ಹಲವರ ಪಾಲಿಗೆ ಅತ್ಯಂತ ಸುರಕ್ಷಿತ ಹಾಗೂ ಜನಪ್ರಿಯ ಹೂಡಿಕೆಗಳಲ್ಲಿ ಒಂದು ಎನಿಸಿಕೊಂಡಿದೆ ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್ಸ್). ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೇರಿದಂತೆ ಎಲ್ಲ ಟಾಪ್ ಬ್ಯಾಂಕ್ಗಳಲ್ಲೂ ಅಲ್ಪಾವಧಿ ಮತ್ತು ದೀರ್ಘಾವಧಿ ಠೇವಣಿಗಳನ್ನು ಇಡಬಹುದು. ಅಗತ್ಯಕ್ಕೆ ತಕ್ಕಂತೆ ಬೇಕಾದ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಬ್ಯಾಂಕ್ಗಳನ್ನು ಹೊರತುಪಡಿಸಿ ಅಂಚೆ ಕಚೇರಿಗಳಲ್ಲೂ ಎಫ್ಡಿ ಡೆಪಾಸಿಟ್ ಆರಂಭಿಸಬಹುದು. ಅಂಚೆ ಕಚೇರಿಯ ಟೈಮ್ ಡೆಪಾಸಿಟ್ಗೆ ಪ್ರತಿ ಮೂರು ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡಲಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫಿಕ್ಸೆಡ್ ಡೆಪಾಸಿಟ್ಸ್
ಈ ತಿಂಗಳ ಆರಂಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಫಿಕ್ಸೆಡ್ ಡೆಪಾಸಿಟ್ಸ್ಗಳ ಮೇಲಿನ ಬಡ್ಡಿ ದರವನ್ನು ಸ್ವಲ್ಪ ಮಟ್ಟಿಗೆ ಪರಿಷ್ಕರಣೆ ಮಾಡಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 10ರಿಂದ ಎಸ್ಬಿಐನಿಂದ ಹಿರಿಯ ನಾಗರಿಕರಿಗೆ ಶೇ 5.40 ವಾರ್ಷಿಕ ರಿಟರ್ನ್ ನೀಡುತ್ತಿದೆ. ಇತರ ರೀಟೇಲ್ ಡೆಪಾಸಿಟ್ ಗ್ರಾಹಕರಿಗೆ ಅಥವಾ 2 ಕೋಟಿ ರೂ. ಒಳಗಿನ ಡೆಪಾಸಿಟ್ಗೆ- ಮೆಚ್ಯೂರಿಟಿ ಅವಧಿ ಒಂದು ವರ್ಷ ಮೇಲ್ಪಟ್ಟು ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಡೆಪಾಸಿಟ್ಗೆ ಶೇ 4.90 ಬಡ್ಡಿ ನೀಡುತ್ತಿದೆ. ಇದು sbi.co.in ವೆಬ್ಸೈಟ್ನಿಂದ ತಿಳಿದುಬಂದಿರುವ ಮಾಹಿತಿ. ಅದು ಸದ್ಯಕ್ಕೆ ನೀಡುತ್ತಿರುವ ಶೇ 5.60 ಮತ್ತು ಶೇ 5.10ಗಿಂತ 20 ಬೇಸಿಸ್ ಪಾಯಿಂಟ್ ಕಡಿಮೆ ಆಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈಚಿನ ಬಡ್ಡಿ ದರ ಹೀಗಿದೆ:
ಮೆಚ್ಯೂರಿಟಿ ಅವಧಿ ಸಾರ್ವಜನಿಕರಿಗೆ ಹಿರಿಯ ನಾಗರಿಕರಿಗೆ
7ರಿಂದ 45 ದಿನಗಳು ಶೇ 2.90 ಶೇ 3.40
46ರಿಂದ 179 ದಿನಗಳು ಶೇ 3.90 ಶೇ 4.40
180ರಿಂದ 210 ದಿನಗಳು ಶೇ 4.40 ಶೇ 4.90
211ರಿಂದ 1 ವರ್ಷಕ್ಕಿಂತ ಕಡಿಮೆ ಶೇ 4.40 ಶೇ 4.90
1 ವರ್ಷದಿಂದ 2 ವರ್ಷದೊಳಗೆ ಶೇ 5.10 ಶೇ 5.60
2 ವರ್ಷದಿಂದ 3 ವರ್ಷದೊಳಗೆ ಶೇ 5.10 ಶೇ 5.60
3 ವರ್ಷದಿಂದ 5 ವರ್ಷದೊಳಗೆ ಶೇ 5.30 ಶೇ 5.80
5 ವರ್ಷದಿಂದ 10 ವರ್ಷದೊಳಗೆ ಶೇ 5.40 ಶೇ 6.20
ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ಸ್
ಅಂಚೆ ಕಚೇರಿಯ ಟರ್ಮ್ ಡೆಪಾಸಿಟ್ ಸ್ಕೀಮ್ಗಳು ಬ್ಯಾಂಕ್ ಎಫ್.ಡಿ.ಗಳ ರೀತಿಯಲ್ಲೇ ಇರುತ್ತವೆ. ಒಂದು ವರ್ಷದಿಂದ 5 ವರ್ಷದ ಅವಧಿಗೆ ಡೆಪಾಸಿಟ್ ಮಾಡಬಹುದು. ಅಂಚೆ ಕಚೇರಿ ಠೇವಣಿ ಯೋಜನೆ ಏಪ್ರಿಲ್ 1, 2021ರಂದು ಪರಿಷ್ಕರಣೆ ಆಗಿದೆ. ಪೋಸ್ಟ್ ಆಫೀಸ್ನಲ್ಲಿ 1ರಿಂದ 3 ವರ್ಷದ ಅವಧಿಯ ಠೇವಣಿಗೆ ವಾರ್ಷಿಕ ಶೇ 5.5ರಷ್ಟು ಬಡ್ಡಿ ನೀಡಲಾಗುತ್ತದೆ. 5 ವರ್ಷದ ಅವಧಿಗೆ ಶೇ 6.7ರಷ್ಟು ಬಡ್ಡಿ ನೀಡುತ್ತದೆ.
ಇವುಗಳಿಗೆ ಭಾರತ ಸರ್ಕಾರದ ಬೆಂಬಲ ಇದೆ. ಆದ್ದರಿಂದ ಮೆಚ್ಯೂರಿಟಿ ಮತ್ತು ಅಸಲು ಮೊತ್ತವನ್ನು ಪಡೆಯುವುದು ಸಮಸ್ಯೆಯಲ್ಲ. ಹೂಡಿಕೆದಾರರ ಕೈಗೆ ಬರುವ ಬಡ್ಡಿ ಪೂರ್ಣ ಪ್ರಮಾಣದಲ್ಲಿ ತೆರಿಗೆ ಬೀಳುವಂತಾದರೂ 5 ವರ್ಷಗಳ ಅವಧಿಯ ಡೆಪಾಸಿಟ್ಸ್ಗೆ ಆದಾಯ ತೆರಿಗೆ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ.
ಇದನ್ನೂ ಓದಿ: SBI Multi Option Deposit Scheme: ಎಸ್‌ಬಿಐ ಮಲ್ಟಿ ಆಪ್ಷನ್ ಡೆಪಾಸಿಟ್ ಸ್ಕೀಮ್ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು
(Here is the calculation of interest on SBI vs post office term deposit returns.
Published On - 4:20 pm, Tue, 13 April 21