ಅತ್ಯಂತ ಸುರಕ್ಷಿತ ಆ್ಯಪಲ್​ ಫೋನ್​ನಲ್ಲಿ.. ಹ್ಯಾಕರ್​ಗಳಿಗೆ ನೆರವಾಗುವಂಥ ಅತಿ ದೊಡ್ಡ ದೋಷ ಪತ್ತೆ!

ಆ್ಯಪಲ್ ಸಂಸ್ಥೆ ಸಿದ್ಧಪಡಿಸುವ ಮೊಬೈಲ್​ಗಳು ಅತಿ ಸುರಕ್ಷಿತ. ಈ ಮೊಬೈಲ್​ಗಳಿಂದ ಮಾಹಿತಿ ಕಳುವು ಆಗುವುದು ಅಷ್ಟು ಸುಲಭವಲ್ಲ ಎಂಬುವುದು ಅನೇಕರ ನಂಬಿಕೆ. ಆದರೆ, ಕೆಲವೊಮ್ಮೆ ಆ್ಯಪಲ್ ಸಂಸ್ಥೆಯ ಮೊಬೈಲ್​​ಗಳಲ್ಲೂ ಸಹ  ಕೆಲವೊಂದು ಲೋಪಗಳು (ಬಗ್​) ಇರುವುದು ಕಂಡುಬಂದಿದೆ.

ಅತ್ಯಂತ ಸುರಕ್ಷಿತ ಆ್ಯಪಲ್​ ಫೋನ್​ನಲ್ಲಿ.. ಹ್ಯಾಕರ್​ಗಳಿಗೆ ನೆರವಾಗುವಂಥ ಅತಿ ದೊಡ್ಡ ದೋಷ ಪತ್ತೆ!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 07, 2022 | 5:40 PM

ಆ್ಯಪಲ್ ಸಂಸ್ಥೆ ಸಿದ್ಧಪಡಿಸುವ ಮೊಬೈಲ್​ಗಳು ಅತಿ ಸುರಕ್ಷಿತ. ಈ ಮೊಬೈಲ್​ಗಳಿಂದ ಮಾಹಿತಿ ಕಳುವು ಆಗುವುದು ಅಷ್ಟು ಸುಲಭವಲ್ಲ ಎಂಬುವುದು ಅನೇಕರ ನಂಬಿಕೆ. ಆದರೆ, ಕೆಲವೊಮ್ಮೆ ಆ್ಯಪಲ್ ಸಂಸ್ಥೆಯ ಮೊಬೈಲ್​​ಗಳಲ್ಲೂ ಸಹ  ಕೆಲವೊಂದು ಲೋಪಗಳು (ಬಗ್​) ಇರುವುದು ಕಂಡುಬಂದಿದೆ. ಅಂಥದ್ದೇ ಒಂದು ಉದಾಹರಣೆ ಇಲ್ಲಿದೆ ನೋಡಿ.

