AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿ ಕೊರೊನಾ ರಣಕೇಕೆ: ಇಂದಿನಿಂದ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ

ಮೈಸೂರು: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಇಂದಿನಿಂದ 24ರ ವರೆಗೆ ಕೆಲ ಪ್ರದೇಶಗಳಲ್ಲಿ ಲಾಕ್​ಡೌನ್ ಮಾಡಲು ಆದೇಶ ನೀಡಲಾಗಿದೆ. ಹಾಗೂ ಸೀಲ್‌ಡೌನ್ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಮೈಸೂರಿನ ಸೀಲ್‌ಡೌನ್ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಮೈಸೂರಿನ ಮುನೇಶ್ವರನಗರ, ಕೆಹೆಚ್‌ಬಿ ಕಾಲೋನಿ, ಉದಯಗಿರಿ, ರಾಜೀವ್‌ನಗರ, ಬೀಡಿ ಕಾಲೋನಿ, ಸಾತಗಳ್ಳಿ ಬಡಾವಣೆಯಲ್ಲಿ ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಮೃತರ ಮನೆಯ 400 ಮೀ. ವ್ಯಾಪ್ತಿಯಲ್ಲಿ ಸೀಲ್‌ಡೌನ್ ಆಗಿದ್ದು, ಈ ಏರಿಯಾದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ತಪಾಸಣೆ […]

ಮೈಸೂರಿನಲ್ಲಿ ಕೊರೊನಾ ರಣಕೇಕೆ: ಇಂದಿನಿಂದ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ
ಪ್ರಾತಿನಿಧಿಕ ಚಿತ್ರ
ಆಯೇಷಾ ಬಾನು
|

Updated on:Jul 17, 2020 | 7:57 AM

Share

ಮೈಸೂರು: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಇಂದಿನಿಂದ 24ರ ವರೆಗೆ ಕೆಲ ಪ್ರದೇಶಗಳಲ್ಲಿ ಲಾಕ್​ಡೌನ್ ಮಾಡಲು ಆದೇಶ ನೀಡಲಾಗಿದೆ. ಹಾಗೂ ಸೀಲ್‌ಡೌನ್ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಮೈಸೂರಿನ ಸೀಲ್‌ಡೌನ್ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಮೈಸೂರಿನ ಮುನೇಶ್ವರನಗರ, ಕೆಹೆಚ್‌ಬಿ ಕಾಲೋನಿ, ಉದಯಗಿರಿ, ರಾಜೀವ್‌ನಗರ, ಬೀಡಿ ಕಾಲೋನಿ, ಸಾತಗಳ್ಳಿ ಬಡಾವಣೆಯಲ್ಲಿ ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ. ಮೃತರ ಮನೆಯ 400 ಮೀ. ವ್ಯಾಪ್ತಿಯಲ್ಲಿ ಸೀಲ್‌ಡೌನ್ ಆಗಿದ್ದು, ಈ ಏರಿಯಾದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ. ಅಗತ್ಯವಿದ್ದರೆ ಆ್ಯಂಟಿಜನ್ ಕಿಟ್ ಮೂಲಕ ಕೊವಿಡ್ ಟೆಸ್ಟ್ ಮಾಡಿಸಲಾಗುತ್ತೆ.

ಲಾಕ್​ಡೌನ್ ವೇಳೆ ಹೋಟೆಲ್‌ ಸೇವೆ ಇರುವುದಿಲ್ಲ. ಕೇವಲ ಪಾರ್ಸಲ್‌ ಮಾತ್ರ. ಲಾಕ್‌ಡೌನ್ ಪ್ರದೇಶದಲ್ಲಿ ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಲಾಗುತ್ತೆ. ಬೆಳಗ್ಗೆ 6ಗಂಟೆಯಿಂದ 10ಗಂಟೆವರೆಗೆ ಖರೀದಿ ಮಾಡಬಹುದು. ನಂತರ ಲಾಕ್‌ಡೌನ್ ಪ್ರದೇಶದಿಂದ ಜನ ಹೊರಗೆ ಹೋಗುವಂತಿಲ್ಲ. ಸರ್ಕಾರಿ ನೌಕರರಿಗೆ ಮಾತ್ರ ಹೊರಗೆ ಹೋಗಲು ಅವಕಾಶ ನೀಡಲಾಗುತ್ತೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಆದೇಶ ನೀಡಿದ್ದಾರೆ.

Published On - 7:39 am, Fri, 17 July 20