ಷೇರು ಮಾರುಕಟ್ಟೆಗೆ ‘ವ್ಯಾಕ್ಸಿನ್’ ಚುಚ್ಚುಮದ್ದು! ಸಾರ್ವಕಾಲಿಕ ದಾಖಲೆ.. 49,100 ದಾಟಿದ ಸೆನ್ಸೆಕ್ಸ್
ಡಿ-ಮಾರ್ಟ್ ಆಪರೇಟರ್ Avenue Supermarts ಷೇರು ಮೌಲ್ಯ ಶೇ. 2.8 ಏರಿಕೆ ಕಂಡಿದೆ. ಮೂರನೇ ತ್ರೈಮಾಸಿಕದಲ್ಲಿ ಸಂಸ್ಥೆಯ ಲಾಭ ಶೇ.16.4 ಏರಿಕೆ ಕಂಡಿದ್ದು ಇದಕ್ಕೆ ಕಾರಣ.

ಭಾರತದಲ್ಲಿ ಕೊರೊನಾ ವೈರಸ್ ಔಷಧ ಬಳಕೆ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಅಲ್ಲದೆ, ಕೊರೊನಾ ಎರಡನೇ ಅಲೆ ಬಗ್ಗೆ ಇದ್ದ ಭೀತಿ ಕೂಡ ಮಾಯವಾಗುತ್ತಿದೆ. ಹೀಗಾಗಿ, ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಮುಂದುವರಿದಿದೆ. ಇಂದು ಮುಂಜಾನೆಯೇ ಭಾರತದ ಷೇರು ಮಾರುಕಟ್ಟೆ ಏರಿಕೆ ಹಾದಿ ಹಿಡಿದಿದೆ.
ಸೋಮವಾರ ಮಾರುಕಟ್ಟೆ ಸಾರ್ವಕಾಲಿಕ ದಾಖಲೆಯೊಂದಿಗೆ ಆರಂಭ ಕಂಡಿತು. ಸೆನ್ಸೆಕ್ಸ್ ಶೇ. 0.67 ಅಥವಾ 327 ಅಂಶ ಏರಿಕೆ ಕಂಡು, 49,109 ಅಂಕಕ್ಕೆ ತಲುಪಿತು. ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಸೆನ್ಸೆಕ್ 49 ಸಾವಿರದ ಗಡಿ ದಾಟಿದ್ದು ಇದೇ ಮೊದಲು. ಇನ್ನು ನಿಫ್ಟಿ ಶೇ. 0.58 ಅಥವಾ 83 ಅಂಶ ಏರಿಕೆ ಕಂಡು 14, 430 ಅಂಕ ತಲುಪಿದೆ.
ಡಿ-ಮಾರ್ಟ್ ಆಪರೇಟರ್ Avenue Supermarts ಷೇರು ಮೌಲ್ಯ ಶೇ. 2.8 ಏರಿಕೆ ಕಂಡಿದೆ. ಮೂರನೇ ತ್ರೈಮಾಸಿಕದಲ್ಲಿ ಸಂಸ್ಥೆಯ ಲಾಭ ಶೇ.16.4 ಏರಿಕೆ ಕಂಡಿದ್ದು ಇದಕ್ಕೆ ಕಾರಣ. ಮಾಹಿತಿ-ತಂತ್ರಜ್ಞಾನದ ಷೇರುಗಳು ಕೂಡ ಇಂದು ದೊಡ್ಡ ಮಟ್ಟದಲ್ಲಿ ಏರಿಕೆ ಕಾಣುತ್ತಿವೆ.
ದೇಶದಲ್ಲಿ ಜನವರಿ 16ರಿಂದ ಕೊರೊನಾ ಲಸಿಕೆ ಹಂಚಿಕೆ ಮಾಡುವ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಇದು ಟ್ರೇಡರ್ಗಳಲ್ಲಿ ಹೊಸ ಭರವಸೆ ಹುಟ್ಟಿಸಿದೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯವೇ? ಇಲ್ಲಿದೆ ಸಂಪೂರ್ಣ ಮಾಹಿತಿ
Published On - 11:12 am, Mon, 11 January 21




