ಬರಲಿದೆ Indian Railway Finance Corporation IPO: ಹೇಗಿದೆ ಈ ಕಂಪೆನಿ?

ಕಳೆದ ವರ್ಷ ಸಾಲುಸಾಲು ಐಪಿಒಗಳು ಮಾರುಕಟ್ಟೆಗೆ ಬಂದಿದ್ದವು. ಈ ವರ್ಷದ ಮೊದಲ ಐಪಿಒ ಆಗಿ ಇಂಡಿಯನ್​ ರೈಲ್ವೆ ಫೈನಾನ್ಸ್​ ಕಾರ್ಪೋರೇಷನ್ ಬರುತ್ತಿದೆ. ಈ ಕಂಪೆನಿ ಕೆಲಸ ಏನು? ಈ ಕಂಪೆನಿ ಹೇಗಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಬರಲಿದೆ Indian Railway Finance Corporation IPO: ಹೇಗಿದೆ ಈ ಕಂಪೆನಿ?
ಸಾಂದರ್ಭಿಕ ಚಿತ್ರ
Edited By:

Updated on: Jan 18, 2021 | 7:19 AM

ಸರ್ಕಾರಿ ಸ್ವಾಮ್ಯದ ಇಂಡಿಯನ್​ ರೈಲ್ವೆ ಫೈನಾನ್ಸ್​ ಕಾರ್ಪೋರೇಷನ್ (IRFC)​ ಐಪಿಒಗೆ ಬಿಡ್​ ಮಾಡಲು ನಾಳೆಯಿಂದ ಸಾರ್ವಜನಿಕರಿಗೆ ಅವಕಾಶ ಮುಕ್ತವಾಗಲಿದೆ. ಬಿಡ್​ ಮಾಡಲು ಜನವರಿ 20 ಕೊನೆಯ ದಿನಾಂಕ. ಇದು 2021ರ ಮೊದಲ ಐಪಿಒ ಅನ್ನೋದು ವಿಶೇಷ.

ಆರಂಭಿಕವಾಗಿ IRFC ಸುಮಾರು 1,78 ಕೋಟಿ (1,78,20,69,000) ಷೇರುಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಈ ಪೈಕಿ ಸುಮಾರು 1,18 ಕೋಟಿ (1,18,80,46,000) ಹೊಸ ಷೇರುಗಳಾದರೆ, ಸುಮಾರು 59 ಕೋಟಿ (59,40,23,000) ಷೇರುಗಳನ್ನು ಸರ್ಕಾರ ಮಾರಾಟ ಮಾಡುತ್ತಿದೆ.

ಷೇರುಗಳ ಬ್ಯಾಂಡ್​ ತುಂಬಾನೇ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುತ್ತಿದೆ. ಪ್ರತಿ ಷೇರುಗಳ ಬ್ಯಾಂಡ್​ ಅನ್ನು 25-26 ರೂಪಾಯಿ ಎಂದು ನಿಗದಿ ಮಾಡಲಾಗಿದೆ. ಕನಿಷ್ಠ ಬಿಡ್​ ದರ 14,950 ರೂಪಾಯಿ (1 ಲಾಟ್)​ ಹಾಗೂ ಗರಿಷ್ಠ ಬಿಡ್​ ದರ 1,94,350 (13 ಲಾಟ್) ರೂಪಾಯಿ. ಅಂದರೆ, ಒಂದು ಲಾಟ್​ನಲ್ಲಿ 575 ಷೇರುಗಳು ಇರಲಿವೆ. ಭವಿಷ್ಯದಲ್ಲಿ ಉಂಟಾಗುವ ಹಣದ ಅವಶ್ಯಕತೆಗಳಿಗೆ IRFC ಈ ಹಣ ಬಳಕೆ ಮಾಡಿಕೊಳ್ಳಲಿದೆ.

