ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸ್ಫೋಟ, ನಿನ್ನೆ ಒಂದೇ ದಿನ 70 ಬಲಿ!
ಬೆಂಗಳೂರು: ದಾಖಲೆಗಳು ಛಿದ್ರವಾಗಿವೆ.. ರೆಕಾರ್ಡ್‌ಗಳು ಉಡೀಸ್ ಆಗಿವೆ. ಸೋಂಕಿನ ಸುನಾಮಿಗೆ ಬೆಂಗಳೂರೇ ಥರಥರ ನಡುಗುವಂಥಾಗಿದೆ. ನೀರಿಕ್ಷೆಗಳನ್ನೇ ಹುಸಿಮಾಡಿ ದಾಳಿ ಮಾಡಿದೆ. ಅಂದಾಜನ್ನೇ ಅಳಿಸಿಹಾಕಿ ಅಟ್ಯಾಕ್ ಮಾಡಿದೆ. ಎರಡು ಸಾವಿರ ಗಡಿ ದಾಟಿ ದಾಳಿ ಮಾಡಿರೋ ಕೊರೊನಾ ನಿನ್ನೆ ಒಂದೇ ದಿನ 70 ಜನರನ್ನ ಕೊಂದು ಹಾಕಿದೆ. ಈ ಡೆಡ್ಲಿ ಆಟ್ಯಾಕ್ ನೋಡಿ ಸಿಲಿಕಾನ್ ಸಿಟಿ ಜನರು ಬೆವರಿ ಹೋಗಿದ್ದಾರೆ. ಸೋಂಕಿನ ಸ್ಫೋಟಕ್ಕೆ ಬೆದರಿ ಹೋದ ಬೆಂಗಳೂರು! ಲಾಕ್‌ಡೌನ್‌ಗೂ ಜಗ್ಗದೇ ಮುನ್ನುಗ್ಗಿದೆ. ಸರ್ಕಾರದ ಬಿಗಿರೂಲ್ಸ್‌ಗಳನ್ನ ಬ್ರೇಕ್ ಮಾಡಿದೆ. ರಾಜಧಾನಿ […]
ಬೆಂಗಳೂರು: ದಾಖಲೆಗಳು ಛಿದ್ರವಾಗಿವೆ.. ರೆಕಾರ್ಡ್‌ಗಳು ಉಡೀಸ್ ಆಗಿವೆ. ಸೋಂಕಿನ ಸುನಾಮಿಗೆ ಬೆಂಗಳೂರೇ ಥರಥರ ನಡುಗುವಂಥಾಗಿದೆ. ನೀರಿಕ್ಷೆಗಳನ್ನೇ ಹುಸಿಮಾಡಿ ದಾಳಿ ಮಾಡಿದೆ. ಅಂದಾಜನ್ನೇ ಅಳಿಸಿಹಾಕಿ ಅಟ್ಯಾಕ್ ಮಾಡಿದೆ. ಎರಡು ಸಾವಿರ ಗಡಿ ದಾಟಿ ದಾಳಿ ಮಾಡಿರೋ ಕೊರೊನಾ ನಿನ್ನೆ ಒಂದೇ ದಿನ 70 ಜನರನ್ನ ಕೊಂದು ಹಾಕಿದೆ. ಈ ಡೆಡ್ಲಿ ಆಟ್ಯಾಕ್ ನೋಡಿ ಸಿಲಿಕಾನ್ ಸಿಟಿ ಜನರು ಬೆವರಿ ಹೋಗಿದ್ದಾರೆ.
ಸೋಂಕಿನ ಸ್ಫೋಟಕ್ಕೆ ಬೆದರಿ ಹೋದ ಬೆಂಗಳೂರು! ಲಾಕ್‌ಡೌನ್‌ಗೂ ಜಗ್ಗದೇ ಮುನ್ನುಗ್ಗಿದೆ. ಸರ್ಕಾರದ ಬಿಗಿರೂಲ್ಸ್‌ಗಳನ್ನ ಬ್ರೇಕ್ ಮಾಡಿದೆ. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸೋಂಕಿನ ಜ್ವಾಲಾಮುಕಿ ಸಿಡಿದಿದೆ. ಎಪ್ಪತ್ತು… ಬರೋಬ್ಬರಿ ಎಪ್ಪತ್ತು. ಕಳೆದ 24 ಗಂಟೆಯಲ್ಲೇ ಮಹಾನಗರದಲ್ಲಿ 70 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಆ ಮೂಲಕ ರಾಜಧಾನಿಯಲ್ಲೇ ಒಟ್ಟು ಸಾವಿನ ಸಂಖ್ಯೆ ಐನೂರರ ಗಡಿ ದಾಟಿದೆ. ಅಂದ್ರೆ, ಡೆಡ್ಲಿ ಸೋಂಕಿನಿಂದಲೇ ಸಿಲಿಕಾನ್ ಸಿಟಿಯಲ್ಲಿ ಸತ್ತವರ ಸಂಖ್ಯೆ 507 ಕ್ಕೆ ಏರಿಕೆಯಾಗಿದೆ.
