ಜನವರಿ 20ರಿಂದ Indigo Paints ಐಪಿಒ ಬಿಡ್ಡಿಂಗ್​ ಆರಂಭ: ಹೇಗಿದೆ ಗೊತ್ತಾ ಈ ಕಂಪೆನಿ?

ಭಾರತದ ಪ್ರಮುಖ ಪೇಂಟ್​ ಕಂಪೆನಿಗಳಲ್ಲಿ ಇಂಡಿಗೊ ಪೇಂಟ್ಸ್ ಕೂಡ ಒಂದು. ಇಂಡಿಗೊ ಪೇಂಟ್ಸ್ ಜೋಧಪುರ, ಕೊಚ್ಚಿ ಹಾಗೂ ಪುದುಕೊಟ್ಟೈನಲ್ಲಿ ಪೇಂಟ್​ ತಯಾರಿಕಾ ಘಟಕ ಹೊಂದಿದೆ. ಐಪಿಒ ಹಣ ಪುದುಕೊಟ್ಟೈ ಘಟಕ ವಿಸ್ತರಣೆಗೆ ಬಳಕೆ ಆಗಲಿದೆ.

ಜನವರಿ 20ರಿಂದ Indigo Paints ಐಪಿಒ ಬಿಡ್ಡಿಂಗ್​ ಆರಂಭ: ಹೇಗಿದೆ ಗೊತ್ತಾ ಈ ಕಂಪೆನಿ?
ಇಂಡಿಗೊ ಪೇಂಟ್ಸ್​ ಐಪಿಒ ಘೋಷಣೆಯಾಗಿದೆ
Edited By:

Updated on: Jan 18, 2021 | 7:48 AM

ಮುಂಬೈ: ಹೊಸ ವರ್ಷದ ಎರಡನೇ ಐಪಿಒ ಆಗಿ ಇಂಡಿಗೊ ಪೇಂಟ್ಸ್​ ಮಾರುಕಟ್ಟೆಗೆ ಕಾಲಿಡುತ್ತಿದೆ. ಜನವರಿ 20ರಿಂದ ಸಾರ್ವಜನಿಕರು ಈ ಐಪಿಒಗೆ ಬಿಡ್​ ಮಾಡಬಹುದಾಗಿದೆ.

1,170 ಕೋಟಿ ರೂಪಾಯಿ ಮೌಲ್ಯದ ಐಪಿಒ ಮಾರುಕಟ್ಟೆಗೆ ಬಿಡುಗಡೆ ಆಗುತ್ತಿದೆ. ಈ ಷೇರಿನ ಬ್ಯಾಂಡ್​ 1488-1490 ರೂಪಾಯಿ ಇದೆ. ಕನಿಷ್ಠ ಬಿಡ್​ ಮೊತ್ತ 10 ಷೇರು (1ಲಾಟ್) ಇರಲಿದೆ. ಜನವರಿ 20ಕ್ಕೆ ಬಿಡ್ಡಿಂಗ್​ ಆರಂಭವಾದರೆ, ಜನವರಿ 22ರಂದು ಬಿಡ್ಡಿಂಗ್​ ಪೂರ್ಣಗೊಳ್ಳಲಿದೆ.

ಭಾರತದ ಪ್ರಮುಖ ಪೇಂಟ್​ ಕಂಪೆನಿಗಳಲ್ಲಿ ಇಂಡಿಗೊ ಪೇಂಟ್ಸ್ ಕೂಡ ಒಂದು. ಇಂಡಿಗೊ ಪೇಂಟ್ಸ್ ಜೋಧಪುರ, ಕೊಚ್ಚಿ ಹಾಗೂ ಪುದುಕೊಟ್ಟೈನಲ್ಲಿ ಪೇಂಟ್​ ತಯಾರಿಕಾ ಘಟಕ ಹೊಂದಿದೆ. ಐಪಿಒ ಹಣ ಪುದುಕೊಟ್ಟೈ ಘಟಕ ವಿಸ್ತರಣೆಗೆ ಬಳಕೆ ಆಗಲಿದೆ.

ಇಂಡಿಗೊ ಪೇಂಟ್ಸ್​ ವಿವಿಧ ಮಾದರಿಯ ಪೇಂಟ್​ ತಯಾರಿಕೆ ಮಾಡುತ್ತದೆ. ಭಾರತದ ಪೇಂಟ್​ ತಯಾರಿಕಾ ಕಂಪೆನಿಗಳ ಪೈಕಿ ಇಂಡಿಗೋ ಪೇಂಟ್ಸ್​ ಐದನೇ ಸ್ಥಾನದಲ್ಲಿದೆ. ಪೇಂಟ್​ಗೆ ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳು ಎಲ್ಲಿ ಸಿಗಲಿದೆಯೋ ಅಲ್ಲಿಯೇ ಈ ಸಂಸ್ಥೆ ಘಟಕ ಸ್ಥಾಪನೆ ಮಾಡಿದೆ. ಹೀಗಾಗಿ, ಸಂಸ್ಥೆಯ ವೆಚ್ಚ ಕಡಿಮೆ ಆಗುತ್ತಿದೆ. ಇನ್ನು, ವರ್ಷದಿಂದ ವರ್ಷಕ್ಕೆ ಕಂಪೆನಿಯ ಲಾಭ ಹೆಚ್ಚುತ್ತಿದೆ.

ನೀವು ಈಗಷ್ಟೇ ಕೆಲಸಕ್ಕೆ ಸೇರಿ ಹಣ ಉಳಿಸುವ ಕುರಿತು ಯೋಚಿಸುತ್ತಿದ್ದರೆ ಈ ಲೇಖನ ಓದಿ ಬಿಡಿ..

ಕಾಸಿದ್ರೆ ಕೈಲಾಸ | 15 ಸಾವಿರ ಸಂಬಳದಲ್ಲಿ 12 ಸಾವಿರದ ಮೊಬೈಲ್ ಕೊಳ್ಳೋದು ಹೇಗೆ?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us