ಕಂಪೆನಿ ಕೆಲಸ ಏನು?
ಭಾರತೀಯ ರೈಲ್ವೆಗೆ IRFC ಸಾಲ ನೀಡುವ ಕೆಲಸ ಮಾಡುತ್ತದೆ. ಅಂದರೆ, ಬಜೆಟ್​ನಲ್ಲಿ ರೈಲ್ವೆಗೆ ಒಂದಷ್ಟು ಹಣವನ್ನು ಸರ್ಕಾರ ಮೀಸಲಿಡುತ್ತದೆ. ಕೊರತೆ ಆಗುವ ಹಣವನ್ನು IRFC ಬಳಿ ಭಾರತೀಯ ರೈಲ್ವೆ ಸಾಲ ಪಡೆಯಲಿದೆ. ಬೋಗಿ​​ ಹಾಗೂ ಇತರ ಅವಶ್ಯಕತೆ ಎದುರಾದಾಗ ಭಾರತೀಯ ರೈಲ್ವೆ IRFC ಸಂಪರ್ಕಿಸುತ್ತದೆ. IRFC ಬೋಗಿಯನ್ನು 30 ವರ್ಷಗಳ ಗುತ್ತಿ​ಗೆ ನೀಡುತ್ತದೆ. ಭಾರತೀಯ ರೈಲ್ವೆಯಿಂದ IRFC ಗುತ್ತಿಗೆ ಹಣವನ್ನೂ ಪಡೆಯುತ್ತದೆ. ಇದು IRFCಯ ಪ್ರಮುಖ ಕೆಲಸ.

ವರ್ಷದಿಂದ ವರ್ಷಕ್ಕೆ ಈ ಸಂಸ್ಥೆಯ ಆದಾಯ ಹೆಚ್ಚುತ್ತಿದೆ. 2018ರಲ್ಲಿ IRFC ನಿವ್ವಳ ಆದಾಯ 2,569 ಕೋಟಿ ರೂಪಾಯಿ ಇತ್ತು. 2019ರಲ್ಲಿ ಈ ಆದಾಯ 2,804 ಕೋಟಿ ರೂಪಾಯಿಗೆ ಏರಿಕೆ ಆಗಿತ್ತು. 2020ರಲ್ಲಿ ಈ ಆದಾಯ 3,258ಕ್ಕೆ ಜಿಗಿದಿದೆ. ವರ್ಷದಿಂದ ವರ್ಷಕ್ಕೆ ನಿವ್ವಳ ಆದಾಯ ಹೆಚ್ಚುತ್ತಿದೆ.

ಚಿಕ್ಕ ರೌಂಡ್​ ಅಪ್​:
ಐಪಿಒ ಹೆಸರು: ಇಂಡಿಯನ್​ ರೈಲ್ವೇ ಫೈನಾನ್ಸ್​ ಕಾರ್ಪೋರೇಷನ್
ಬಿಡ್​ ದಿನಾಂಕ: 181-2021ರಿಂದ 20-01-2021ರವರೆಗೆ
ಷೇರುಗಳ ಬೆಲೆ: ಪ್ರತಿ ಷೇರಿಗೆ 25-26 ರೂಪಾಯಿ
ಬಿಡ್ ದರ: ಕನಿಷ್ಠ ಬಿಡ್​ ದರ 14, 950 ರೂಪಾಯಿ (1 ಲಾಟ್)​ ಹಾಗೂ ಗರಿಷ್ಠ ಬಿಡ್​ ದರ 1,94,350 (13 ಲಾಟ್) ರೂಪಾಯಿ
ಹಂಚಿಕೆ ಆಗಲಿರುವ ಒಟ್ಟು ಷೇರುಗಳು: 1,78,20,69,000

ನೀವು ಈಗಷ್ಟೇ ಕೆಲಸಕ್ಕೆ ಸೇರಿ ಹಣ ಉಳಿಸುವ ಕುರಿತು ಯೋಚಿಸುತ್ತಿದ್ದರೆ ಈ ಲೇಖನ ಓದಿ ಬಿಡಿ..

ಕಾಸಿದ್ರೆ ಕೈಲಾಸ | 15 ಸಾವಿರ ಸಂಬಳದಲ್ಲಿ 12 ಸಾವಿರದ ಮೊಬೈಲ್ ಕೊಳ್ಳೋದು ಹೇಗೆ?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us