ಮಹಾನಗರದಲ್ಲೇ 25 ಸಾವಿರ ದಾಟಿದ ಸೋಂಕಿತರು! ಇದು ಸಾವಿನ ಸುನಾಮಿ ಅಪ್ಪಳಿಸಿದ್ರೆ ಸೋಂಕಿನ ಸಿಡಿಲು ಕೂಡ ಬಂದಪ್ಪಳಿಸಿದೆ. ಈ ಹಿಂದೆ ಬೆಂಗಳೂರಲ್ಲಿ ನೂರು ಜನ ಸೋಂಕಿತರನ್ನಾಗಿ ಮಾಡಲು ಕೊರೊನಾ ಸರ್ಕಸ್ ಮಾಡಿತ್ತು. ಆದ್ರೆ, ಬೇಕಾಬಿಟ್ಟಿಯಾಗಿ ಓಡಾಡಿ, ಜನ ಸೋಂಕಿಗೆ ಸಹಕರಿಸುತ್ತಿದ್ದಂತೆ ಈಗ ಮಹಾ ಹೊಡೆತವನ್ನೇ ಕೊಡ್ತಿದೆ. ನಿನ್ನೆ ಒಂದೇ ದಿನ ಎರಡು ಸಾವಿರ ಜನರ ಮೇಲೆ ರಕ್ಕಸ ವೈರಸ್ ದಾಳಿ ಮಾಡಿದೆ. ಕ್ರೂರಿಯ ಒಂದೇ ಏಟಿಗೆ 2,344 ಜನ ಸೋಂಕಿತರಾಗಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಬರೋಬ್ಬರಿ 25,288 ಜನ ಸೋಂಕಿತರಾಗಿದ್ದಾರೆ . ಅಷ್ಟಕ್ಕೂ ರಾಜಧಾನಿಯಲ್ಲಿ ಹೆಮ್ಮಾರಿ ಕೊರೊನಾ ಲೆಕ್ಕಾಚಾರವನ್ನ ನೋಡೋದಾದ್ರೆ.
ಬೆಂಗಳೂರು ಕೊರೊನಾ ಡೈರಿ! ರಕ್ಕಸ ಕೊರೊನಾ ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 2,344 ಜನರಿಗೆ ಅಟ್ಯಾಕ್ ಮಾಡಿದೆ. ಇದಕ್ಕಿಂತಲೂ ಶಾಕಿಂಗ್ ವಿಷ್ಯ ಅಂದ್ರೆ 317 ಸೋಂಕಿತರ ಸ್ಥಿತಿ ಗಂಭೀರವಾಗಿದೆ. ಇದರ ಜೊತೆಗೆ ಡೆಡ್ಲಿ ಕೊರೊನಾ ನಿನ್ನೆ 50 ವರ್ಷದೊಳಗಿನ 16 ಸೋಂಕಿತರನ್ನ ಬಲಿ ಪಡೆದಿದೆ. ಇನ್ನೊಂದೆಡೆ ಐಟಿ ಸಿಟಿ ಬೆಂಗಳೂರಿನಲ್ಲೇ 25,288 ಜನರನ್ನ ಸೋಂಕಿತರಾಗಿದ್ರೆ, ನಿನ್ನೆ ಗುಣಮುಖರಾಗಿ ಮನೆ ಸೇರಿದವರು 497 ಜನ ಮಾತ್ರ. ಬರೋಬ್ಬರಿ 18,828 ಸೋಂಕಿತರಿಗೆ ಆಸ್ಪತ್ರೆಯಲ್ಲೇ ಟ್ರೀಟ್‌ಮೆಂಟ್ ನೀಡಲಾಗ್ತಿದೆ .
ಒಟ್ನಲ್ಲಿ ಬೆಂಗಳೂರಿನ ಮೇಲೆ ಸರ್ಜಿಕಲ್ ಸ್ಟ್ರೈಕ್‌ನಂತೆ ದಾಳಿ ಮಾಡ್ತಿರೋ ಕೊರೊನಾ ನೋಡ ನೋಡ್ತಿದ್ದಂತೆ ಬಿಗ್ ಶಾಕ್ ನೀಡಿದೆ. ಅದ್ರಲ್ಲೂ ನಿನ್ನೆ ಒಂದೇ ದಿನ 2 ಸಾವಿರ ಜನರನ್ನ ತೆಕ್ಕೆಗೆ ಬಾಚಿಕೊಂಡು ಆರ್ಭಟ ಮುಂದುವರಿಸಿದೆ. ಲಾಕ್ಡೌನ್ ಮಾಡಿದ್ರೂ ಅಷ್ಟೇ. ಅದೇನ್ ಮೂಗುದಾರ ಹಾಕಿದ್ರೂ ಅಷ್ಟೇ ತಾನ್ ಆಡಿದ್ದೇ ಆಟ ಅಂಥಾ ಕೊರೊನಾ ರಣಕೇಕೆ ಹಾಕ್ತಿದೆ. ಅದೇನೆ ಇರ್ಲಿ, ಈ ನಂಬರ್ ನೋಡಿಯಾದ್ರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಜನ ಕೂಡ ಪಾಠ ಕಲಿಯಬೇಕಿದೆ. ಈ ಸೋಂಕಿನ ದಾಳಿ ಹೀಗೆ ಮುಂದುವರಿದ್ರೆ ಆ ದೇವರು ಕೂಡ ಕಾಪಡೋದು ಕಷ್ಟ.