ವರ್ಷದ ಆರಂಭದಲ್ಲಿ ಆ್ಯಪಲ್ ಮೊಬೈಲ್​ನಲ್ಲಿ ಸಮಸ್ಯೆ ಒಂದು ಕಾಣಿಸಿಕೊಂಡಿತ್ತು. ಆ್ಯಪಲ್ ಫೋನ್​​ ಬಳಸುವ iOS​ ಕರ್ನಲ್ ಆಪರೇಟಿಂಗ್ ಸಿಸ್ಟಂನಲ್ಲಿ​​ ಕಾಣಿಸಿಕೊಂಡ ಈ ಲೋಪ ಅಥವಾ ಬಗ್​ನ ಸಹಾಯದಿಂದ ಹ್ಯಾಕರ್​ಗಳು ವೈ-ಫೈ ಸಹಾಯದಿಂದ ಮೊಬೈಲ್​ನ ಆ್ಯಕ್ಸೆಸ್​ ಪಡೆದುಕೊಳ್ಳಬಹುದಿತ್ತು. ಆ್ಯಕ್ಸೆಸ್​ ಪಡೆದ ನಂತರ ಮೊಬೈಲ್​ನಲ್ಲಿದ್ದ ಫೈಲ್​ಗಳನ್ನುಸುಲಭವಾಗಿ ನಾಶ ಮಾಡುವ ಅವಕಾಶವೂ ಇರುತ್ತಿತ್ತು. ಉದಾಹರಣೆಗೆ, ನೀವು ನಿಮ್ಮ ಆ್ಯಪಲ್​ ಫೋನ್​ನಲ್ಲಿ ಮುಖ್ಯವಾದ ಫೈಲ್​ಗಳನ್ನು (ಫೋಟೋ, ವಿಡಿಯೋ) ಇಟ್ಟುಕೊಂಡಿರುತ್ತೀರಿ ಎಂದು ಅಂದುಕೊಳ್ಳೋಣ. ಆಗ, ಈ ಬಗ್​​ನ ನೆರವಿನಿಂದ ಹ್ಯಾಕರ್​ಗಳು ಆ ಫೈಲ್​ಗಳನ್ನು ವಿಶ್ವದ ಯಾವುದೇ ಮೂಲೆಯಿಂದಲೂ ಡಿಲೀಟ್ ಅಥವಾ ನಾಶ​  ಮಾಡುವ ಅವಕಾಶ ಸಿಗುತ್ತಿತ್ತು.

ಮತ್ತೊಂದು ಶಾಕಿಂಗ್​ ವಿಚಾರ ಎಂದರೆ, ಈ ಬಗ್​​ನಿಂದ ನಿಮ್ಮ ಮೊಬೈಲ್​ ಸಮೀಪದಲ್ಲಿರುವ ಮತ್ತೊಂದು ಆ್ಯಪಲ್ ಫೋನ್​​ನ ಆ್ಯಕ್ಸೆಸ್​ ಕೂಡ ಪಡೆಯಬಹುದಾಗಿತ್ತು. ಅದು ಕೂಡ, ಯಾವುದೇ ಹ್ಯಾಕರ್​ನ ನೆರವಿಲ್ಲದೆ. ಕೊರೊನಾ ವೈರಸ್​ ಹೇಗೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೋ, ಇದು ಕೂಡ ಹಾಗೆ. ಹಾಗಾಗಿ, ಇದರಿಂದ ಆ ಮೊಬೈಲ್​ನ ಫೈಲ್​ಗಳನ್ನು ಕೂಡ ಡಿಲೀಟ್​ ಅಥವಾ ನಾಶ ಮಾಡಬಹುದಾದ ಸಾಧ್ಯತೆ ಇತ್ತು.

ಅಂದ ಹಾಗೆ, ಇಯನ್​ ಬೀರ್​ ಎಂಬ ಕಂಪ್ಯೂಟರ್​ ತಜ್ಞ ಈ ಲೋಪವನ್ನು ಮೊದಲು ಪತ್ತೆ ಹಚ್ಚಿದರು. ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡ ಌಪಲ್​ ಕಂಪನಿ ಸಮಸ್ಯೆಯನ್ನು ಸರಿಪಡಿಸಿದೆ. ಆ್ಯಪಲ್ ಕಂಪನಿ​ ಇತಿಹಾಸದಲ್ಲೇ ಇದು ಅತಿದೊಡ್ಡ ದೋಷ​ ಎಂದು ಪರಿಗಣಿಸಲಾಗಿದೆ. ಆ್ಯಪಲ್​ ಮೊಬೈಲ್​ಗಳೆಂದರೆ ಅತ್ಯಂತ ಸುರಕ್ಷಿತ ಫೋನ್​​ ಎಂದೇ ಹೆಸರುವಾಸಿ. ಇದೇ ಕಾರಣಕ್ಕೆ ಜನರು ಇದರ ಖರೀದಿಗೆ ಹೆಚ್ಚು ಒಲವು ತೋರುತ್ತಾರೆ.

ವಿಶ್ವದಲ್ಲೇ ಮೊದಲ ತೇಲುವ ಆ್ಯಪಲ್ ಸ್ಟೋರ್.. ಎಲ್ಲಿ?

Published On - 4:50 pm, Sat, 5 December 20