರೂ ಒತ್ತಡದಲ್ಲಿದ್ದರೇ 104ಕ್ಕೆ ಕರೆ ಮಾಡಬೇಕು, ನಂತರ 4 ನಂಬರಿನ ಬಟನ್ ಒತ್ತಬೇಕು ಎಂದು ಸೂಚಿಸಿದೆ. ರಾಜ್ಯದಲ್ಲಿ ಶೇಕಡಾ 95ಕ್ಕಿಂತಲೂ ಹೆಚ್ಚು ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ, ಹೀಗಾಗಿ ದೈರ್ಯದಿಂದ ಇರಿ ಅಂತಾ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸಲಹೆ ಮಾಡಿದೆ.

Advisory with Lab report